ಕೆಕೆಆರ್ ಗೆ ದಿನೇಶ್ ಕ್ಯಾಪ್ಟನ್, ಉತ್ತಪ್ಪ ಉಪ ನಾಯಕ

Posted By:
IPL 2018: Dinesh Karthik appointed Kolkata Knight Riders captain; Robin Uthappa named vice-captain

ಕೋಲ್ಕತಾ, ಮಾರ್ಚ್ 04: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಎರಡು ಬಾರಿ ಚಾಂಪಿಯನ್ ತಂಡ ಕೋಲ್ಕತ್ತಾ ನೈಟ್‌ ರೈಡರ್ಸ್‌‌ ಗೆ ಹೊಸ ಕ್ಯಾಪ್ಟನ್‌‌ ಹಾಗೂ ವೈಸ್ ಕ್ಯಾಪ್ಟನ್ ನೇಮಿಸಲಾಗಿದೆ.

ಕನ್ನಡಿಗ ರಾಬಿನ್‌‌ ಉತ್ತಪ್ಪ ಅವರು ನಾಯಕರಾದರೆ ಒಳ್ಳೆಯದು ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಅವರು ಶಿಫಾರಸು ಮಾಡಿದ್ದರು. ಆದರೆ, ಕೆಕೆಆರ್ ತಂಡದ ಮ್ಯಾನೇಜ್ಮೆಂಟ್ ಬೇರೆಯದ್ದೇ ನಿರ್ಧಾರ ಕೈಗೊಂಡಿದೆ.

ಆದರೆ, ಕೆಕೆಆರ್‌ ತಂಡದ ಕ್ಯಾಪ್ಟನ್‌ ಆಗಿ ದಿನೇಶ್‌ ಕಾರ್ತಿಕ್‌ ರನ್ನು ನೇಮಿಸಲಾಗಿದ್ದು, ರಾಬಿನ್ ಉತ್ತಪ್ಪ ಅವರನ್ನು ನೇಮಿಸಲಾಗಿದೆ.

ಕೋಲ್ಕತಾ ನೈಟ್‌‌ರೈಡರ್ಸ್(ಕೆಕೆಆರ್) ತಂಡಕ್ಕೆ ಎರಡು ಬಾರಿ ಕಪ್ ಗೆಲ್ಲಿಸಿಕೊಟ್ಟಿದ್ದ ಮಾಜಿ ನಾಯಕ ಗೌತಮ್ ಗಂಭೀರ್ ಅವರು ಈ ಬಾರಿ ಡೆಲ್ಲಿ ಡೇರ್ ಡೆವಿಲ್ಸ್‌‌ ತಂಡದ ಪರ ಆಡುತ್ತಿದ್ದಾರೆ.

Story first published: Sunday, March 4, 2018, 12:24 [IST]
Other articles published on Mar 4, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ