ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

PKL 8: ಗೆಲುವಿನ ಖಾತೆ ತೆರೆಯುವಲ್ಲಿ ಮತ್ತೆ ಎಡವಿದ ತೆಲುಗು ಟೈಟಾನ್ಸ್; ಮತ್ತೆ ಗೆದ್ದ ದಬಾಂಗ್ ಡೆಲ್ಲಿ

PKL 8: UP Yodha beats Telugu Titans and Dabang Delhi wins against Haryana Steelers

ಈ ಬಾರಿಯ ಪ್ರೋ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಇಂದು ( ಜನವರಿ 15 ) ಒಟ್ಟು 3 ಪಂದ್ಯಗಳು ನಡೆದಿದ್ದು, ಪ್ರಥಮ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವನ್ನು ದಬಾಂಗ್ ಡೆಲ್ಲಿ ತಂಡ ಸೋಲಿಸಿದರೆ, ದ್ವಿತೀಯ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡವನ್ನು ಯುಪಿ ಯೋಧಾ ಸೋಲಿಸಿದೆ.

ಪ್ರಥಮ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವನ್ನು 28-25 ಅಂಕಗಳ ಅಂತರದಿಂದ ಮಣಿಸಿದ ದಬಾಂಗ್ ಡೆಲ್ಲಿ ಅಂಕಪಟ್ಟಿಯಲ್ಲಿ ಏರಿಕೆ ಕಂಡಿದ್ದು, ತೃತೀಯ ಸ್ಥಾನದಿಂದ ದ್ವಿತೀಯ ಸ್ಥಾನಕ್ಕೆ ಜಿಗಿದಿದೆ. ಅತ್ತ ದ್ವಿತೀಯ ಪಂದ್ಯದಲ್ಲಿ ಯುಪಿ ಯೋಧಾ ವಿರುದ್ಧ ಸೋತಿರುವ ತೆಲುಗು ಟೈಟಾನ್ಸ್ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಆವೃತ್ತಿಯಲ್ಲಿ ಏಳನೇ ಸೋಲನ್ನು ಕಂಡಿದೆ.

ಇಂದು ನಡೆದ ದಬಾಂಗ್ ಡೆಲ್ಲಿ ಮತ್ತು ಹರಿಯಾಣ ಸ್ಟೀಲರ್ಸ್ ನಡುವಿನ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡದ ಆಟಗಾರ ವಿಜಯ್ 11 ಅಂಕಗಳನ್ನು ಪಡೆಯುವುದರ ಮೂಲಕ ಮಿಂಚಿದರು. ವಿಜಯ್ ಕಲೆಹಾಕಿದ ಈ 11 ಅಂಕಗಳ ಪೈಕಿ 5 ಅಂಕಗಳು ಪಂದ್ಯದಲ್ಲಿನ ತನ್ನ ಕೊನೆಯ 2 ರೈಡ್‌ನಲ್ಲಿ ಬಂದದ್ದು ದಬಾಂಗ್ ಡೆಲ್ಲಿ ತಂಡಕ್ಕೆ ಗೆಲುವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತು. ಗಾಯದ ಸಮಸ್ಯೆಗೆ ಒಳಗಾದ ನವೀನ್ ಕುಮಾರ್ ಅನುಪಸ್ಥಿತಿಯಲ್ಲಿ ದ್ವಿತೀಯ ವಿಭಾಗದಲ್ಲಿ ಕಣಕ್ಕಿಳಿದ ದಬಾಂಗ್ ಡೆಲ್ಲಿ ಹರಿಯಾಣ ರೈಡರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.

ಪಂದ್ಯದ ಮೊದಲನೇ ಭಾಗ ಕಡಿಮೆ ಅಂಕಗಳ ಹಣಾಹಣಿಯಿಂದ ಕೂಡಿತ್ತು. 8 ಬಾರಿ ರೈಡ್ ಮಾಡಿದ ದಬಾಂಗ್ ಡೆಲ್ಲಿ ತಂಡದ ನವೀನ್ ಕುಮಾರ್ ಅವರನ್ನು 4 ಬಾರಿ ಟ್ಯಾಕಲ್ ಮಾಡಿದ ಹರಿಯಾಣ ಸ್ಟೀಲರ್ಸ್ ಸುರೇಂದರ್ ನಾಡಾ ಮತ್ತು ಯುವ ಆಟಗಾರ ಜೈದೀಪ್ ಸಹಾಯದಿಂದ ಉತ್ತಮವಾಗಿ ಡಿಫೆನ್ಸ್ ಮಾಡಿತು. ಮಾಡು ಇಲ್ಲವೇ ಮಡಿ ರೇಡ್ ವೇಳೆ ಹರಿಯಾಣ ಸ್ಟೀಲರ್ಸ್ ಸಾಕಷ್ಟು ಹರಸಾಹಸ ಪಟ್ಟಿತು. ಪಂದ್ಯದ ಮಧ್ಯಂತರದ ವೇಳೆಗೆ ಸಮಬಲವನ್ನು ಸಾಧಿಸಿದ ಇತ್ತಂಡಗಳು 11 - 11 ಅಂಕಗಳನ್ನು ಪಡೆದುಕೊಂಡವು.

ಇನ್ನು ಪಂದ್ಯದ ದ್ವಿತೀಯಾರ್ಧದಲ್ಲಿಯೂ ಕೂಡ ಅಂಕಗಳ ಬರ ಕಾಡತೊಡಗಿತು. ದ್ವಿತೀಯಾರ್ಧದ ಮೊದಲ ಹತ್ತು ನಿಮಿಷಗಳ ಕಾಲ ನಿಧಾನಗತಿಯ ಆಟವನ್ನಾಡಿದ ಎರಡೂ ತಂಡಗಳು ಪಂದ್ಯ ಮುಗಿಯಲು ಇನ್ನೂ 5 ನಿಮಿಷಗಳು ಬಾಕಿ ಇರುವಾಗ 21 - 21 ಸಮಬಲವನ್ನು ಸಾಧಿಸಿದವು. ಅಂತಿಮವಾಗಿ ಕೊನೆಯ 2 ರೈಡ್ ಮಾಡಿದ ದಬಾಂಗ್ ಡೆಲ್ಲಿ ತಂಡದ ಆಟಗಾರ ವಿಜಯ್ 2 ಅಂಕಗಳ ರೈಡ್ ಮತ್ತು 3 ಅಂಕಗಳ ಸೂಪರ್ ರೈಡ್ ಮಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಗೆಲುವಿನ ಮೂಲಕ ಟೂರ್ನಿಯಲ್ಲಿನ ತನ್ನ 6ನೇ ಜಯವನ್ನು ಪಡೆದುಕೊಂಡ ದಬಾಂಗ್ ಡೆಲ್ಲಿ 37 ಅಂಕಗಳನ್ನು ಹೊಂದುವುದರ ಜತೆಗೆ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ.

ಇನ್ನು ಇದೇ ದಿನದಂದು ನಡೆದ ದ್ವಿತೀಯ ಪಂದ್ಯದಲ್ಲಿ ತೆಲುಗು ಟೈಟನ್ಸ್ ಮತ್ತು ಯು ಪಿ ಯೋಧಾ ತಂಡಗಳು ಸೆಣಸಾಟ ನಡೆಸಿದ್ದು, ತೆಲುಗು ಟೈಟಾನ್ಸ್ ತಂಡಕ್ಕೆ ಯುಪಿ ಯೋಧಾ ತಂಡ 39-33 ಅಂಕಗಳ ಅಂತರದಲ್ಲಿ ಸೋಲುಣಿಸಿದೆ. ಹೀಗೆ ಈ ಪಂದ್ಯದಲ್ಲಿಯೂ ಕೂಡ ಸೋಲುವುದರ ಮೂಲಕ ತೆಲುಗು ಟೈಟಾನ್ಸ್ ತಂಡ ಸೋಲಿನ ಸರಪಣಿಯನ್ನು ಮುಂದುವರಿಸಿದೆ. ಈ ಬಾರಿಯ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 9 ಪಂದ್ಯಗಳನ್ನಾಡಿರುವ ತೆಲುಗು ಟೈಟಾನ್ಸ್ ಯಾವುದೇ ಪಂದ್ಯದಲ್ಲಿ ಜಯ ಸಾಧಿಸದೇ 7 ಪಂದ್ಯಗಳಲ್ಲಿ ಸೋತು ಉಳಿದೆರಡು ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಅತ್ತ ತೆಲುಗು ಟೈಟನ್ಸ್ ವಿರುದ್ಧದ ಈ ಗೆಲುವಿನ ಮೂಲಕ ಟೂರ್ನಿಯಲ್ಲಿನ ತನ್ನ ಮೂರನೇ ಗೆಲುವನ್ನು ಪಡೆದುಕೊಂಡ ಯುಪಿ ಯೋಧಾ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

Story first published: Sunday, January 16, 2022, 2:27 [IST]
Other articles published on Jan 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X