ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೀಪರ್ ಸ್ಥಾನಕ್ಕಾಗಿ ರಿಷಭ್ ಪಂತ್ ಮತ್ತು ಇಶನ್ ಕಿಶನ್ ನಡುವಿನ ಸ್ಪರ್ಧೆ ಸಖತ್ತಾಗಿದೆ: ಸಂಜಯ್ ಮಂಜ್ರೇಕರ್

ಟೀಮ್ ಇಂಡಿಯಾದ ಭವಿಷ್ಯದ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಮುಂಬೈ ಇಂಡಿಯನ್ಸ್‌ ಪರ ಆಡುವ ಇಶನ್ ಕಿಶನ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ರಿಷಭ್ ಪಂತ್ ನಡುವೆ ನಡೆಯುತ್ತಿರುವ ಪೈಪೋಟಿ ಆಸಕ್ತಿದಾಯಕವಾಗಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

ಭವಿಷ್ಯದಲ್ಲಿ ರಾಷ್ಟ್ರೀಯ ತಂಡದಲ್ಲಿ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಹೋರಾಡಲು ಇಶನ್ ಕಿಶನ್ ಮತ್ತು ರಿಷಭ್ ಪಂತ್ ಅವರನ್ನು ಬೆಂಬಲಿಸಿದ್ದಾರೆ. ಐಪಿಎಲ್ 2020 ರಲ್ಲಿ ಇಶಾನ್ ಕಿಶನ್ ಮತ್ತು ರಿಷಭ್ ಪಂತ್ ಹೆಚ್ಚು ವ್ಯತಿರಿಕ್ತ ರನ್ ಗಳಿಸಿದ್ದಾರೆ. ಆದಾಗ್ಯೂ, ಇಬ್ಬರೂ ಅಂಡರ್ -19 ವಿಶ್ವಕಪ್‌ನಲ್ಲಿ ಒಟ್ಟಿಗೆ ಆಡಿದ್ದು, ಟೀಮ್ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

''ಇನ್ನಾದರೂ ಧೋನಿ ಜೊತೆ ಪಂತ್ ಹೋಲಿಸುವುದನ್ನು ನಿಲ್ಲಿಸಿ''''ಇನ್ನಾದರೂ ಧೋನಿ ಜೊತೆ ಪಂತ್ ಹೋಲಿಸುವುದನ್ನು ನಿಲ್ಲಿಸಿ''

ಫಾರ್ಮ್ ವೈಫಲ್ಯ ಅನುಭವಿಸಿರುವ ರಿಷಭ್ ಪಂತ್

ಫಾರ್ಮ್ ವೈಫಲ್ಯ ಅನುಭವಿಸಿರುವ ರಿಷಭ್ ಪಂತ್

ಪ್ರಸ್ತುತ ಐಪಿಎಲ್ ಆವೃತ್ತಿಯಲ್ಲಿ ರಿಷಭ್ ಪಂತ್ ತಮ್ಮ ಫಾರ್ಮ್ ಮತ್ತು ಫಿಟ್ನೆಸ್ ವೈಫಲ್ಯದಿಂದ ಭಾರಿ ಟೀಕೆಗಳನ್ನು ಎದುರಿಸಿದ್ದಾರೆ. ಪಂತ್ 12 ಪಂದ್ಯಗಳಲ್ಲಿ 28.50 ರ ಸರಾಸರಿಯಲ್ಲಿ 109 ಸ್ಟ್ರೈಕ್ ರೇಟ್‌ನೊಂದಿಗೆ ಕೇವಲ 285 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ.

ಐಪಿಎಲ್ 2020: ಬೃಹತ್ ಸಿಕ್ಸರ್ ಹಿಂದಿನ ರಹಸ್ಯ ಬಹಿರಂಗಪಡಿಸಿದ ಇಶಾನ್ ಕಿಶನ್

ಮುಂಬೈ ಇಂಡಿಯನ್ಸ್ ಪರ ಭರ್ಜರಿ ಆಟವಾಡುತ್ತಿರುವ ಇಶನ್ ಕಿಶನ್

ಮುಂಬೈ ಇಂಡಿಯನ್ಸ್ ಪರ ಭರ್ಜರಿ ಆಟವಾಡುತ್ತಿರುವ ಇಶನ್ ಕಿಶನ್

ಮತ್ತೊಂದೆಡೆ, ಇಶನ್ ಕಿಶನ್ ಐಪಿಎಲ್ 2020 ರಲ್ಲಿ ಮುಂಬೈ ಇಂಡಿಯನ್ಸ್ ಪರ ಭರ್ಜರಿ ಆಟವಾಡುತ್ತಿದ್ದಾರೆ. 483 ರನ್ ಗಳಿಸಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದಾರೆ. ಇವರ ಸರಾಸರಿ 50 ಕ್ಕಿಂತ ಹೆಚ್ಚು.

ಪಂತ್ -ಕಿಶನ್ ನಡುವಿನ ಪೈಪೋಟಿ ಸಖತ್ತಾಗಿದೆ

ಪಂತ್ -ಕಿಶನ್ ನಡುವಿನ ಪೈಪೋಟಿ ಸಖತ್ತಾಗಿದೆ

ಸಂಜಯ್ ಮಂಜ್ರೇಕರ್ ಅವರು ಭಾರತೀಯ ಕ್ರಿಕೆಟ್‌ನಲ್ಲಿ ಇಬ್ಬರು ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳ ನಡುವಿನ ಸ್ಪರ್ಧೆ ಬಗ್ಗೆ ಉತ್ಸುಕರಾಗಿದ್ದರೆ. ಆದಾಗ್ಯೂ, ಭಾರತದ ಸೀಮಿತ ಓವರ್‌ಗಳ ತಂಡಗಳಿಂದ ರಿಷಭ್ ಅವರನ್ನು ಕೈಬಿಟ್ಟಿರುವುದು ಅವರಿಗೆ ಭಾರಿ ಹಿನ್ನಡೆಯಾಗಿದೆ ಎಂದು ಹೇಳಿದ್ದಾರೆ. ಮತ್ತೊಂದೆಡೆ ಕಿಶನ್‌ಗೆ ಎಲ್ಲ ಪ್ರಶಂಸೆ ವ್ಯಕ್ತಪಡಿಸಿದರು, ಅವರು ಹೆಚ್ಚಿನ ಅವಕಾಶವನ್ನು ಚೆನ್ನಾಗಿ ಬಳಿಸಿಕೊಳ್ಳುತ್ತಿದ್ದಾರೆ ಎಂದು ಒತ್ತಿ ಹೇಳಿದ್ದಾರೆ.

"ಭಾರತೀಯ ಕ್ರಿಕೆಟ್‌ನಲ್ಲಿ ಸ್ಪರ್ಧೆಯೊಳಗೆ ಸ್ಪರ್ಧೆ. ಭಾರತದ ವೈಟ್-ಬಾಲ್ ತಂಡಗಳಿಂದ ಪಂತ್ ಅನುಪಸ್ಥಿತಿಯು ಭಾರಿ ಹಿನ್ನಡೆಯಾಗಿದೆ. ಕೆಲವೇ ತಿಂಗಳುಗಳ ಹಿಂದೆ, ಅವರು ‘ಸ್ಟಾರ್' ಆಗಿದ್ದರು. ಅವರು ಗುಣಮಟ್ಟದ ವೇಗದ ಬೌಲರ್‌ಗಳ ಎದುರು ಮೈದಾನದ ಹೊರಗೆ ಸಿಕ್ಸರ್ ಅಟ್ಟುತ್ತಿದ್ದರು. ಆದರೆ ಇದೀಗ ಎಲ್ಲವೂ ಬದಲಾಗಿದೆ. ತನ್ನ ಸಮಕಾಲೀನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶನ್ ಕಿಶನ್ ಜೊತೆಗೆ ಈಗ ಪೈಪೋಟಿಯನ್ನು ಎದುರಿಸಬೇಕಿದೆ. ಈ ಇಬ್ಬರ ನಡುವಿನ ಸ್ಪರ್ಧೆಯು ಹೆಚ್ಚು ಆಸಕ್ತಿದಾಯಕವಾಗಿದೆ'' ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

ರಾಹುಲ್ ದ್ರಾವಿಡ್ ಗರಡಿಯಲ್ಲಿ ಬೆಳೆದ ಹುಡುಗರು

ರಾಹುಲ್ ದ್ರಾವಿಡ್ ಗರಡಿಯಲ್ಲಿ ಬೆಳೆದ ಹುಡುಗರು

ಸಂಜಯ್ ಮಂಜ್ರೇಕರ್ ಅವರು ಢಾಕಾದಲ್ಲಿ ನಡೆದ ಅಂಡರ್ -19 ವಿಶ್ವಕಪ್‌ನಲ್ಲಿ ಈ ಇಬ್ಬರು ಆಡಿದ್ದನ್ನು ನೆನಪಿಸಿಕೊಂಡು ರಿಷಭ್ ಪಂತ್ ಮತ್ತು ಇಶಾನ್ ಕಿಶನ್ ಅವರನ್ನು ಸಮಕಾಲೀನರೆಂದು ಹೆಸರಿಸಿದ್ದಾರೆ. ರಾಹುಲ್ ದ್ರಾವಿಡ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವುದನ್ನು ಮಂಜ್ರೇಕರ್ ನೆನಪಿಸಿಕೊಂಡರು ಮತ್ತು ಪಂತ್ ಮತ್ತು ಕಿಶನ್ ತಂಡದಲ್ಲಿ ‘ಆಲ್ಫಾಸ್' ಆಗಿದ್ದರು. ಪಂತ್ ಅವರು ತಮ್ಮ ಕ್ರಿಕೆಟ್ ಆಡಿದ ರೀತಿಯಲ್ಲಿ ಅಬ್ಬರದಿಂದ ಕೂಡಿತ್ತು, ಆದರೆ ಕಿಶನ್ ಅವರ ಬ್ಯಾಟಿಂಗ್ ವಿಧಾನವೇ ಬೇರೆ ರೀತಿಯದ್ದು ಎಂದು ಅವರು ಹೇಳಿದರು.

ಈ ಇಬ್ಬರು ಯುವ ಆಟಗಾರರು ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಕಂಡುಕೊಳ್ಳಲು ಆಸಕ್ತಿದಾಯಕ ಸ್ಪರ್ಧೆಯೊಡ್ಡಿದ್ದಾರೆ ಎಂದು ಮಂಜ್ರೇಕರ್ ಹೇಳಿದ್ದಾರೆ.

Story first published: Saturday, November 7, 2020, 16:37 [IST]
Other articles published on Nov 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X