ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಅಟ್ಯಾಕಿಂಗ್ ಕ್ರಿಕೆಟ್‌ ಕುರಿತು ಆಕ್ರೋಶಗೊಂಡ ಮೋಯಿನ್ ಅಲಿ: ಪಾಕ್ ವಿರುದ್ಧ ಮತ್ತೆ ಸೋಲು

moeen ali

ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಐದನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋಲನ್ನ ಅನುಭವಿಸಿದ ಇಂಗ್ಲೆಂಡ್ ತಂಡವು ಭಾರೀ ಮುಖಭಂಗ ಅನುಭವಿಸಿದೆ. ಗೆಲ್ಲುವ ಪಂದ್ಯವನ್ನ ಸುಲಭವಾಗಿ ಪಾಕ್‌ ತಂಡಕ್ಕೆ ಬಿಟ್ಟುಕೊಟ್ಟ ಇಂಗ್ಲೆಂಡ್ ಏಳು ಪಂದ್ಯಗಳ ಸರಣಿಯಲ್ಲಿ 2-3ರ ಅಂತರದಲ್ಲಿ ಹಿನ್ನಡೆ ಕಂಡಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ಪ್ರಬಲ ಬೌಲಿಂಗ್ ದಾಳಿಯ ಮೂಲಕ ಪಾಕಿಸ್ತಾನ ತಂಡವನ್ನ 145 ರನ್‌ಗಳಿಗೆ ಕಟ್ಟಿಹಾಕಿತು. ಸ್ಯಾಮ್ ಕರನ್, ಡೇವಿಡ್ ವಿಲ್ಲಿ ಹಾಗೂ ಮಾರ್ಕ್‌ ವುಡ್‌ ಸೂಪರ್ ಸ್ಪೆಲ್‌ಗೆ ಪಾಕಿಸ್ತಾನ 19 ಓವರ್‌ಗಳಲ್ಲಿ 145ರನ್‌ಗಳಿಗೆ ಆಲೌಟ್‌ ಆಯಿತು. ಆದ್ರೆ ಈ ಗುರಿಯನ್ನ ಬೆನ್ನತ್ತುವಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳು ಸಫಲರಾಗಲಿಲ್ಲ. ಕೆಟ್ಟ ಹೊಡೆತಕ್ಕೆ ಕೈ ಹಾಕಿದ್ದಲ್ಲದೆ ಒಂದು ಉತ್ತಮ ಜೊತೆಯಾಟವಾಡುವಲ್ಲಿ ಎಡವಿದ್ರು.

139 ರನ್‌ಗೆ ಸೀಮಿತಗೊಂಡ ಇಂಗ್ಲೆಂಡ್‌ಗೆ 6 ರನ್‌ಗಳ ಸೋಲು

139 ರನ್‌ಗೆ ಸೀಮಿತಗೊಂಡ ಇಂಗ್ಲೆಂಡ್‌ಗೆ 6 ರನ್‌ಗಳ ಸೋಲು

146ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಓಪನರ್‌ಗಳಾದ ಫಿಲಿಪ್ ಸಾಲ್ಟ್‌ ಮತ್ತು ಅಲೆಕ್ಸ್ ಹೇಲ್ಸ್‌ ಸಿಂಗಲ್ ಡಿಜಿಟ್‌ಗೆ ಔಟಾಗುವ ಮೂಲಕ ಕೆಟ್ಟ ಆರಂಭ ನೀಡಿದ್ರು. ಡೇವಿಡ್ ಮಲನ್ 35 ಎಸೆತಗಳಲ್ಲಿ 36 ರನ್ ದಾಖಲಿಸಿ ಔಟಾದ್ರೆ, ನಾಯಕ ಮೋಯಿನ್ ಅಲಿ ಅಜೇಯರಾಗಿ 37 ಎಸೆತಗಳಲ್ಲಿ 51 ರನ್ ಕಲೆಹಾಕಿದ್ರೂ ತಂಡವನ್ನ ಗೆಲುವಿನ ದಡ ತಲುಪಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಉಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯ.

ಗುರಿಯನ್ನ ಬೆನ್ನಟ್ಟುವ ಎಲ್ಲಾ ರೀತಿಯ ಅವಕಾಶ ಹೊಂದಿದ್ದರೂ ಸಹ ಇಂಗ್ಲೆಂಡ್ ಜೊತೆಯಾಟದ ಕೊರತೆಯಿಂದಾಗಿ ಗೆಲುವಿನ ದಡ ತಲುಪಲು ಸಾಧ್ಯವಾಗಲಿಲ್ಲ.

ಇಂಗ್ಲೆಂಡ್ ಬ್ಯಾಟಿಂಗ್ ಕುರಿತು ಕಿಡಿಕಾರಿದ ಮೋಯಿನ್ ಅಲಿ

ಇಂಗ್ಲೆಂಡ್ ಬ್ಯಾಟಿಂಗ್ ಕುರಿತು ಕಿಡಿಕಾರಿದ ಮೋಯಿನ್ ಅಲಿ

ಇಂಗ್ಲೆಂಡ್ ಬ್ಯಾಟಿಂಗ್ ವಿಭಾಗದ ಕುರಿತಾಗಿ ನಾಯಕ ಮೋಯಿನ್ ಅಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಪಿಚ್ ಮತ್ತು ಪರಿಸ್ಥಿತಿ ಅರಿತು ಬ್ಯಾಟಿಂಗ್ ಮಾಡುವ ಬದಲು ವಿಕೆಟ್ ಕೈ ಚೆಲ್ಲಿದ್ದರ ಕುರಿತಾಗಿ ಆಕ್ರೋಶ ಹೊರಹಾಕಿದ್ದಾರೆ.

''ಇದು ತುಂಬಾ ಬೇಸರ ಮೂಡಿಸುವಂತಹ ಸೋಲಾಗಿದೆ, ಅದ್ರಲ್ಲೂ ನಾವು ಬ್ಯಾಟಿಂಗ್ ಮಾಡಿ ರೀತಿ. ಖಂಡಿತವಾಗಿಯೂ ನಾವೂ ಆಕ್ರಮಣಕಾರಿ ಮನರಂಜನೆಯ ಕ್ರಿಕೆಟ್‌ ಆಡುವುದು ಮುಖ್ಯ, ಆದ್ರೆ ಅದೇ ಸಮಯದಲ್ಲಿ ಪಂದ್ಯದ ಪರಿಸ್ಥಿತಿ ಮತ್ತು ಪಿಚ್ ಕುರಿತಾಗಿಯೂ ಯೋಚಿಸಬೇಕಾಗಿದೆ. ಇಂದು ನಮಗೆ ಗೆಲ್ಲಲು ಕೇವಲ ಒಂದು ಉತ್ತಮ ಜೊತೆಯಾಟ ಬೇಕಿತ್ತು. ಟಾಪ್‌ ಆರ್ಡರ್‌ನಲ್ಲಿ 60-70 ರನ್‌ಗಳ ಜೊತೆಯಾಟ ಮೂಡಿಬಂದಿದ್ರೆ, ನಾವು ಈ ಪಂದ್ಯ ಗೆಲ್ಲುತ್ತಿದ್ದೆವು. ಇದು ತುಂಬಾ ಬೇಸರ ಮೂಡಿಸುವಂತಹ ಬ್ಯಾಟಿಂಗ್ ಪ್ರದರ್ಶನ ನೀಡಿದ್ದೇವೆ ಎಂದು ನನಗನಿಸುತ್ತಿದೆ'' ಎಂದು ಮೋಯಿನ್ ಅಲಿ ಹೇಳಿದ್ದಾರೆ.

ಸೂರ್ಯಕುಮಾರ್ ಅಬ್ಬರ, ಗಬ್ಬರ್ ಹೆಸರಲ್ಲಿದ್ದ ಈ ದಾಖಲೆ ನೆಲಸಮ, ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್

ಇಂಗ್ಲೆಂಡ್ ಬ್ಯಾಟಿಂಗ್ ಅನ್ನು ಟೀಕಿಸಿದ ಮಾರ್ಕ್ ಬುಚರ್

ಇಂಗ್ಲೆಂಡ್ ಬ್ಯಾಟಿಂಗ್ ಅನ್ನು ಟೀಕಿಸಿದ ಮಾರ್ಕ್ ಬುಚರ್

ಇಂಗ್ಲೆಂಡ್ ತಂಡದ ಮಾಜಿ ಓಪನರ್ ಮಾರ್ಕ್ ಬುಚರ್, ಪಾಕ್ ವಿರುದ್ಧ ಇಂಗ್ಲೆಂಡ್ ಬ್ಯಾಟಿಂಗ್ ಮೈಂಡ್‌ಸೆಟ್ ಕುರಿತು ತೀವ್ರ ಟೀಕಿಸಿದ್ದಾರೆ. ಇಂಗ್ಲೆಂಡ್ ಈ ರೀತಿ ಕೆಟ್ಟ ಪ್ರದರ್ಶನ ತೋರುವ ಬದಲು ಜೊತೆಯಾಟವನ್ನು ಆಡಬೇಕಿದೆ ಎಂದು ಹೇಳಿದ್ದಾರೆ. ಅದ್ರಲ್ಲೂ ಪವರ್‌ಪ್ಲೇ ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳುವುದು ಹಿನ್ನಡೆ ಮೂಡಿಸಿದೆ ಎಂದಿದ್ದಾರೆ.

'' ನನಗೆ ಇಂಗ್ಲೆಂಡ್ ಆಟಗಾರರ ಕುರಿತಾಗಿ ಯಾವುದೇ ದ್ವೇಷವನ್ನು ಹೊಂದಿಲ್ಲ, ಆದ್ರೆ ಪವರ್‌ ಪ್ಲೇ ಓವರ್‌ಗಳಲ್ಲಿ ನೀವು ಎರಡು ವಿಕೆಟ್ ಕಳೆದುಕೊಂಡಿದ್ದೇ ಆದಲ್ಲಿ ಜೊತೆಯಾಟದ ಮೂಲಕ ಪರಿಸ್ಥಿತಿಗೆ ತಕ್ಕಾಗಿ ಆಟವಾಡಬೇಕಿದೆ. ಆದ್ರೆ ಅವರ ಬ್ಯಾಟಿಂಗ್ ನೋಡಿದ್ರೆ, ಹುಡುಗಾಟಿಕೆಯ ಬ್ಯಾಟಿಂಗ್‌ನಂತೆ ಕಂಡುಬಂದಿದೆ. ಅದರಲ್ಲೂ ಎರಡು ಬಾರಿ ರನ್‌ ಚೇಸ್‌ನಲ್ಲಿ ಇಂತಹ ಬ್ಯಾಟಿಂಗ್ ಅನ್ನು ಕಂಡಿದ್ದೇವೆ. ಇದು ಎಚ್ಚರಿಕೆಯ ಕರೆಗಂಟೆಯಲ್ಲ, ಆದ್ರೆ ಈ ಕುರಿತು ಮಾತನಾಡಿ ತಪ್ಪನ್ನ ತಿದ್ದುಕೊಳ್ಳಬೇಕಿದೆ'' ಎಂದು ಹೇಳಿದ್ದಾರೆ.

ದ.ಆಫ್ರಿಕಾ ವಿರುದ್ಧದ T20 ಪಂದ್ಯದಿಂದ ಹೊರಗುಳಿದ ಬುಮ್ರಾ: ಫ್ಯಾನ್ಸ್‌ ಅಸಮಾಧಾನ

ಕೆಟ್ಟದಾಗಿ ಆಟವಾಡಿದೆ ಇಂಗ್ಲೆಂಡ್‌ ಎಂದ ಇಂಜಮಾಮ್ ಉಲ್ ಹಕ್

ಕೆಟ್ಟದಾಗಿ ಆಟವಾಡಿದೆ ಇಂಗ್ಲೆಂಡ್‌ ಎಂದ ಇಂಜಮಾಮ್ ಉಲ್ ಹಕ್

ಇನ್ನು ಪಾಕಿಸ್ತಾನ ಮಾಜಿ ಬ್ಯಾಟರ್ ಇಂಜಮಾಮ್ ಉಲ್ ಹಕ್, ಇಂಗ್ಲೆಂಡ್ ಬ್ಯಾಟರ್‌ಗಳ ಶಾಟ್ ಸೆಲೆಕ್ಷನ್ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ರು. ಐದನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳು ಉತ್ತಮ ಶಾಟ್‌ಗಳನ್ನ ಆಡಬಹುದಿತ್ತು ಎಂದಿದ್ದಾರೆ.

''ಇಂಗ್ಲೆಂಡ್ ತೀವ್ರ ಕೆಳಮಟ್ಟದಲ್ಲಿ ಆಟವಾಡಿದೆ. ಅವರಿಗೆ ಆಕ್ರಮಣಕಾರಿ ಆಟವಾಡುವ ಮನಸ್ಸಿದ್ದರೆ ಆಡಲಿ ತೊಂದರೆ ಇಲ್ಲ. ಆದ್ರೆ ಪಿಚ್‌ ಪರಿಸ್ಥಿತಿಗೆ ಅನುಗುಣವಾಗಿ ಶಾಟ್ ಸೆಲೆಕ್ಷನ್ ಮಾಡಬೇಕಿದೆ. ಟಾಪ್ ಆರ್ಡರ್‌ನಲ್ಲಿ ಯಾರೂ ಜವಾಬ್ದಾರಿಯುತ ಆಟವಾಡಲಿಲ್ಲ'' ಎಂದು ಇಂಜಮಾಮ್ಮ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.

ಅಂತಿಮ ಪಂದ್ಯಕ್ಕೆ ಜಾಸ್ ಬಟ್ಲರ್ ಲಭ್ಯ

ಅಂತಿಮ ಪಂದ್ಯಕ್ಕೆ ಜಾಸ್ ಬಟ್ಲರ್ ಲಭ್ಯ

ಈಗಾಗಲೇ ಇಂಜ್ಯುರಿಯಿಂದಾಗಿ ಬಹುತೇಕ ಪಾಕ್ ವಿರುದ್ಧದ ಟಿ20 ಸರಣಿಯನ್ನ ಕಳೆದುಕೊಂಡಿರುವ ಇಂಗ್ಲೆಂಡ್ ಲಿಮಿಟೆಡ್ ಓವರ್ ಕ್ಯಾಪ್ಟನ್ ಜಾಸ್ ಬಟ್ಲರ್ ಕೊನೆಯ ಎರಡು ಟಿ20 ಪಂದ್ಯಗಳು ಇಲ್ಲವೇ ಅಂತಿಮ ಟಿ20 ಪಂದ್ಯಕ್ಕೆ ಹಾಜರಾಗುವ ಸಾಧ್ಯತೆಯಿದೆ ಎಂದು ಇಂಗ್ಲೆಂಡ್ ಟೀಂ ಮ್ಯಾನೇಜ್‌ಮೆಂಟ್ ತಿಳಿಸಿದೆ.

ಅದ್ಭುತ ಫಾರ್ಮ್‌ನಲ್ಲಿರುವ ಜಾಸ್‌ ಬಟ್ಲರ್ ಅಲಭ್ಯತೆಯು ಇಂಗ್ಲೆಂಡ್ ತಂಡವನ್ನ ಕಾಡುತ್ತಿದ್ದು, ಇವರ ಅನುಪಸ್ಥಿತಿಯಲ್ಲಿ ಮೋಯಿನ್ ಅಲಿ ನೇತೃತ್ವದ ಇಂಗ್ಲೆಂಡ್ ಎರಡು ಪಂದ್ಯಗಳಲ್ಲಿ ಗೆಲುವು ಹಾಗೂ ಮೂರು ಪಂದ್ಯಗಳಲ್ಲಿ ಸೋಲನ್ನ ಅನುಭವಿಸಿದೆ.

Story first published: Thursday, September 29, 2022, 14:24 [IST]
Other articles published on Sep 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X