ಐಪಿಎಲ್ 2018: ಹೈದರಾಬಾದ್ v/s ಕೋಲ್ಕತಾ ಪಂದ್ಯದ ವರದಿ

Written By:

ಕೊಲ್ಕತ್ತ, ಏಪ್ರಿಲ್ 14: ಕೊಲ್ಕತ್ತ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಐಪಿಎಲ್ ಟೂರ್ನಿಯ 10ನೇ ಪಂದ್ಯ ಇಂದು ಕೊಲ್ಕತ್ತದ ಈಡನ್ ಗಾರ್ಡೆನ್ ನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಹೈದರಾಬಾದ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡು, ಕೋಲ್ಕತಾ ತಂಡವನ್ನು 138 ಸ್ಕೋರಿಗೆ ನಿಯಂತ್ರಿಸಿದೆ.

ಪಂದ್ಯದ ಲೈವ್ ಸ್ಕೋರ್ ಕಾರ್ಡ್, ಕಾಮೆಂಟ್ರಿ ಇಲ್ಲಿದೆ

ಎರಡೂ ತಂಡಗಳಿಗೆ ಇದು ಈ ಋತುವಿನ ಐಪಿಲ್‌ನಲ್ಲಿ ಮೂರನೇ ಪಂದ್ಯವಾಗಿದ್ದು, ಆಡಿದ ಎರಡೂ ಪಂದ್ಯಗಳಲ್ಲಿ ಹೈದರಾಬಾದ್ ತಂಡ ಗೆದ್ದಿದ್ದರೆ, ಒಂದರಲ್ಲಿ ಕೊಲ್ಕತ್ತ ತಂಡ ಸೋತಿದೆ.

ಐಪಿಎಲ್ 2018ರ ವಿಶೇಷ ಪುಟ | ಕೋಲ್ಕತಾ ವೇಳಾಪಟ್ಟಿ | ಹೈದರಾಬಾದ್ ವೇಳಾಪಟ್ಟಿ

ಕೆಕೆಆರ್ ಇನ್ನಿಂಗ್ಸ್: ಕ್ರಿಸ್ ಲಿನ್ 49(34ಎಸೆತ), ನಾಯಕ ದಿನೇಶ್ ಕಾರ್ತಿಕ್ 29, ನಿತೀಶ್ ರಾಣಾ 18ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಎರಡಂಕಿ ಸ್ಕೋರ್ ಗಳಿಸಲಿಲ್ಲ. ಹೈದರಾಬಾದ್ ಪರ ಭುವನೇಶ್ವರ್ ಕುಮಾರ್ 3, ಸ್ಟಾನ್ಲೇಕ್, ಶಕೀಬ್ ತಲಾ 2 ವಿಕೆಟ್ ಗಳಿಸಿ, ಕೆಕೆಆರ್ ತಂಡವನ್ನು 20 ಓವರ್ ಗಳಲ್ಲಿ 138/8 ಸ್ಕೋರಿಗೆ ನಿಯಂತ್ರಿಸಿದರು. ಮನೀಶ್ ಪಾಂಡೆ ಎರಡು ಅದ್ಭುತ ಕ್ಯಾಚ್ ಹಿಡಿದರು.

ಮೇಲ್ನೋಟಕ್ಕೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಬಲಿಷ್ಠವಾಗಿ ಕಾಣುತ್ತಿದ್ದು, ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಸಮತೋಲನ ಹೊಂದಿದ ತಂಡವಾಗಿದೆ. ಅಫ್ಘಾನಿಸ್ತಾನದ ಬೌಲರ್‌ ರಶೀದ್ ಖಾನ್ ಹೈದರಾಬಾದ್ ತಂಡದ ಸ್ಟಾರ್ ಪರ್ಫಾಮರ್‌ ಆಗಿ ಹೊರಹೊಮ್ಮಿದ್ದಾರೆ.

ಕೋಲ್ಕತ್ತಾ ತಂಡವು ಪ್ರತಿಭಾನ್ವಿತ ಆಟಗಾರರ ಗುಚ್ಛವಾಗಿದ್ದು, ಬೌಲಿಂಗ್ ಆ ತಂಡದ ಸಮಸ್ಯೆಯಾಗಿದೆ. ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಕೊನೆಯ ಓವರ್‌ನಲ್ಲಿ ಗೆಲುವು ಬಿಟ್ಟುಕೊಟ್ಟು ನಿರಾಶೆ ಅನುಭವಿಸಿದೆ.

ತಂಡಗಳು ಇಂತಿವೆ...
ಕೊಲ್ಕತ್ತ ನೈಟ್ ರೈಡರ್ಸ್
ದಿನೇಶ್ ಕಾರ್ತಿಕ್ (ನಾಯಕ,ಕೀಪರ್), ಕ್ರಿಸ್ ಲೆನ್, ಸುನಿಲ್ ನರೇನ್, ರಾಬಿನ್ ಉತ್ತಪ್ಪ, ನಿತೀಶ್ ರಾನಾ, ಆಂಡ್ರೆ ರಸೆಲ್, ಪಿಯೂಶ್ ಚಾವ್ಲಾ, ಮಿಶೆಲ್ ಜಾನ್ಸನ್, ಶುಭ್‌ಮನ್‌ ಗಿಲ್, ಶಿವಂ ಮಾವಿ, ಕುಲದೀಪ್ ಯಾದವ್.

ಸನ್‌ರೈಸರ್ಸ್ ಹೈದರಾಬಾದ್
ಕೇನ್ ವಿಲಿಯಮ್ಸ್ (ನಾಯಕ), ಶಿಖರ್ ಧವನ್, ವೃದ್ಧಿಮಾನ್ ಸಹಾ, ಮನೀಶ್ ಪಾಂಡೆ, ಶಕಿಬ್ ಅಲ್ ಹಸನ್, ದೀಪಕ್ ಹೂಡಾ, ಯೂಸಫ್ ಪಠಾಣ್, ಸಂದೀಪ್ ಶರ್ಮಾ, ಭುವನೇಶ್ವರ್ ಕುಮಾರ್, ರಶೀದ್ ಖಾನ್, ಸಿದ್ದಾರ್ಥ್‌ ಕೌಲ್, ಬಿಲ್ಲಿ ಸ್ಟಾನ್ಲ್ಕೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, April 14, 2018, 19:57 [IST]
Other articles published on Apr 14, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ