ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಬಟ್ಲರ್ ಮೇಲೆ ಅಶ್ವಿನ್ 'ಮಂಕಡ್' ಪ್ರಯೋಗಿಸಿದ್ದು ಕ್ರೀಡಾಸ್ಫೂರ್ತಿಯೊಳಗಿಲ್ಲ!'

Ravichandran Ashwin’s ‘Mankad’ on Jos Buttler not in spirit of game, says MCC

ಲಂಡನ್, ಮಾರ್ಚ್ 28: ಐಪಿಎಲ್ ಪಂದ್ಯದ ವೇಳೆ ಜಾಸ್ ಬಟ್ಲರ್ ಅವರನ್ನು ಆರ್ ಅಶ್ವಿನ್ ಮಂಕಡ್ ರೀತಿಯಲ್ಲಿ ಔಟ್ ಮಾಡಿದ್ದು ಕ್ರೀಡಾಸ್ಫೂರ್ತಿಯೊಳಗೆ ಬರುತ್ತಿಲ್ಲ ಎಂದು ಮೇರಿಲೆಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಹೇಳಿದೆ. ವಿಡಿಯೋವನ್ನು ಪರಿಶೀಲಿಸಿದ ಬಳಿಕ ಎಂಸಿಸಿ ಈ ಅಭಿಪ್ರಾಯ ತಾಳಿದೆ.

ಐಪಿಎಲ್ 2019: ಕೊಹ್ಲಿ vs ಬೂಮ್ರಾ ಕುತೂಹಲಕಾರಿ ಅಂಕಿ-ಅಂಶಗಳು!ಐಪಿಎಲ್ 2019: ಕೊಹ್ಲಿ vs ಬೂಮ್ರಾ ಕುತೂಹಲಕಾರಿ ಅಂಕಿ-ಅಂಶಗಳು!

ಸೋಮವಾರ (ಮಾರ್ಚ್ 25) ಜೈಪುರ್‌ನಲ್ಲಿ ನಡೆದಿದ್ದ ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್‌ XI ಪಂಜಾಬ್ ನಡುವಿನ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ಆಟಗಾರ ಬಟ್ಲರ್ ಅವರನ್ನು ಪಂಜಾಬ್ ನಾಯಕ ಅಶ್ವಿನ್ 'ಮಂಕಡ್' ವಿಧಾನದಲ್ಲಿ ರನ್ ಔಟ್ ಮಾಡಿದ್ದರು. ಈ ರನೌಟ್ ವಿವಾದಕ್ಕೆ ಈಡಾಗಿತ್ತು.

ಕ್ರಿಕೆಟ್ ಕಾನೂನುಗಳ ಪಾಲಕ ಸ್ಥಾನದಲ್ಲಿರುವ ಎಂಸಿಸಿ, ಬೌಲರ್ ಚೆಂಡು ರಿಲೀಸ್ ಮಾಡುವ ನಿರೀಕ್ಷೆಯಲ್ಲಿ ಬ್ಯಾಟ್ಸ್ಮನ್ ಇದ್ದಿದ್ದರಿಂದ ಈ ಪ್ರಕರಣ ನಡೆದಿದೆ ಎಂಬಂತೆ ವಿವರಣೆ ನೀಡಿದೆ. 'ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಪ್ರಕರಣ ಕ್ರೀಡಾಸ್ಫೂರ್ತಿಯೊಳಗೆ ಕಾಣಿಸುತ್ತಿಲ್ಲ' ಎಂದು ಎಂಸಿಸಿ ಮ್ಯಾನೇಜರ್ ಫ್ರೇಸರ್ ಸ್ಟೀವರ್ಟ್ ತಿಳಿಸಿದ್ದಾರೆ.

ಆರ್‌ಸಿಬೀಲಿ ಕೊಹ್ಲಿ-ಎಬಿಡಿ ನೆರಳಿನಲ್ಲಿದ್ದೆ, ಕೆXIಪಿಯಲ್ಲಿ ನಾನೇ ನಂ.1: ರಾಹುಲ್ಆರ್‌ಸಿಬೀಲಿ ಕೊಹ್ಲಿ-ಎಬಿಡಿ ನೆರಳಿನಲ್ಲಿದ್ದೆ, ಕೆXIಪಿಯಲ್ಲಿ ನಾನೇ ನಂ.1: ರಾಹುಲ್

ಅಂದಿನ ಪಂದ್ಯದಲ್ಲಿ ಬಟ್ಲರ್ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ್ ಗೆಲ್ಲುವುದರಲ್ಲಿತ್ತು. ಆದರೆ ಬಟ್ಲರ್ 'ಮಂಕಡೆಡ್' ಆಗಿ ನಿರ್ಗಮಿಸಿದ್ದರಿಂದ ಪಂದ್ಯವನ್ನು ಪಂಜಾಬ್ 14 ರನ್‌ಗಳಿಂದ ಜಯಿಸಿತ್ತು. ಅಂದ್ಹಾಗೆ, ಈ 'ಎಂಸಿಸಿ' ಕ್ರಿಕೆಟ್ ಕಾನೂನುಗಳ ಪಾಲಕ ಸ್ಥಾನದಲ್ಲಿದೆ ಅಂದೆವಲ್ಲ? ಇದು 1787ರಲ್ಲಿ ಸ್ಥಾಪಿಸಲ್ಪಟ್ಟಿತು ಮತ್ತು 1814ರಿಂದ ಇಂಗ್ಲೆಂಡ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ಪ್ರಾರಂಭಿಸಲ್ಪಟ್ಟಿತು.

Story first published: Thursday, March 28, 2019, 18:37 [IST]
Other articles published on Mar 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X