ಮೂರನೇ ಬಾರಿಗೆ ಯುಎಸ್ ಓಪನ್ ಗೆದ್ದ ನಡಾಲ್

Posted By:

ನ್ಯೂಯಾರ್ಕ್, ಸೆ. 11: ಸ್ಪೇನಿನ ರಾಫೆಲ್ ನಡಾಲ್ ಅವರು ಮೂರನೇ ಬಾರಿಗೆ ಯುಎಸ್ ಓಪನ್ ಟೆನಿಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಜೂನ್ ತಿಂಗಳಿನಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ಬಳಿಕ ಈ ವರ್ಷದಲ್ಲಿ ಎರಡನೇ ಗ್ರಾನ್ ಸ್ಲಾಮ್ ಗೆದ್ದಿರುವ ಟಾಪ್ ಸೀಡೆಡ್ ಆಟಗಾರ ನಡಾಲ್ ಅವರಿಗೆ ಇದು 16ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯಾಗಿದೆ.

Nadal beats Anderson for third US Open title

ವಿಶ್ವದ ಅಗ್ರಗಣ್ಯ ಆಟಗಾರ ನಡಾಲ್ ಅವರು ಚೊಚ್ಚಲ ಬಾರಿಗೆ ಯುಎಸ್ ಓಪನ್ ಫೈನಲ್ ಗೇರಿದ್ದ ಕೆವಿನ್ ಆಂಡರ್ಸನ್ ಅವರನ್ನು 6-3, 6-3, 6-4 ರಲ್ಲಿ ಸೋಲಿಸಿದರು.

ಈ ಮೂಲಕ 2013ರ ನಂತರ ಮತ್ತೊಮ್ಮೆ ಯುಎಸ್ ಓಪನ್ ಕಿರೀಟ ಧರಿಸಿದರು. ಒಂದೇ ವರ್ಷದಲ್ಲಿ ಎರಡು ಅಥವಾ ಅದಕ್ಕಿಂತ ಅಧಿಕ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ದಾಖಲೆಗೆ ನಡಾಲ್ ಪಾತ್ರರಾಗಿದ್ದಾರೆ.
Story first published: Monday, September 11, 2017, 6:13 [IST]
Other articles published on Sep 11, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ