ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಮೂವರು ಪ್ಲೇಯರ್ಸ್

ABD

ಇಂಡಿಯನ್ ಪ್ರೀಮಿಯರ್ ಲೀಗ್ ಎಂದಾಕ್ಷಣ ನಮಗೆ ನೆನಪಾಗೋದು ರೋಚಕ ಪಂದ್ಯಗಳು, ಅಬ್ಬರದ ಆಟ, ಸಿಕ್ಸರ್ ಸಿಡಿಸುವ ದಾಂಡಿಗರು. ಸಿಕ್ಸರ್‌ಗಳ ಸುರಿಮಳೆಯೇ ಕಾಣುವ ಈ ಚುಟುಕು ಲೀಗ್‌ನಲ್ಲಿ ಅನೇಕ ಆಟಗಾರರು ಅಬ್ಬರಿಸಿರೋದನ್ನ ನಾವು ಕಂಡಿದ್ದೇವೆ.

ವಿದೇಶಿ ಆಟಗಾರರ ಪಟ್ಟಿ ತೆಗೆದುಕೊಂಡರೆ ಸಿಕ್ಸರ್ ಹೀರೋಗಳ ಪಟ್ಟಿಯೇ ದೊಡ್ಡದಾಗುತ್ತದೆ. ಇದು ಕ್ರಿಸ್ ಗೇಲ್‌ನಿಂದ ಡೇವಿಡ್ ವಾರ್ನರ್‌ವರೆಗೆ ನಾವು ಕಾಣಬಹುದು. ಆದ್ರೆ ಇಲ್ಲಿಯವರೆಗಿನ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಮೂವರು ಆಟಗಾರರು ಎಂದು ತಿಳಿದುಕೊಳ್ಳುವುದಾದರೆ, ಆ ಸ್ಟಾರ್‌ಗಳ ಕುರಿತಾದ ಮಾಹಿತಿ ಈ ಕೆಳಗಿದೆ.

ಕ್ರಿಸ್‌ಗೇಲ್‌ (357 ಸಿಕ್ಸರ್‌)

ಕ್ರಿಸ್‌ಗೇಲ್‌ (357 ಸಿಕ್ಸರ್‌)

ವೆಸ್ಟ್ ಇಂಡೀಸ್ ದಂತಕಥೆ ಕ್ರಿಸ್ ಗೇಲ್ ಸಾರ್ವಕಾಲಿಕ ದಾಖಲೆಯನ್ನು ಹೊಂದಿದ್ದಾರೆ. ಟಿ20 ಸ್ವರೂಪದಲ್ಲಿ ಅತಿ ಹೆಚ್ಚು ರನ್ ಸ್ಕೋರರ್ ಆಗಿರುವ ಇವರು ತಮ್ಮನ್ನು ತಾವು ಯೂನಿವರ್ಸಲ್ ಬಾಸ್ ಎಂದು ಕರೆದುಕೊಳ್ಳುತ್ತಾರೆ. ಐಪಿಎಲ್‌ನಲ್ಲಿ ಇದುವರೆಗೆ ಗೇಲ್ ವಿವಿಧ ಫ್ರಾಂಚೈಸಿಗಳಿಗಾಗಿ 357 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಸಿಕ್ಸರ್‌ಗಳ ವಿಚಾರದಲ್ಲಿ ಗೇಲ್‌ನ ಮುಂದೆ ಯಾರು ಇಲ್ಲ. ಮತ್ತೊಬ್ಬ ಕ್ರಿಸ್‌ಗೇಲ್‌ನನ್ನ ಮೀರಿಸೋದು ಸಹ ಅನುಮಾನ.

ಹೆಚ್ಚು ಸೀಸನ್‌ಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದಾಗ ಗೇಲ್ ಅತ್ಯಂತ ಅಪಾಯಕಾರಿ ಆಟಗಾರ. ಅವರು ಅಂತಿಮವಾಗಿ ಪಂಜಾಬ್ ಕಿಂಗ್ಸ್‌ನ ಭಾಗವಾಗಿದ್ದರು. ಕಳೆದ ಋತುವಿನಲ್ಲಿ ಗೇಲ್ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಮುಂಬರುವ ಋತುವಿನಲ್ಲಿ ಅವರು ಐಪಿಎಲ್‌ನಲ್ಲಿ ಆಡುತ್ತಿಲ್ಲ.ಇದಕ್ಕೆ ಕಾರಣ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಹರಾಜು ಪ್ರಕ್ರಿಯೆಯಿಂದ ಕ್ರಿಸ್‌ ಗೇಲ್ ಅವರೇ ಹರಾಜಿನಿಂದ ಹಿಂದೆ ಸರಿಯುತ್ತಿದ್ದರು.

ಅವರು ಐಪಿಎಲ್‌ನಲ್ಲಿ ಇದುವರೆಗೆ 142 ಪಂದ್ಯಗಳಲ್ಲಿ 39.72 ಸರಾಸರಿಯಲ್ಲಿ 148.96 ಸ್ಟ್ರೈಕ್ ರೇಟ್‌ನೊಂದಿಗೆ 4965 ರನ್ ಗಳಿಸಿದ್ದಾರೆ.

IPLಗೂ ಮುನ್ನ ಧೋನಿ ಸಮರಾಭ್ಯಾಸ: ಸೂರತ್‌ನಲ್ಲಿ ಸೂಪರ್ ಫಿಟ್ ಆಗುತ್ತಿರುವ 'ತಲ'

ಎಬಿಡಿ ವಿಲಿಯರ್ಸ್ (251 ಸಿಕ್ಸರ್‌)

ಎಬಿಡಿ ವಿಲಿಯರ್ಸ್ (251 ಸಿಕ್ಸರ್‌)

'ಮಿಸ್ಟರ್ 360' ಎಂದು ಕರೆಯಲ್ಪಡುವ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟಿಂಗ್ ದಿಗ್ಗಜ ಎಬಿ ಡಿವಿಲಿಯರ್ಸ್ ಐಪಿಎಲ್‌ನಲ್ಲಿ ಎರಡನೇ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರಾಗಿದ್ದಾರೆ. ಅವರು 251 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅವರು ತಮ್ಮ ವೃತ್ತಿಜೀವನವನ್ನು ಡೆಲ್ಲಿ ಕ್ಯಾಪಿಟಲ್ಸ್ (ದೆಲ್ಲಿ ಡೇರ್‌ಡೆವಿಲ್ಸ್) ನೊಂದಿಗೆ ಪ್ರಾರಂಭಿಸಿದರು ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ದೀರ್ಘಕಾಲ ಆಡಿದರು.

ಎಬಿಡಿ ಕಳೆದ ಸೀಸನ್‌ವರೆಗೂ ಆರ್‌ಸಿಬಿ ಜೊತೆಯಲ್ಲೇ ಇದ್ದರು. ಆದರೆ ಈ ದಿಗ್ಗಜ ಆಟಗಾರನಿಗೆ ಐಪಿಎಲ್ ಪ್ರಶಸ್ತಿ ಗೆಲ್ಲುವ ಭಾಗ್ಯ ಸಿಕ್ಕಿಲ್ಲ. ಕಳೆದ ಋತುವಿನ ನಂತರ ಎಬಿಡಿ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಗೆ ನಿವೃತ್ತಿ ಘೋಷಿಸಿದರು.

ಐಪಿಎಲ್‌ನಲ್ಲಿ ಅವರನ್ನು ಮತ್ತೆ ನೋಡುವ ಅವಕಾಶ ಕ್ರಿಕೆಟ್ ಅಭಿಮಾನಿಗಳಿಗೆ ಸಿಗುವುದಿಲ್ಲ. ಎಬಿಡಿ 184 ಐಪಿಎಲ್ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಅವರು 151.68 ಸ್ಟ್ರೈಕ್ ರೇಟ್‌ನೊಂದಿಗೆ 39.70 ರ ಸರಾಸರಿಯಲ್ಲಿ 5162 ರನ್ ಗಳಿಸಿದರು.

ಐಪಿಎಲ್ 2022: ಚೆನ್ನೈ ಸೂಪರ್ ಕಿಂಗ್ಸ್ ಸೇರಿದ ಯುವ ಕ್ರಿಕೆಟಿಗ

ಎಂಎಸ್ ಧೋನಿ ಅಭ್ಯಾಸದಲ್ಲಿ ತೊಡಗಿರುವ ವಿಡಿಯೋ ವೈರಲ್ | Oneindia Kannada
ರೋಹಿತ್ ಶರ್ಮಾ

ರೋಹಿತ್ ಶರ್ಮಾ

ಮುಂಬೈ ಇಂಡಿಯನ್ಸ್ ಮತ್ತು ರಾಷ್ಟ್ರೀಯ ತಂಡದ ನಾಯಕ ರೋಹಿತ್ ಶರ್ಮಾ ಅವರು ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬೀಸಿದ ಮೂರನೇ ಆಟಗಾರರಾಗಿದ್ದಾರೆ. ಅವರು 227 ಸಿಕ್ಸರ್‌ಗಳೊಂದಿಗೆ ಈ ಸ್ಥಾನದಲ್ಲಿದ್ದಾರೆ. ರೋಹಿತ್ ಪ್ರಸ್ತುತ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ.

ಅವರು ತಮ್ಮ ಐಪಿಎಲ್ ವೃತ್ತಿಜೀವನವನ್ನು ಡೆಕ್ಕನ್ ಚಾರ್ಜರ್ಸ್‌ನೊಂದಿಗೆ ಪ್ರಾರಂಭಿಸಿದರು ಮತ್ತು ನಂತರ ಮುಂಬೈ ತಂಡದ ಭಾಗವಾದರು.

ಮುಂಬೈ ತಂಡಕ್ಕೆ ಬಂದಿದ್ದೇ ಕೆಲವು ಸಮಯದಲ್ಲಿ ರೋಹಿತ್ ನಾಯಕರಾದರು ಮತ್ತು ಮುಂಬೈ ಐದು ಬಾರಿ ಪ್ರಶಸ್ತಿ ಗೆಲ್ಲಲು ಸಹಾಯ ಮಾಡಿದರು. ಎಬಿಡಿ ನಿವೃತ್ತಿಯಾಗಿರುವುದರಿಂದ ರೋಹಿತ್ ಅವರನ್ನು ಹಿಂದಿಕ್ಕಿ ಸಿಕ್ಸರ್‌ಗಳಲ್ಲಿ ಎರಡನೇ ಅತಿ ಹೆಚ್ಚು ಸ್ಕೋರರ್ ಆಗುವ ಸಾಧ್ಯತೆಯಿದೆ. ಐಪಿಎಲ್ ನಲ್ಲಿ ಇದುವರೆಗೆ 213 ಪಂದ್ಯಗಳಲ್ಲಿ ಆಡಿದ್ದಾರೆ. ಈ ಪೈಕಿ ಅವರು 31.17ರ ಸರಾಸರಿಯಲ್ಲಿ 130.39 ಸ್ಟ್ರೈಕ್ ರೇಟ್‌ನೊಂದಿಗೆ 5611 ರನ್ ಗಳಿಸಿದ್ದಾರೆ.

Story first published: Wednesday, March 9, 2022, 9:39 [IST]
Other articles published on Mar 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X