ಪಿಸಿಬಿ ಹೊಸ ಒಪ್ಪಂದ ಪಟ್ಟಿಯಿಂದ ಸರ್ಫರಾಜ್ ಅಹ್ಮದ್ ಕೆಳಗಿಳಿಸಲು ಸಜ್ಜು

ಕರಾಚಿ, ಮೇ 9: ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) 2017ರ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡದ ನಾಯಕ ಸರ್ಫರಾಜ್ ಅಹ್ಮದ್ ಅವರನ್ನು ಒಪ್ಪಂದದಲ್ಲಿನ ಉತ್ತಮ ಪಟ್ಟಿಯಿಂದ ಕೆಳಗಿಳಿಸಲು ತೀರ್ಮಾನಿಸಿದೆ. ಆಗಸ್ಟ್‌ನಲ್ಲಿ ನೀಡಲಾಗುವ ಆಟಗಾರರ ಒಪ್ಪಂದದಲ್ಲಿ ವರ್ಗ 'ಎ'ನಿಂದ 'ಸಿ'ಗೆ ಅಹ್ಮದ್ ಅವರನ್ನು ಇಳಿಸುವುದರಲ್ಲಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಪಿಸಿಬಿ ಕೇಂದ್ರೀಯ ಒಪ್ಪಂದಲ್ಲಿ ಕೇವಲ 19 ಆಟಗಾರರನ್ನು ಲಿಸ್ಟ್ 'ಎ'ನಲ್ಲಿ ಹೆಸರಿಸಿತ್ತು. ಆ ವೇಳೆ ಅನುಭವಿ ಆಟಗಾರ ಮೊಹಮ್ಮದ್ ಹಫೀಜ್ ಮತ್ತು ಶೋಯೆಬ್ ಮಲಿಕ್ ಅವರನ್ನು ಪಟ್ಟಿಯಿಂದ ಕೈಬಿಟ್ಟಿತ್ತು. ಈ ಬಾರಿ ಈ ಸರದಿ ಸರ್ಫರಾಜ್ ಅವರದ್ದಾಗಲಿದೆ.
ಬೋರ್ಡ್‌ನ ಪಾಲಿಸಿ ನಿರ್ಧಾರದ ಪ್ರಕಾರ ಒಪ್ಪಂದದ ಪ್ರಕಾರ ಆಟಗಾರರ ಸಂಖ್ಯೆಯನ್ನು 32ರಿಂದ 19ಕ್ಕೆ ಇಳಿಸಲಾಗಿದೆ. ಈ ಹಿಂದೆ ಅರ್ಫರಾಜ್ ಅಹ್ಮದ್ ಎಲ್ಲಾ ಮಾದರಿಯಲ್ಲಿ ನಾಯಕರಾಗಿದ್ದರಿಂದ ಅವರನ್ನು ಲಿಸ್ಟ್ 'ಎ'ನಲ್ಲಿ ಸೇರಿಸಲಾಗಿತ್ತು. ಅಹ್ಮದ್ ಜೊತೆ ಬಾಬರ್ ಅಝಾಮ್, ಯಾಸಿರ್ ಖಾನ್ ಕೂಡ ಆಗ ಪಟ್ಟಿಯಲ್ಲಿದ್ದರು.
ಆದರೆ ಕಳೆದ ನವೆಂಬರ್‌ನಲ್ಲಿ ಪಾಕ್ ಆಯ್ಕೆ ಸಮಿತಿ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಸರ್ಫರಾಜ್ ಅಹ್ಮದ್ ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿಸಿತ್ತು. ವಿಶ್ವಕಪ್‌ನಲ್ಲಿ ಸರ್ಫರಾಜ್ ಅವರ ಕಳಪೆ ಬ್ಯಾಟಿಂಗ್, ನಾಯಕತ್ವವೂ ಇದಕ್ಕೆ ಒಂದು ನೆಪವಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications