ಐಎಸ್‌ಎಲ್: ಬೆಂಗಳೂರು ಎಫ್‌ಸಿಗೆ ಆಘಾತ ನೀಡಿದ ಹೈದರಾಬಾದ್ ಎಫ್‌ಸಿ

ಇಂಡಿಯನ್ ಸೂಪರ್ ಲೀಗ್‌ನ 22ನೇ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಹಾಗೂ ಹೈದರಾಬಾದ್ ಎಫ್‌ಸಿ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮತ್ತೊಮ್ಮೆ ಬಿಎಫ್‌ಸಿ ತಂಡ ಸೋಲಿನ ಮೂಲಕ ನಿರಾಸೆ ಅನುಭವಿಸಿದೆ. ಬೆಂಗಳೂರು ವಿರುದ್ಧ ಹೈದರಾಬಾದ್ ಎಫ್‌ಸಿ ತಂಡ 1-0 ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಬಿಎಫ್‌ಸಿ ತಂಡ ಆಡಿದ ಐದು ಪಂದ್ಯಗಳ ಪೈಕಿ ಮೂರನೇ ಸೋಲು ಅನುಭವಿಸಿದೆ.

ಪಂದ್ಯ ಆರಂಭವಾದ ಏಳನೇ ನಿಮಿಷದಲ್ಲಿಯೇ ಹೈದರಾಬಾದ್ ಎಫ್‌ಸಿ ತಂಡ ಗೋಲು ದಾಖಲಿಸಿ ಪಂದ್ಯದಲ್ಲಿ ಮುನ್ನಡೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ನೈಜೀರಿಯನ್ ಮೂಲದ ಫುಟ್ಬಾಲ್ ಆಟಗಾರ ಬಾರ್ತಲೋಮೆವ್ ಒಗ್ಬೆಚೆ ಈ ಗೋಲು ಗಳಿಸುವ ಮೂಲಕ ಹೈದರಾಬಾದ್ ತಂಡಕ್ಕೆ ಮುನ್ನಡೆ ಒದಗಿಸಿದರು. ಈ ಮುನ್ನಡೆಯನ್ನು ಹೈದರಾಬಾದ್ ಎಫ್‌ಸಿ ತಂಡ ಕಡೆಯವರೆಯೂ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಬೆಂಗಳೂರು ಎಫ್‌ಸಿ ಪಂದ್ಯದುದ್ದಕ್ಕೂ ಯಾವುದೇ ಗೋಲು ದಾಖಲಿಸುವಲ್ಲಿ ಸಫಲವಾಗಲಿಲ್ಲ. ಅಂತಿಮವಾಗಿ ಪಂದ್ಯದಲ್ಲಿ 0-1 ಅಂತರದಿಂದ ಸೋಲು ಒಪ್ಪಿಕೊಂಡಿದೆ.

2022 ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್: ರಾಜತಾಂತ್ರಿಕ ಬಹಿಷ್ಕಾರಕ್ಕೆ ಆಸ್ಟ್ರೇಲಿಯಾ ನಿರ್ಧಾರ2022 ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್: ರಾಜತಾಂತ್ರಿಕ ಬಹಿಷ್ಕಾರಕ್ಕೆ ಆಸ್ಟ್ರೇಲಿಯಾ ನಿರ್ಧಾರ

ಈ ಮೂಲಕ ಬಿಎಫ್‌ಸಿ ಕಳೆದ ನಾಲ್ಕು ಪಂದ್ಯಗಳಲ್ಲಿ ಗೆಲುವಿನ ರುಚಿ ನೋಡಲು ಸಾಧ್ಯವಾಗದಂತಾಗಿದೆ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಬಿಎಫ್‌ಸಿ ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ವಿರುದ್ಧ 4-2 ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ ಬಳಿಕ ಒಂದು ಪಂದ್ಯದಲ್ಲಿಯೂ ಗೆಲುವು ಸಾಧಿಸಲು ವಿಫಲವಾಗಿದೆ. ಮೂರು ಪಂದ್ಯಗಳಲ್ಲಿ ಸೋಲು ಕಂಡಿದ್ದರೆ ಒಂದು ಪಂದ್ಯವನ್ನು ಡ್ರಾಗೊಳಿಸಿದೆ.

ಇನ್ನು ಈ ಸೋಲಿನೊಂದಿಗೆ ಬೆಂಗಳೂರು ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಮತ್ತಷ್ಟು ಕುಸಿತವನ್ನು ಕಂಡಿದೆ. 8ನೇ ಸ್ಥಾನದಲ್ಲಿದ್ದ ಬಿಎಫ್‌ಸಿ ತಂಡ 9ನೇ ಸ್ಥಾನಕ್ಕೆ ಕುಸಿದಿದೆ. ಇತ್ತ ಹೈದರಾಬಾದ್ ಎಪ್‌ಸಿ ತಂಡ ಬಿಎಫ್‌ಸಿ ವಿರುದ್ಧ ಸಾಧಿಸಿದ ಈ ಗೆಲುವಿನಿಂದಾಗಿ ಭಾರೀ ಏರಿಕೆ ಕಂಡಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡು ಪಂದ್ಯ ಗೆದ್ದಿರುವ ಹೈದರಾಬಾದ್ ಎಫ್‌ಸಿ ತಂಡ 7ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಏರಿಕೆ ಕಂಡಿದೆ.

ವಿಜಯ್ ಹಜಾರೆ ಟ್ರೋಫಿ 2021: ಮಹಾರಾಷ್ಟ್ರ ತಂಡವನ್ನ ಮುನ್ನಡೆಸಲಿರುವ ರುತುರಾಜ್ ಗಾಯಕ್ವಾಡ್ವಿಜಯ್ ಹಜಾರೆ ಟ್ರೋಫಿ 2021: ಮಹಾರಾಷ್ಟ್ರ ತಂಡವನ್ನ ಮುನ್ನಡೆಸಲಿರುವ ರುತುರಾಜ್ ಗಾಯಕ್ವಾಡ್

ಬೆಂಗಳೂರು ಎಫ್‌ಸಿ ಪ್ಲೇಯಿಂಗ್ XI: ಗುರುಪ್ರೀತ್ ಸಂಧು (ಗೋಲ್‌ಕೀಪರ್), ರೋಶನ್ ನವೋರೆಮ್, ಪ್ರತೀಕ್ ಚೌಧರಿ, ಅಲನ್ ಕೋಸ್ಟಾ, ಆಶಿಕ್ ಕುರುನಿಯನ್, ಜಯೇಶ್ ರಾಣೆ, ಸುರೇಶ್ ವಾಂಗ್ಜಮ್, ಬ್ರೂನೋ ಸಿಲ್ವಾ, ಎಡ್ಮಂಡ್ ಲಾಲ್ರಿಂಡಿಕಾ, ಕ್ಲಿಟನ್ ಸಿಲ್ವಾ ಮತ್ತು ಸುನಿಲ್ ಛೆಟ್ರಿ (ನಾಯಕ)

ಹೈದರಾಬಾದ್ ಎಫ್‌ಸಿ: ಲಕ್ಷ್ಮೀಕಾಂತ್ ಕಟ್ಟಿಮನಿ (ಗೋಲ್‌ಕೀಪರ್), ಚಿಂಗ್ಲೆನ್ಸನಾ ಸಿಂಗ್, ಜುವಾನನ್, ಆಕಾಶ್ ಮಿಶ್ರಾ, ಆಶಿಶ್ ರೈ, ಜೊವೊ ವಿಕ್ಟರ್ (ನಾಯಕ), ನಿಖಿಲ್ ಪೂಜಾರಿ, ಸೌವಿಕ್ ಚಕ್ರಬರ್ತಿ, ರೋಹಿತ್ ದಾನು, ಜೇವಿಯರ್ ಸಿವೆರಿಯೊ ಮತ್ತು ಬಾರ್ತಲೋಮಿವ್ ಓಗ್ಬೆಚೆ

For Quick Alerts
ALLOW NOTIFICATIONS
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS
Story first published: Wednesday, December 8, 2021, 23:35 [IST]
Other articles published on Dec 8, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X