ಐಪಿಎಲ್ 2018 : ಕಿಂಗ್ಸ್ ನಡುವೆ ಕದನ, ಪಂಜಾಬ್ ಬ್ಯಾಟಿಂಗ್

Posted By:
IPL 2048 : Punjab vs Chennai

ಮೊಹಾಲಿ, ಏಪ್ರಿಲ್ 15: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018ರ 11ನೇ ಪಂದ್ಯದಲ್ಲಿ ರಾಯಲ್ಸ್ ನಡುವಿನ ಕದನದಲ್ಲಿ ರಾಜಸ್ಥಾನ್ ಜಯ ದಾಖಲಿಸಿದರೆ, 12ನೇ ಪಂದ್ಯದಲ್ಲಿ ಕಿಂಗ್ಸ್ ನಡುವೆ ಕದನ ರೋಚಕ ಅಂತ್ಯ ಕಂಡಿತು. ಗೆಲ್ಲಲು 198ರನ್ ಗಳಿಸಬೇಕಿದ್ದ ಚೆನ್ನೈ ತಂಡ, 4 ರನ್ ಗಳಿಂದ ಸೋಲು ಕಂಡಿತು.

ಲೈವ್ ಸ್ಕೋರ್ ಕಾರ್ಡ್, ಕಾಮೆಂಟ್ರಿ

ಶೇನ್ ವಾಟ್ಸನ್ 11 ಹಾಗೂ ಮುರಳಿ ವಿಜಯ್ 12ರನ್ ಗಳಿಸಿ ಬೇಗನೇ ಔಟಾದರು. ಅಂಬಟಿ ರಾಯುಡು 49ರನ್ (35 ಎಸೆತಗಳು) ಹಾಗೂ ನಾಯಕ ಧೋನಿ 79ರನ್ (44ಎಸೆತಗಳು, 6 ಬೌಂಡರಿ, 5ಸಿಕ್ಸರ್) ಸಿಡಿಸಿ ಅಜೇಯರಾಗಿ ಉಳಿದರೂ ಪಂದ್ಯವನ್ನು ಗೆಲ್ಲಿಸಲಾಗಲಿಲ್ಲ. ಜಡೇಜ 19ರನ್ ಗಳಿಸಿ ಔಟಾದರು. ಅಂತಿಮವಾಗಿ 193/5 ಗಳಿಸಿತು. ಪಂಜಾಬ್ ಪರ ಟೈ 2, ಅಶ್ವಿನ್, ಮೋಹಿತ್ 1 ವಿಕೆಟ್ ಗಳಿಸಿದರು.

ಪಂಜಾಬ್ ಇನ್ನಿಂಗ್ಸ್ : ಕೆಎಲ್ ರಾಹುಲ್ 37ರನ್ (22 ಎಸೆತಗಳು, 7ಬೌಂಡರಿ), ಕ್ರಿಸ್ ಗೇಲ್ 63ರನ್ (33ಎಸೆತಗಳು, 7ಬೌಂಡರಿ, 4ಸಿಕ್ಸರ್), ಮಾಯಾಂಕ್ 19ಎಸೆತಗಳಲ್ಲಿ30,ಕರುಣ್ 17 ಎಸೆತಗಳಲ್ಲಿ 29ರನ್ ಎಲ್ಲರ ಕೊಡುಗೆಯಿಂದ 197/7ಸ್ಕೋರ್ ಮಾಡಿತು.

ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ನಾಯಕ ಎಂಎಸ್ ಧೋನಿ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಕಿಂಗ್ಸ್ XI ಪಂಜಾಬ್ ಪರ ಇಂದು ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಕಣಕ್ಕಿಳಿದಿದ್ದಾರೆ.

ಐಪಿಎಲ್ ವಿಶೇಷ ಪುಟ| ಚೆನ್ನೈ ವೇಳಾಪಟ್ಟಿ | ಪಂಜಾಬ್ ವೇಳಾಪಟ್ಟಿ

ಗಾಯಾಳು ಅಕ್ಷರ್ ಪಟೇಲ್ ಬದಲಿಗೆ ವೇಗಿ ಬರೀಂದರ್ ಸ್ರಾನ್ ಅವರು ಪಂಜಾಬ್ ತಂಡ ಸೇರಿದ್ದಾರೆ. ಚೆನ್ನೈ ತಂಡದಲ್ಲಿ ಸುರೇಶ್ ರೈನಾ ಬದಲಿಗೆ ಮುರಳಿ ವಿಜಯ್ ತಂಡ ಸೇರಿದ್ದಾರೆ.

ತಂಡ ಇಂತಿದೆ:
ಪಂಜಾಬ್ : ಲೋಕೇಶ್ ರಾಹುಲ್(ವಿಕೆಟ್ ಕೀಪರ್), ಕ್ರಿಸ್ ಗೇಲ್, ಮಾಯಾಂಕ್ ಅಗರವಾಲ್, ಅರೋನ್ ಫಿಂಚ್, ಯುವರಾಜ್ ಸಿಂಗ್, ಕರುಣ್ ನಾಯರ್, ರವಿಚಂದ್ರನ್ ಅಶ್ವಿನ್ (ನಾಯಕ), ಆಂಡ್ರ್ಯೂ ಟೈ, ಬರೀಂದರ್ ಸ್ರಾನ್, ಮೋಹಿತ್ ಶರ್ಮ, ಮುಜೀಬ್ ಉರ್ ರಹ್ಮಾನ್.

ಚೆನ್ನೈ: ಶೇನ್ ವಾಟ್ಸನ್, ಅಂಬಟಿ ರಾಯುಡು, ಮುರಳಿ ವಿಜಯ್, ಎಂ ಎಸ್ ಧೋನಿ(ನಾಯಕ), ಸ್ಯಾಮ್ ಬಿಲ್ಲಿಂಗ್ಸ್, ರವೀಂದ್ರ ಜಡೇಜ, ಡ್ವಾಯ್ನೆ ಬ್ರಾವೋ, ದೀಪಕ್ ಚಾಹರ್, ಹರ್ಭಜನ್ ಸಿಂಗ್, ಇಮ್ರಾನ್ ತಾಹೀರ್, ಶಾರ್ದೂಲ್ ಠಾಕೂರ್.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, April 15, 2018, 20:24 [IST]
Other articles published on Apr 15, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ