ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಯಲ್ ಚಾಲೆಂಜರ್ಸ್ vs ಸೂಪರ್ ಕಿಂಗ್ಸ್: ಪ್ಲಸ್ಸು-ಮೈನಸ್ಸು!

ipl 2018: RCB vs CSK, 35 match-preview: When, where, how ?

ಪುಣೆ, ಮೇ 5: ಐಪಿಎಲ್ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು 5ನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ ತಂಡಗಳ ನಡುವೆ ಇಂದು ಮಹಾರಾಷ್ಟ್ರದ ಪುಣೆಯಲ್ಲಿ ಹಣಾಹಣಿ ನಡೆಯಲಿದೆ. ಈ 11ನೇ ಐಪಿಎಲ್ ಆವೃತ್ತಿಯಲ್ಲಿ ನಡೆಯಲಿರುವ 35ನೇ ಪಂದ್ಯವಿದು.

ಕಳೆದ ಪಂದ್ಯದಲ್ಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಎದುರು ಬೆಂಗಳೂರು 14 ರನ್ ಜಯ ಸಾಧಿಸಿ ಬೀಗಿತ್ತು. ಅದರೆ ಹಿಂದಿನಿಂದಲೂ ಸಾಲು ಸಾಲಾಗಿ ಸೋಲುತ್ತಲೇ ಬಂದಿದ್ದ ಬೆಂಗಳೂರನ್ನು ಮುಂಬೈ ಎದುರಿನ ಒಂದು ಗೆಲುವು ಮೇಲೆತ್ತಲಾರದು. ಹಾಗಾಗಿ ಇಂದಿನ ಪಂದ್ಯವನ್ನು ಗೆಲ್ಲುವ ಒತ್ತಡದಲ್ಲಿ ಬೆಂಗಳೂರು ತಂಡವಿದೆ.

ಸ್ಕೋರ್ ಕಾರ್ಡ್

ಇಂದಿನ ಪಂದ್ಯದ ಟಾಸ್ ಈಗಾಗಲೇ ಮುಗಿದಿದೆ. ಟಾಸ್ ಗೆದ್ದು ಚೆನ್ನೈ ಫೀಲ್ಡಿಂಗ್ ಆಯ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 127 ರನ್ ಪೇರಿಸಿ ಚೆನ್ನೈಗೆ 128 ರನ್ ಗುರಿ ನೀಡಿದೆ. ಚೆನ್ನೈ ಪಂದ್ಯವನ್ನಾಡುತ್ತಿದೆ.

ಕೋಲ್ಕತ್ತಾದಲ್ಲಿ ನಡೆದಿದ್ದ ಹಿಂದಿನ ಪಂದ್ಯದಲ್ಲಿ ಚೆನ್ನೈ ಸೋತಿದ್ದರಿಂದ ಚೆನ್ನೈಗೂ ಇಂದಿನ ಪಂದ್ಯ ಮಹತ್ವದ್ದೇ. ಈ ಪಂದ್ಯ ಸೋತರೆ ಚೆನ್ನೈ ಅಂಕಪಟ್ಟಿಯಿಂದ ಕೆಳ ಜಾರುತ್ತಾ ಬಂದರೆ, ಬೆಂಗಳೂರಿಗೆ ಜಿಗಿತ ಕಾಣಲು ಅನುಕೂಲವಾಗುತ್ತದೆ. ಈ ಕಾರಣಕ್ಕಾಗಿಯೇ ಇಂದಿನದು ಕೊಂಚ ಕುತೂಹಲಕಾರಿ ಪಂದ್ಯ

<em>ಐಪಿಎಲ್: ಪ್ಲೇ ಆಫ್‌ ಪಂದ್ಯಗಳು ಪುಣೆಯಿಂದ ಕೋಲ್ಕತಾಗೆ ಶಿಫ್ಟ್</em>ಐಪಿಎಲ್: ಪ್ಲೇ ಆಫ್‌ ಪಂದ್ಯಗಳು ಪುಣೆಯಿಂದ ಕೋಲ್ಕತಾಗೆ ಶಿಫ್ಟ್

ಬೆಂಗಳೂರು ತಂಡದಲ್ಲಿ ಬದಲಾವಣೆ
ಬೆಂಗಳೂರು ತಂಡದಲ್ಲಿ ಸಣ್ಣ ಬದಲಾವಣೆಗಳಾಗಿವೆ. ಅನಾರೋಗ್ಯದಿಂದಾಗಿ ಕೆಲ ಪಂದ್ಯಗಳಿಂದ ಹೊರಗುಳಿದಿದ್ದ ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ತಂಡವನ್ನು ಮತ್ತೆ ಸೇರಿಕೊಂಡಿರುವುದು ಆರ್ಸಿಬಿಗೆ ಬಲ ನೀಡಿದೆ. ಇದರೊಂದಿಗೆ ಹಿಂದಿನ ಪಂದ್ಯದಲ್ಲಿದ್ದ ಆರ್ಸಿಬಿ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ತಂಡದಿಂದ ಕಾರಣಾಂತರ ಹೊರಗುಳಿದಿದ್ದಾರೆ. ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಅವರು ತವರಾದ ದಕ್ಷಿಣ ಆಫ್ರಿಕಾಕ್ಕೆ ತೆರಳುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ ಡಿ ಕಾಕ್ ಜಾಗಕ್ಕೆ ಪಾರ್ಥೀವ್ ಪಟೇಲ್ ಅವರನ್ನು ನೇಮಿಸಿಕೊಳ್ಳಲಾಗಿದೆ.

ಆರ್‌ಸಿಬಿ ತಂಡಕ್ಕೆ ಸಿಗಲಿದೆ ಎಬಿ ಡಿವಿಲಿಯರ್ಸ್ ಶಕ್ತಿಮದ್ದುಆರ್‌ಸಿಬಿ ತಂಡಕ್ಕೆ ಸಿಗಲಿದೆ ಎಬಿ ಡಿವಿಲಿಯರ್ಸ್ ಶಕ್ತಿಮದ್ದು

ಕೀಪಿಂಗ್ ವಿಚಾರದಲ್ಲಿ ಕ್ವಿಂಟನ್ ಡಿ ಕಾಕ್ ಅವರಿಗಿಂತ ಪಾರ್ಥೀವ್ ಪಟೇಲ್ ಅವರೇ ಕೊಂಚ ಹಿಡಿತ ಉಳ್ಳವರಂತೆ ಕಂಡರೂ ಬ್ಯಾಟಿಂಗ್ ವಿಚಾರದಲ್ಲಿ ಹೆಚ್ಚು ಬಲ ತುಂಬುವ ಶಕ್ತಿ ಕ್ವಿಂಟನ್ ಗಿತ್ತು. ಆದರೆ ಪಾರ್ಥೀವ್ ಬ್ಯಾಟಿಂಗ್ ಕಳಪೆ ಎನ್ನುವಂತಿಲ್ಲ. ಒಟ್ಟಿನಲ್ಲಿ ಇಂದಿನ ಪಂದ್ಯದಲ್ಲಿ ತಂಡದ ಬದಲಾವಣೆ ಕುತೂಹಲ ಮೂಡಿಸಿದೆ.

ಬ್ರಾವೋ ಆರ್ಭಟದ ನಿರೀಕ್ಷೆ
ಹಿಂದಿನ ಕೋಲ್ಕತ್ತ-ಚೆನ್ನೈ ಪಂದ್ಯದಲ್ಲಿ ಬ್ರಾವೋ ಅವರಿಗೆ ಬ್ಯಾಟ್ ಬೀಸಲು ಅವಕಾಶ ಲಭಿಸಿರಲಿಲ್ಲ. ಈ ವಿಚಾರವಾಗಿ ಗಾವಸ್ಕರ್ ಇದು ಸರಿಯಲ್ಲ ಎಂದು ಚೆನ್ನೈಗೆ ಸಲಹೆ ನೀಡಿದ್ದರು. ಆಲ್ ರೌಂಡರ್ ಬ್ರಾವೋ ಬ್ಯಾಟಿಂಗ್ ಮತ್ತು ಬೌಲಿಂಗ್ ಜೊತೆಗೆ ಫೀಲ್ಡಿಂಗ್ ನಲ್ಲೂ ಮುಂಚುವ ಆಟಗಾರನಾಗಿರುವುದರಿಂದ ಅವರನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಗಾವಸ್ಕರ್ ಚೆನ್ನೈಗೆ ಸಲಹೆ ನೀಡಿದ್ದರು. ಹಿರಿಯ ಮಾಜಿ ಆಟಗಾರ ಗಾವಸ್ಕರ್ ಮಾತನ್ನು ಚೆನ್ನೈ ಪರಿಗಣಿಸಿ ಬ್ರಾವೋ ಅವರನ್ನು ಮುಂದಿಟ್ಟರೆ ಬೆಂಗಳೂರಿಗೆ ಜಯದ ಹಾದಿ ದೂರವಾಗುವ ಸಂಭವ ಹೆಚ್ಚು.

Story first published: Saturday, May 5, 2018, 18:05 [IST]
Other articles published on May 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X