ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್: ಸಾರ್ವಜನಿಕವಾಗಿ ಟಿಕೆಟ್ ಮಾರಾಟವಿಲ್ಲ!

ಚೀನಾದ ಬೀಜಿಂಕ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಸಾರ್ವಜನಿಕವಾಗಿ ಟಿಕೆಟ್ ಮಾರಾಟವನ್ನು ನಿಷೇಧಿಸಿದ್ದು, ಅಂತರಾಷ್ಟ್ರೀಯ ಪ್ರೇಕ್ಷಕರು ಕೂಡ ಕ್ರೀಡಾ ಮಹಾಕೂಟದಲ್ಲಿ ಕಾಣಿಸುವುದಿಲ್ಲ.
ಕೋವಿಡ್-19 ಸಾಂಕ್ರಾಮಿಕ ರೋಗದ ಸಂಖ್ಯೆ ದಿನೇ ದಿನೇ ಏರುತ್ತಲೇ ಸಾಗಿದ್ದು, ನಿಯಮಗಳ ಅನ್ವಯ ಟಿಕೆಟ್‌ಗಳನ್ನ ಸಾರ್ವಜನಿಕವಾಗಿ ಮಾರಾಟ ಮಾಡುವುದನ್ನ ನಿಷೇಧಿಸಿದ್ದು, ಫೆಬ್ರವರಿ 4ರಿಂದ ನಡೆಯಲಿರುವ ಒಲಿಂಪಿಕ್ಸ್‌ಗೆ ಭಾರೀ ಹಿನ್ನಡೆಯಾಗಿದೆ.
ಸಾರ್ವಜನಿಕವಾಗಿ ಟಿಕೆಟ್ ಮಾರಾಟ ಮಾಡುವುದರ ಜೊತೆಗೆ ಯಾವುದೇ ವಿದೇಶಿ ಪ್ರೇಕ್ಷಕರು ಒಲಿಂಪಿಕ್ಸ್ ನೋಡಲು ಸಾಧ್ಯವಿಲ್ಲ. ಈಗಾಗಲೇ ಕೋವಿಡ್-19 ಕಾರಣದಿಂದಾಗಿ ಚೀನಾ ತನ್ನ ಗಡಿಯನ್ನ ಬಂದ್ ಮಾಡಿದ್ದು ಅಂತರಾಷ್ಟ್ರೀಯ ಪ್ರಯಾಣಿಕರಿಗೆ ನಿಷೇಧ ಹೇರಿದೆ ಎಂದು ಸಂಘಟಕರು ಹೇಳಿದ್ದಾರೆ.
ಕೋವಿಡ್-19 ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದ್ದು, ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಸಿಬ್ಬಂದಿಗಳು ಮತ್ತು ಆಟಗಾರರ ಸುರಕ್ಷತೆ ದೃಷ್ಟಿಯಿಂದಾಗಿ ಈ ನಿಯಮವನ್ನ ಜಾರಿಗೆ ತರಲಾಗಿದೆ.
ಇನ್ನು ಈಗಾಗಲೇ ಆನ್‌ಲೈನ್ ಮೂಲಕ ಟಿಕೆಟ್ ಪಡೆದಿರುವ ದೇಶೀಯ ವೀಕ್ಷಕರು ಕಠಿಣ ಕೋವಿಡ್-19 ನಿಯಮಗಳನ್ನ ಪಾಲಿಸಬೇಕಾಗುತ್ತದೆ ಎಂದು ಒಲಿಂಪಿಕ್ಸ್ ಕಮಿಟಿ ತಿಳಿಸಿದೆ.
ಸ್ಥಳೀಯ ಕೋವಿಡ್-19 ಸೋಂಕನ್ನು ನಿಗ್ರಹಿಸುವಲ್ಲಿ ಚೀನಾ ಬಹುಮಟ್ಟಿಗೆ ಯಶಸ್ವಿಯಾಗಿದ್ದು, ಕೇಸ್‌ಗಳನ್ನ ನಿಯಂತ್ರಿಸುವಲ್ಲಿ ಸಫಲಗೊಂಡಿದೆ. ಒಲಿಂಪಿಕ್ಸ್ ಚೀನಾದ ರಾಜಧಾನಿಯಲ್ಲಿ ಸಂಪೂರ್ಣ ನಡೆಯಲಿದ್ದು, ಕ್ರೀಡಾಪಟುಗಳು ಮತ್ತು ಸಿಬ್ಬಂದಿ ವರ್ಗದವರನ್ನ ಬೇರೆ ಬೇರೆ ಮಾಡಲಿದೆ.
ಕಳೆದ ತಿಂಗಳಷ್ಟೇ ಉತ್ತರ ಅಮೇರಿಕಾದ ರಾಷ್ಟ್ರೀಯ ಹಾಕಿ ತಂಡವು ಕೋವಿಡ್-19 ಕಾರಣದಿಂದಾಗಿ, ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications