ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತೆಂಡೂಲ್ಕರ್‌ಗೆ 200 ರನ್ ಗಳಿಸಲು ದ್ರಾವಿಡ್ ಅವಕಾಶ ನೀಡಬೇಕಿತ್ತು; 2004ರ ಘಟನೆ ನೆನಪಿಸಿದ ಯುವಿ

 India Could Have Declared After Sachin Tendulkars Double Century In Multan Test Says Yuvraj Singh

ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರು 2004ರಲ್ಲಿ ಮುಲ್ತಾನ್‌ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಟೆಸ್ಟ್‌ನಲ್ಲಿ ಅಂದಿನ ನಾಯಕ ರಾಹುಲ್ ದ್ರಾವಿಡ್ ಅವರ ಕುಖ್ಯಾತ ಡಿಕ್ಲೇರ್‌ನ್ನು ನೆನಪಿಸಿಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್‌ಗೆ ದ್ವಿಶತಕ ಗಳಿಸಲು ಅವಕಾಶ ಅವಕಾಶವಿತ್ತು ಮತ್ತು ನೀಡಬೇಕಿತ್ತು ಎಂದು ಹೇಳಿರುವ ಯುವರಾಜ್ ಸಿಂಗ್, ಬೇಗ ಫಲಿತಾಂಶವನ್ನು ಪಡೆಯಲು ಭಾರತಕ್ಕಿನ್ನು ಸಾಕಷ್ಟು ಸಮಯವಿತ್ತು. ಈ ಮಧ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ತೆಂಡೂಲ್ಕರ್ ಮತ್ತು ತನಗೆ ತಮ್ಮ ಗುರಿಗಳನ್ನು ತ್ವರಿತ ವೇಗದಲ್ಲಿ ತಲುಪಲು ಹೇಳಲಾಯಿತು ಎಂದು ಯುವರಾಜ್ ಹಿಂದಿನ ಘಟನೆಯನ್ನು ಬಹಿರಂಗಪಡಿಸಿದರು.

ಯುವರಾಜ್ ಸಿಂಗ್ ಅವರ ಅರ್ಧಶತಕದ ನಂತರ ಭಾರತ ತನ್ನ ಮೊದಲ ಇನ್ನಿಂಗ್ಸ್ ಅನ್ನು 675/5 ಗೆ ಡಿಕ್ಲೇರ್ ಮಾಡಿಕೊಂಡಿತು. ಎಡಗೈ ಬ್ಯಾಟ್ಸ್‌ಮನ್ ಇಮ್ರಾನ್ ಫರ್ಹಾತ್ ಬೌಲಿಂಗ್ ತಕ್ಷಣ, ನಾಯಕ ರಾಹುಲ್ ದ್ರಾವಿಡ್ ಇಬ್ಬರು ಬ್ಯಾಟರ್‌ಗಳನ್ನು ವಾಪಸ್ ಡ್ರೆಸ್ಸಿಂಗ್ ರೂಂಗೆ ಕರೆದರು. ಇದು ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವರು ಆಶ್ಚರ್ಯಚಕಿತರಾದರು. ಸಚಿನ್ ತೆಂಡೂಲ್ಕರ್ 194 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದು, ಪಾಕಿಸ್ತಾನದ ನೆಲದಲ್ಲಿ ಐತಿಹಾಸಿಕ ದ್ವಿಶತಕಕ್ಕೆ ಕೇವಲ 6 ರನ್‌ಗಳ ಕೊರತೆಯಿತ್ತು.

ದ್ರಾವಿಡ್ ಡಿಕ್ಲೇರ್‌ನಿಂದ ಅಸಮಾಧಾನಗೊಂಡಿದ್ದ ಸಚಿನ್

ದ್ರಾವಿಡ್ ಡಿಕ್ಲೇರ್‌ನಿಂದ ಅಸಮಾಧಾನಗೊಂಡಿದ್ದ ಸಚಿನ್

ನಂತರದ ವರ್ಷಗಳಲ್ಲಿ ಸಚಿನ್ ತೆಂಡೂಲ್ಕರ್ ಅವರು ದ್ರಾವಿಡ್ ಡಿಕ್ಲೇರ್‌ನಿಂದ ತಾನು ಹೇಗೆ ಅಸಮಾಧಾನಗೊಂಡಿದ್ದೆ ಎಂಬ ಬಗ್ಗೆ ಮಾತನಾಡಿದ್ದರು. ತಮ್ಮ ಆತ್ಮಚರಿತ್ರೆ, "ಪ್ಲೇಯಿಂಗ್ ಇಟ್ ಮೈ ವೇ'ನಲ್ಲಿ ತೆಂಡೂಲ್ಕರ್ ಅವರು ತಮ್ಮ ಮಾಜಿ ಸಹ ಆಟಗಾರ ದ್ರಾವಿಡ್ ಅವರಿಗೆ ಡಿಕ್ಲೇರ್‌ನಿಂದ ಅಸಮಾಧಾನವಾಗಿತ್ತು ಎಂದು ಹೇಳಿದ್ದರು ಎಂಬುದನ್ನು ಯುವರಾಜ್ ಸಿಂಗ್ ನೆನಪಿಸಿಕೊಂಡಿದ್ದಾರೆ.

ಹಳೆಯ ಘಟನೆಗಳನ್ನು ನೆನಪಿಸಿಕೊಂಡ ಯುವರಾಜ್ ಸಿಂಗ್, ತೆಂಡೂಲ್ಕರ್ 200 ರನ್ ಗಳಿಸಿದ ನಂತರ ಭಾರತ ಡಿಕ್ಲೇರ್ ಮಾಡಬೇಕಿತ್ತು ಎಂದು ಹೇಳಿದರು.

ಇನ್ನೊಂದು ಓವರ್‌ನಲ್ಲಿ ಆ 6 ರನ್‌ಗಳನ್ನು ಪಡೆಯಬಹುದಿತ್ತು

ಇನ್ನೊಂದು ಓವರ್‌ನಲ್ಲಿ ಆ 6 ರನ್‌ಗಳನ್ನು ಪಡೆಯಬಹುದಿತ್ತು

"ಸಚಿನ್ ತೆಂಡೂಲ್ಕರ್ ಇನ್ನೊಂದು ಓವರ್‌ನಲ್ಲಿ ಆ ಆರು ರನ್‌ಗಳನ್ನು ಪಡೆಯಬಹುದಿತ್ತು ಮತ್ತು ಅದರ ನಂತರ ನಾವು 8-10 ಓವರ್‌ಗಳನ್ನು ಬೌಲ್ ಮಾಡಿದೆವು. ಇನ್ನೆರಡು ಓವರ್‌ಗಳು ಟೆಸ್ಟ್ ಪಂದ್ಯಕ್ಕೆ ವ್ಯತ್ಯಾಸ ಮಾಡಬಹುದೆಂದು ನಾನು ಭಾವಿಸುವುದಿಲ್ಲ,'' ಎಂದು ತಿಳಿಸಿದರು.

ಇದು ಮೂರನೇ ಅಥವಾ ನಾಲ್ಕನೇ ದಿನವಾಗಿದ್ದರೆ ಮತ್ತು ನೀವು 150 ಆಸುಪಾಸಿನಲ್ಲಿದ್ದಾಗ ಡಿಕ್ಲೇರ್ ಮಾಡಿದ್ದರೆ ಸರಿ ಇತ್ತು ಎಂದು ಯುವರಾಜ್ ಹೇಳಿದರು.

100 ಟೆಸ್ಟ್‌ಗಳನ್ನು ಆಡಲು ಬಯಸಿದ್ದೆ

100 ಟೆಸ್ಟ್‌ಗಳನ್ನು ಆಡಲು ಬಯಸಿದ್ದೆ

ಆ ಮುಲ್ತಾನ್ ಟೆಸ್ಟ್‌ನಲ್ಲಿ ಭಾರತ ಇನ್ನಿಂಗ್ಸ್ ಮತ್ತು 52 ರನ್‌ಗಳ ಜಯ ಸಾಧಿಸಿತು. ಯುವರಾಜ್ ಸಿಂಗ್ ಪಾಕಿಸ್ತಾನದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಬಿಳಿ ಜೆರ್ಸಿಯಲ್ಲಿ ಉತ್ತಮ ಫಾರ್ಮ್ ಹೊಂದಿದ್ದರು, ನೂರು ಮತ್ತು ಐವತ್ತು ಸೇರಿದಂತೆ ಒಟ್ಟು 230 ರನ್ ಗಳಿಸಿದ್ದರು.

ಅದೇ ಫಾರ್ಮ್ ಮುಂದುವರೆದಿದ್ದರೆ, ಯುವರಾಜ್ ಸಿಂಗ್ ಟೆಸ್ಟ್ ಕ್ರಿಕೆಟ್‌ನಲ್ಲಿ ಸುದೀರ್ಘ ಅವಧಿಗೆ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದ್ದರು. ಆಲ್‌ರೌಂಡರ್ ಸ್ಥಿರ ಪ್ರದರ್ಶನದ ಅವಧಿಯಲ್ಲಿ 40ರ ಸರಾಸರಿಯನ್ನು ಹೊಂದಿದ್ದರು. ಆದರೆ ಅವರ ಫಾರ್ಮ್ ದೀರ್ಘ ಸ್ವರೂಪದ ಆಟದಲ್ಲಿ ಕಡಿಮೆಯಾಯಿತು. ಯುವರಾಜ್ ತಮ್ಮ ಟೆಸ್ಟ್ ವೃತ್ತಿಜೀವನವನ್ನು 40 ಪಂದ್ಯಗಳೊಂದಿಗೆ ಮುಗಿಸಿದರು. ಅದರಲ್ಲಿ 3 ಶತಕಗಳು ಸೇರಿದಂತೆ 1900 ರನ್ ಗಳಿಸಿದರು. ಈ ಸ್ಟಾರ್ ಬ್ಯಾಟರ್ 2012ರ ನಂತರ ಬಿಳಿ ಜೆರ್ಸಿಯಲ್ಲಿ ಭಾರತಕ್ಕಾಗಿ ಆಡಲೇ ಇಲ್ಲ.

Gayle ದಾಖಲೆ ಮುರಿದ David Warner | Oneindia Kannada
ಎರಡು ದಿನಗಳ ಕಾಲ ಬ್ಯಾಟಿಂಗ್ ಮಾಡಲು ಬಯಸಿದ್ದೆ

ಎರಡು ದಿನಗಳ ಕಾಲ ಬ್ಯಾಟಿಂಗ್ ಮಾಡಲು ಬಯಸಿದ್ದೆ

"ಅಂತಿಮವಾಗಿ, ಸೌರವ್ ಗಂಗೂಲಿ ಅವರ ನಿವೃತ್ತಿಯ ನಂತರ ನಾನು ಟೆಸ್ಟ್ ಕ್ರಿಕೆಟ್ ಆಡಲು ಅವಕಾಶಗಳನ್ನು ಪಡೆದಾಗ, ನನಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು,'' ಎಂದು ಅವರು ಹೇಳಿದರು.

"ಇದು ಕೇವಲ ದುರಾದೃಷ್ಟ. ನಾನು 100 ಟೆಸ್ಟ್ ಪಂದ್ಯಗಳನ್ನು ಆಡಲು 24x7 ಪ್ರಯತ್ನಿಸಿದೆ. ಆ ವೇಗದ ಬೌಲರ್‌ಗಳನ್ನು ಎದುರಿಸಲು ಮತ್ತು ಎರಡು ದಿನಗಳ ಕಾಲ ಬ್ಯಾಟಿಂಗ್ ಮಾಡಲು ಬಯಸಿದ್ದೆ," ಎಂದು ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ತಮ್ಮ ಮನದಾಳ ಹಂಚಿಕೊಂಡರು.

Story first published: Friday, May 6, 2022, 17:09 [IST]
Other articles published on May 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X