ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

FAKE NEWS Buster: ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ರಾಜೀನಾಮೆ!

Sourav ganguly

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತಿದ್ದು, ಬಿಸಿಸಿಐ ಹೆಸರಿನಲ್ಲಿರುವ ನಕಲಿ ಅಕೌಂಟ್‌ನಿಂದ ಟ್ವೀಟ್‌ ಹೊರಬಿದ್ದಿದೆ.

ಬಿಸಿಸಿಐ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆಯಲ್ಲಿ ಸೌರವ್‌ ಗಂಗೂಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಮತ್ತು ಕಾರ್ಯದರ್ಶಿ ಜೈಶಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದನ್ನು ನಿಜವೆಂದು ನಂಬಿದ ಕೆಲವು ಸ್ಥಳೀಯ ಸುದ್ದಿ ವಾಹಿನಿಗಳು ಈ ನಕಲಿ ಟ್ವೀಟ್ ಅನ್ನು ಸುದ್ದಿ ಎಂದು ಪ್ರಚಾರ ಮಾಡಿವೆ. ಜನಪ್ರಿಯ ಟಿವಿ ಚಾನೆಲ್ ಮೂಲಕ ಸ್ಕ್ರೋಲ್ ಮಾಡಿ, ಇತರ ಕೆಲವು ವೆಬ್‌ಸೈಟ್‌ಗಳು ಮತ್ತು ಸುದ್ದಿ ಅಪ್ಲಿಕೇಶನ್‌ಗಳು ಈ ಸುದ್ದಿಯನ್ನು ಸತ್ಯವನ್ನು ತಿಳಿಯದೆ ಪ್ರಕಟಿಸಿವೆ.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ಗೊಂದಲಕ್ಕೊಳಗಾದರು. ಆದರೆ ಬಳಿಕ ಅದು ಸುಳ್ಳು ಸುದ್ದಿ ಎಂದು ತಿಳಿದು ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇದೇ ವೇಳೆಯಲ್ಲಿ ವೇಗದ ಸುದ್ದಿ ನೀಡುವ ಕಾತುರದಲ್ಲಿ ಸುದ್ದಿ ವಾಹಿನಿಗಳು ಸತ್ಯಾಂಶ ತಿಳಿಯದೆ ತಪ್ಪು ಮಾಡುತ್ತಿವೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Fake news

ಆದ್ರೆ, ಗಂಗೂಲಿ ರಾಜೀನಾಮೆ ನಿಡಿದ್ದಾರೆ ಎಂಬ ಸುಳ್ಳು ಸುದ್ದಿ ಹೊರಬೀಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅವರ ಟ್ವೀಟ್ ಅನ್ನು ತಪ್ಪಾಗಿ ಅರ್ಥೈಸಿ ರಾಜೀನಾಮೆ ನೀಡಿರುವುದಾಗಿ ಅನೇಕ ಸುದ್ದಿಗಳು ಪ್ರಕಟವಾಗಿದ್ದವು. ಕೊನೆಗೆ ಸ್ವತಃ ಸೌರವ್ ಗಂಗೂಲಿಯೇ ತನ್ನ ಟ್ವೀಟ್ ಕುರಿತಾಗಿ ಸ್ಪಷ್ಟಣೆ ನೀಡಿದ್ದರು.

ವಾಷಿಂಗ್ಟನ್ ಸುಂದರ್‌ಗೆ ಮತ್ತೆ ಇಂಜ್ಯುರಿ: ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಿಂದ ಔಟ್‌?ವಾಷಿಂಗ್ಟನ್ ಸುಂದರ್‌ಗೆ ಮತ್ತೆ ಇಂಜ್ಯುರಿ: ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಿಂದ ಔಟ್‌?

ಆದ್ರೂ ಕೊನೆಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ವಿವರಣೆ ನೀಡುವವರೆಗೂ ಸುದ್ದಿ ಹರಡುವುದು ನಿಲ್ಲಲಿಲ್ಲ. ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಸೌರವ್‌ ಗಂಗೂಲಿ ಕೊರೊನಾ ಸಂಕಷ್ಟದಲ್ಲೂ ಐಪಿಎಲ್‌ ಟೂರ್ನಮೆಂಟ್ ಹಾಗೂ ಅಂತರಾಷ್ಟ್ರೀಯ ಸರಣಿಗಳನ್ನ ಆಯೋಜಿಸಿದ್ದರು. ಅಲ್ಲದೆ 48,000 ಕೋಟಿ ರೂಪಾಯಿ ಮೌಲ್ಯದ ಐಪಿಎಲ್ ಪ್ರಸಾರದ ಹಕ್ಕು ಪಡೆಯುವಲ್ಲಿ ಯಶಸ್ವಿಯಾದರು.

Sanju , DK ಹಾಗು Ashwin ಅಭಿಮಾನಿಗಳಿಗೆ ಮನರಂಜನೆ ಕೊಟ್ಟಿದ್ದು ಹೀಗೆ | *Cricket |OneIndia Kannada

ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ರಾಜೀನಾಮೆ ವಿಚಾರ ಅಷ್ಟೇ ಅಲ್ಲದೆ, ವಿರಾಟ್ ಕೊಹ್ಲಿ ಅವರನ್ನು ನಾಯಕತ್ವದಿಂದ ಕೈಬಿಡುವ ಆಯ್ಕೆದಾರರ ನಿರ್ಧಾರವು ಕೋಲಾಹಲಕ್ಕೆ ಕಾರಣವಾಯಿತು. ಸೌರವ್ ಗಂಗೂಲಿಯೇ ಕೊಹ್ಲಿಯನ್ನು ಕೆಳಗಿಳಿಸಲು ಕಾರಣ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

Story first published: Thursday, August 11, 2022, 14:21 [IST]
Other articles published on Aug 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X