ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕನ್ನಡದಲ್ಲೂ ಪ್ರೋ ಕಬಡ್ಡಿ ಲೀಗ್ ವೀಕ್ಷಕ ವಿವರಣೆ

By Mahesh

ಬೆಂಗಳೂರು, ಜುಲೈ 16: ಪ್ರೋ ಕಬಡ್ಡಿ ಲೀಗ್ ಜುಲೈ 18ರಿಂದ ಮುಂಬೈನಲ್ಲಿ ಆರಂಭಗೊಳ್ಳಲಿದ್ದು ನಗರದ ಶ್ರೀಕಂಠೀರವ ಸ್ಟೇಡಿಯಂನಲ್ಲಿ ಬೆಂಗಳೂರು ಬುಲ್ಸ್ ತಂಡ ತಾಲೀಮು ನಡೆಸಿ ಕಣಕ್ಕಿಳಿಯಲು ಸಜ್ಜಾಗಿದೆ. ಸ್ಟಾರ್ ನೆಟ್ವರ್ಕ್ ಎಲ್ಲಾ ಪಂದ್ಯಗಳನ್ನು ಪ್ರಸಾರ ಮಾಡಲಿದ್ದು, ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಎಂಟು ಚಾನೆಲ್ ಗಳಲ್ಲಿ ವೀಕ್ಷಕರನ್ನು ಮುಟ್ಟಲಿದೆ.

ಪ್ರೋ ಕಬಡ್ಡಿ ಲೀಗ್ ಮೊದಲ ಸೀಸನ್ ನಲ್ಲಿ ಸರಿ ಸುಮಾರು 435 ಮಿಲಿಯನ್ ವೀಕ್ಷಕರನ್ನು ಮುಟ್ಟಿದ್ದ ಪಿಕೆಎಲ್ ಈ ಬಾರಿ ಇನ್ನೂ ಹೆಚ್ಚಿನ ಸಂಖ್ಯೆಯನ್ನು ಮುಟ್ಟುವ ನಿರೀಕ್ಷೆ ಇದೆ.

ಈ ಸೀಸನ್ ನಲ್ಲಿ ಪ್ರತಿ ತಂಡದಲ್ಲಿ 14 ಆಟಗಾರರ ಬದಲಿಗೆ 25 ಆಟಗಾರರು ಸೇರಿಕೊಂಡಿದ್ದಾರೆ. ಇರಾನಿ ಆಟಗಾರರು ಸೇರಿದಂತೆ ವಿದೇಶಿ ಆಟಗಾರರು ತಂಡಕ್ಕೆ ಹೆಚ್ಚಿನ ಬಲ ತುಂಬಲಿದ್ದಾರೆ ಎಂದು ಸ್ಟಾರ್ ಸ್ಫೋರ್ಟ್ಸ್ ನ ನಿತಿನ್ ಕುರ್ಕ್ರೇಜಾ ಹೇಳಿದ್ದಾರೆ. [ಬೆಂಗಳೂರು ತಂಡದ ಪಂದ್ಯಗಳ ವೇಳಾಪಟ್ಟಿ]

Jaipur

ಕ್ರೀಡಾಪ್ರಿಯರ ಆಸಕ್ತಿ ಕೆರಳಿಸಿರುವ ಪ್ರೋ ಕಬಡ್ಡಿ ಲೀಗ್ ನಲ್ಲಿ ಕಳೆದ ಬಾರಿಯಂತೆ 8 ತಂಡಗಳು 8 ನಗರಗಳಲ್ಲಿ ಪಿಕೆಎಲ್ 2 ಕಪ್ ಗಾಗಿ ಸೆಣಸಲಿವೆ. ಬೆಂಗಳೂರು ಬುಲ್ಸ್ ತಂಡ ಈ ಬಾರಿ ಉತ್ತಮ ಪ್ರದರ್ಶನ ನೀಡುವ ಹುಮ್ಮಸ್ಸಿನಲ್ಲಿದೆ. [ಪ್ರೋ ಕಬಡ್ಡಿ: ಮುಂಬೈ ಮಣಿಸಿ ಕಪ್ ಎತ್ತಿದ ಜೈಪುರ]

ಚೊಚ್ಚಲ ಆವೃತ್ತಿಯಲ್ಲಿ ಸೆಮಿಫೈನಲ್ ಸಾಧನೆ ಮಾಡಿತ್ತು. ಜುಲೈ 18 ರಿಂದ ಆಗಸ್ಟ್ 23ರ ತನಕ ಕಬಡ್ಡಿ ಲೀಗ್ ನಡೆಯಲಿದೆ. ಬೆಂಗಳೂರಿನಲ್ಲಿ ಆಗಸ್ಟ್ 12ರಿಂದ 15ರವರೆಗೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿವೆ .

ಬೆಂಗಳೂರು ಬುಲ್ಸ್ ಸೇರಿದಂತೆ ಪಟ್ನಾ ಪೈರೇಟ್ಸ್, ತೆಲುಗು ಟೈಟನ್ಸ್, ಪುಣೇರಿ ಪಲ್ಟಾನ್, ದಬಾಂಗ್ ದೆಹಲಿ, ಬೆಂಗಾಳ್ ವಾರಿಯರ್ಸ್, ಯು ಮುಂಬಾ, ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ಕಣಕ್ಕಿಳಿಯಲಿದೆ. [ಪಿಕೆಎಲ್ 2015: ಸಂಪೂರ್ಣ ಮಾರ್ಗದರ್ಶಿ ಇಲ್ಲಿದೆ]

ಬೆಂಗಳೂರು ಬುಲ್ಸ್ ತಂಡ: ಮಂಜಿತ್ ಚಿಲ್ಲಾರ್ (ನಾಯಕ), ಧರ್ಮರಾಜ್ ಚೆರಲಾಥಾನ್, ಪ್ರಮೋದ್ ಸಿಂಗ್, ಗುರ್ ಪ್ರೀತ್ ಸಿಂಗ್, ಅಜಯ್ ಠಾಕೂರ್, ಶರಣ್ ದಾಸ್, ಸಿನೋಧರನ್ ಕನೇಶರಾಜ್, ಬಿ ವಿನೋದ್ ಕುಮಾರ್, ರಾಜೇಶ್ ಮಂಡಲ್, ಕೆ ಏರಿಯಾನಾ,ದೀಪಕ್ ಸುರೇಶ್ ಕುಮಾರ್, ಪ್ರೀತಂ ಸಿಂಗ್, ಗುರ್ಚೇತ್ ಸಿಂಗ್, ಸುನಿಲ್ ಹನುಮಂತಪ್ಪ.(ಏಕೈಕ ಕರ್ನಾಟಕದ ಆಟಗಾರ). (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:15 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X