ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

PKL 2022: ಹರಿಯಾಣ ಸ್ಟೀಲರ್ಸ್ ವಿರುದ್ಧ ಜಯಭೇರಿ ಬಾರಿಸಿದ ಗುಜರಾತ್ ಜೈಂಟ್ಸ್‌

GG vs HS

ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ 9ನೇ ಸೀಸನ್‌ನ 35ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಬಲಿಷ್ಠ ಗುಜರಾತ್ ಜೈಂಟ್ಸ್‌ ಜಯಭೇರಿ ಬಾರಿಸಿದ್ದು, 42-38 ಪಾಯಿಂಟ್ಸ್‌ ಅಂತರದಲ್ಲಿ ಗೆದ್ದು ಬೀಗಿದೆ.

ಮೊದಲಾರ್ಧದಲ್ಲಿ 16-22 ಪಾಯಿಂಟ್ಸ್ ಅಂತರದಲ್ಲಿ ಹಿನ್ನಡೆ ಅನುಭವಿಸಿದ್ದ ಗುಜರಾತ್ ಜೈಂಟ್ಸ್‌, ದ್ವಿತಿಯಾರ್ಧದಲ್ಲೂ ಕಂಬ್ಯಾಕ್ ಮಾಡಿ ಮೇಲುಗೈ ಸಾಧಿಸಿತು. ಆಕ್ರಮಣಾಕಾರಿ ಪ್ರದರ್ಶನದ ಜೊತೆಗೆ 26 ರೈಡಿಂಗ್ ಪಾಯಿಂಟ್ಸ್ ಹಾಗೂ 7 ಟ್ಯಾಕಲ್‌ಗಳನ್ನ ಮಾಡಿದ ಗುಜರಾತ್ 4 ಆಲ್‌ ಔಟ್‌ ಪಾಯಿಂಟ್ಸ್ ಕೂಡ ಪಡೆಯುವ ಮೂಲಕ ಎದುರಾಳಿ ವಿರುದ್ಧ ಒಟ್ಟು 42-38 ಪಾಯಿಂಟ್ಸ್‌ ಅಂದ್ರೆ 4 ಪಾಯಿಂಟ್ಸ್‌ ಲೀಡ್‌ನಲ್ಲಿ ಗೆದ್ದಿದೆ.

PKL 2022: ಯು ಮುಂಬಾ ವಿರುದ್ಧ ಭರ್ಜರಿಯಾಗಿ ಗೆದ್ದ ಬೆಂಗಳೂರು ಬುಲ್ಸ್‌, ರೈಡಿಂಗ್‌ನಲ್ಲಿ ಅಬ್ಬರಿಸಿದ ಭರತ್PKL 2022: ಯು ಮುಂಬಾ ವಿರುದ್ಧ ಭರ್ಜರಿಯಾಗಿ ಗೆದ್ದ ಬೆಂಗಳೂರು ಬುಲ್ಸ್‌, ರೈಡಿಂಗ್‌ನಲ್ಲಿ ಅಬ್ಬರಿಸಿದ ಭರತ್

ಗುಜರಾತ್ ಪರ ಮಿಂಚಿನಂತೆ ರೈಡರ್ ಆಗಿ ಕಾಣಿಸಿಕೊಂಡ ರಾಕೇಶ್ 20 ರೈಡ್‌ಗಳಲ್ಲಿ 18 ಅಂಕ ಸಂಪಾದಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಸೌರವ್ ಗುಲಿಯ ಹಾಗೂ ನಾಯಕ ಚಂದ್ರನ್ ರಂಜಿತ್ ತಲಾ 5 ಪಾಯಿಂಟ್ಸ್ ಕಲೆಹಾಕಿ ಸಾಥ್ ನೀಡಿದರು. ಆದ್ರೆ ಕರ್ನಾಟಕದ ಪ್ರಶಾಂತ್ ಕುಮಾರ್ ಕೇವಲ 1 ಪಾಯಿಂಟ್ ಕಲೆಹಾಕಿದರು.

ಇನ್ನು ಹರಿಯಾಣ ಸ್ಟೀಲರ್ಸ್ ಪರ ಸ್ವತಃ ನಾಯಕ ನಿತಿನ್ ರಾವಲ್ ವಿಫಲರಾಗಿದ್ದಲ್ಲದೆ(1) ಮಂಜಿತ್ 5, ಮೋಹಿತ್ ನಂದಲ್ 3, ಜೈದೀಪ್ ದಾಯಿಯಾ 5 ಪಾಯಿಂಟ್ಸ್‌ ಪಡೆದರು. ಹರಿಯಾಣ ಪರ ಲೀಡಿಂಗ್ ಸ್ಕೋರರ್ ಆಗಿದ್ದ ಮೀತು ಶರ್ಮಾ 9 ಟಚ್ ಪಾಯಿಂಟ್, 7 ಬೋನಸ್ ಸೇರಿದಂತೆ ಒಟ್ಟು 16 ಪಾಯಿಂಟ್‌ ಕಲೆಹಾಕಿದರು.

ಅಂತಿಮ ಹಂತದಲ್ಲಿ ಮೇಲುಗೈ ಸಾಧಿಸಿದ ಗುಜರಾತ್ ಜೈಂಟ್ಸ್ 4 ಪಾಯಿಂಟ್ಸ್ ಅಂತರದಲ್ಲಿ ಪಂದ್ಯವನ್ನ ಗೆದ್ದು ಬೀಗುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ 19 ಪಾಯಿಂಟ್ಸ್ ಮೂಲಕ 4ನೇ ಸ್ಥಾನ ಅಲಂಕರಿಸಿದೆ. ಮೊದಲ ಮೂರು ಸ್ಥಾನದಲ್ಲಿ ತೆಲುಗು ಟೈಟನ್ಸ್‌ ಮಣಿಸಿ ಅಗ್ರಸ್ಥಾನದಲ್ಲಿರುವ ಜೈಪುರ್ ಪಿಂಕ್ ಪ್ಯಾಂಥರ್ಸ್‌ ಇದ್ದು, ಆಡಿರುವ 6 ಪಂದ್ಯಗಳಲ್ಲಿ ಪ್ಯಾಂಥರ್ಸ್‌ 5 ಗೆಲುವು ಮತ್ತು 1 ಸೋಲನ್ನ ಕಂಡಿದ್ದು 26 ಪಾಯಿಂಟ್ಸ್ ಹೊಂದಿದೆ. ಅಷ್ಟೇ ಪಾಯಿಂಟ್ಸ್ ಹೊಂದಿರುವ ದಬಾಂಗ್ ಡೆಲ್ಲಿ ಎರಡನೇ ಸ್ಥಾನ ಅಲಂಕರಿಸಿದ್ದು, ಬೆಂಗಳೂರು ಬುಲ್ಸ್‌ 3ನೇ ಸ್ಥಾನದಲ್ಲಿದೆ.

ಪ್ರೊ ಕಬಡ್ಡಿ 2022 ಪೂರ್ಣ ಪಾಯಿಂಟ್ಸ್‌ ಟೇಬಲ್ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

PKL 2022 ಪಾಯಿಂಟ್ಸ್‌ ಟೇಬಲ್

Story first published: Sunday, October 23, 2022, 2:30 [IST]
Other articles published on Oct 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X