ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ MS ಧೋನಿ ಭಾಗವಹಿಸುವಿಕೆಗೆ ಒಪ್ಪದ ಬಿಸಿಸಿಐ: ವರದಿ

MS Dhoni

ಐಪಿಎಲ್ ಮಾದರಿಯಲ್ಲೇ ಹುಟ್ಟಿಕೊಂಡಿರುವ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಭಾರತೀಯ ಆಟಗಾರರು ಭಾಗವಹಿಸಿಕೆ ನಿರ್ಬಂಧದ ನಿರ್ಧಾರವನ್ನು ಬದಲಾಯಿಸುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸ್ಪಷ್ಟಪಡಿಸಿದೆ.

ದಕ್ಷಿಣ ಆಫ್ರಿಕಾ ಅಷ್ಟೇ ಅಲ್ಲದೆ ವಿದೇಶದ ಯಾವುದೇ ಟಿ20 ಲೀಗ್‌ಗಳಲ್ಲಿ ಆಡಲು ಬಯಸಿದರೆ, ಭಾರತೀಯ ಕ್ರಿಕೆಟ್‌ನಿಂದ ಹೊರನಡೆಯಬೇಕು ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಜೊತೆಗೆ ಐಪಿಎಲ್ ಮತ್ತು ದೇಶೀಯ ಕ್ರಿಕೆಟ್‌ಗೆ ವಿದಾಯ ಹೇಳಬೇಕು. ಈ ನಿಯಮವು ಯಾವುದೇ ದೊಡ್ಡ ಆಟಗಾರನಿಗೆ ಅನ್ವಯಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟಿ20 ಲೀಗ್‌ನಲ್ಲಿ ಐಪಿಎಲ್‌ನ ಫ್ರಾಂಚೈಸಿಗಳು ಅಲ್ಲಿನ ತಂಡಗಳನ್ನು ಖರೀದಿಸಿವೆ. ಈ ಲೀಗ್‌ನಲ್ಲಿ ಭಾರತದ ಆಟಗಾರರಿಗೆ ಅವಕಾಶ ನೀಡಲಾಗುವುದು ಎಂಬ ಪ್ರಚಾರವೂ ನಡೆದಿತ್ತು.

ಜೋಹಾನ್ಸ್‌ಬರ್ಗ್‌ ಸೂಪರ್ ಕಿಂಗ್ಸ್‌

ಜೋಹಾನ್ಸ್‌ಬರ್ಗ್‌ ಸೂಪರ್ ಕಿಂಗ್ಸ್‌

ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಆಡಳಿತವು ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡವನ್ನು ಖರೀದಿಸಿತು. ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಮೆಂಟರ್ ಆಗಿ ನೇಮಿಸಲು ತಂಡ ನಿರ್ಧರಿಸಿದೆ. ಆದ್ರೆ ಈ ಕುರಿತಾಗಿ ಆದೇಶದಲ್ಲಿ ಬಿಸಿಸಿಐ ಅನುಮತಿ ಕೋರಿದೆ. ತಂಡದ ನಾಯಕನಾಗಿ ಮೂರು ಪ್ರಶಸ್ತಿಗಳನ್ನು ನೀಡಿರುವ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದು, ಅವಕಾಶ ಸಿಗುವ ಸಾಧ್ಯತೆ ಇದೆ. ಅವರು ಕೇವಲ ಮೆಂಟರ್ ಆಗಿ ಲೀಗ್ ಪ್ರವೇಶಿಸುವುದರಿಂದ ಅವರ ಅನುಮತಿಯನ್ನು ನಿರಾಕರಿಸುವಂತಿಲ್ಲ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ರಿಷಭ್ ಪಂತ್‌ ಪೋಸ್ಟ್‌ಗೆ ತಿರುಗೇಟು ನೀಡಿದ ಊರ್ವಶಿ ರೌಟೇಲಾ: 'ಸಹೋದರ ಅಡ್ವಾಂಟೇಜ್ ತೆಗೆದುಕೊಳ್ಳಬೇಡ' ಎಂದ ಬಾಲಿವುಡ್ ನಟಿ

ಮಾಹಿಗೆ ಶಾಕ್‌ ನೀಡಿದ ಬಿಸಿಸಿಐ

ಮಾಹಿಗೆ ಶಾಕ್‌ ನೀಡಿದ ಬಿಸಿಸಿಐ

ಧೋನಿಗೆ ಬಿಸಿಸಿಐ ಶಾಕ್ ನೀಡಿದೆ. ಧೋನಿ ಹೊರತಾಗಿ ಯಾರೇ ಆಗಲಿ ಮಂಡಳಿ ನಿಯಮ ಪಾಲಿಸಲೇಬೇಕು ಎಂಬುದು ಸ್ಪಷ್ಟ. ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರೂ ಸಹ ಎಂಎಸ್ ಧೋನಿ ಐಪಿಎಲ್‌ನಲ್ಲಿ ಸಿಎಸ್‌ಕೆ ನಾಯಕರಾಗಿದ್ದಾರೆ. ಅವರು 2021 ರ ಋತುವಿನಲ್ಲಿ ನಾಯಕನಾಗಿ ಸಿಎಸ್‌ಕೆ ಗೆ ನಾಲ್ಕನೇ ಪ್ರಶಸ್ತಿಯನ್ನು ನೀಡಿದರು. ಮುಂದಿನ ಋತುವಿನಲ್ಲಿ ಚೆನ್ನೈನಲ್ಲಿ ಪಂದ್ಯಗಳನ್ನು ಆಡಿದ ನಂತರ ಅವರು ಐಪಿಎಲ್ ಅನ್ನು ತ್ಯಜಿಸುವುದಾಗಿ ಘೋಷಿಸಿದರು. ಹೀಗಾಗಿ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಭಾಗವಹಿಸಲು ಬಯಸಿದರೆ, ಮಾಹಿ ಐಪಿಎಲ್‌ನಿಂದ ದೂರ ಉಳಿಯಬೇಕಾಗುತ್ತದೆ.

IND vs ZIM: ಜಿಂಬಾಬ್ವೆ ಸರಣಿಗೆ ನಾಯಕನನ್ನು ಬದಲಿಸಿದ್ದಕ್ಕೆ ಮಾಜಿ ಕ್ರಿಕೆಟಿಗನ ಆಕ್ಷೇಪ

ಐಪಿಎಲ್ ಅಥವಾ ದಕ್ಷಿಣ ಆಫ್ರಿಕಾ ಟಿ20 ಲೀಗ್‌ ಆಯ್ಕೆ ಮಾಡಲು ಸೂಚನೆ

ಐಪಿಎಲ್ ಅಥವಾ ದಕ್ಷಿಣ ಆಫ್ರಿಕಾ ಟಿ20 ಲೀಗ್‌ ಆಯ್ಕೆ ಮಾಡಲು ಸೂಚನೆ

ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಧೋನಿ ಐಪಿಎಲ್ ಹೊರತುಪಡಿಸಿ ಯಾವುದೇ ಕ್ರಿಕೆಟ್ ಲೀಗ್‌ನಲ್ಲಿ ಆಡುತ್ತಿಲ್ಲ. ಐಪಿಎಲ್‌ ಅಥವಾ ದಕ್ಷಿಣ ಆಫ್ರಿಕಾ ಟಿ20 ಲೀಗ್ ಅನ್ನು ಆಯ್ಕೆ ಮಾಡುವಂತೆ ಮಾಹಿಯನ್ನು ಒತ್ತಾಯಿಸಿದೆ. ಐಪಿಎಲ್‌ನಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಫ್ರಾಂಚೈಸಿಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ತೊರೆಯುವ ಇರಾದೆ ಇಲ್ಲದ ಧೋನಿ, ದಕ್ಷಿಣ ಆಫ್ರಿಕಾದ ಟಿ20 ಲೀಗ್‌ನಲ್ಲಿ ಭಾಗವಹಿಸುವ ಆಲೋಚನೆಯನ್ನು ಕೈಬಿಟ್ಟಿದ್ದಾರೆ. ಮುಂದಿನ ವರ್ಷದ ಐಪಿಎಲ್ ನಂತರ ಧೋನಿ ಅವರ ಸೇವೆಯನ್ನು ತಮ್ಮ ತಂಡಗಳಿಗೆ ಮೆಂಟರ್ ಆಗಿ ಬಳಸಲು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ.

ಸಿಎಸ್‌ಕೆ ಜೋಹಾನ್ಸ್‌ಬರ್ಗ್‌ ತಂಡಕ್ಕೆ ಫಾಫ್ ಡುಪ್ಲೆಸಿಸ್ ಸೇರ್ಪಡೆ

ಸಿಎಸ್‌ಕೆ ಜೋಹಾನ್ಸ್‌ಬರ್ಗ್‌ ತಂಡಕ್ಕೆ ಫಾಫ್ ಡುಪ್ಲೆಸಿಸ್ ಸೇರ್ಪಡೆ

ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಮರಳಿ ಪಡೆದಿದೆ. ಐಪಿಎಲ್ 2022ರ ಸೀಸನ್‌ಗೂ ಮುಂಚೆ ಸ್ವಲ್ಪದರಲ್ಲೇ ಮಿಸ್ ಆರ್‌ಸಿಬಿ ತೆಕ್ಕೆಗೆ ಸೇರಿದ್ದ್ ಫಾಫ್ ಡುಪ್ಲೆಸಿಸ್‌ರನ್ನು ಚೆನ್ನೈ ಸೂಪರ್ ಕಿಂಗ್ಸ್‌ಗೆ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದೆ.

ಡು ಪ್ಲೆಸಿಸ್ ಹೊರತಾಗಿ, ಕಳೆದ ಋತುವಿನವರೆಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದ ಇಂಗ್ಲೆಂಡ್‌ನ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಮೊಯಿನ್ ಅಲಿ ಕೂಡ ಸೂಪರ್ ಕಿಂಗ್ಸ್ ತಂಡಕ್ಕೆ ಮರಳಲಿದ್ದಾರೆ.

ಫಾಫ್ ಡುಪ್ಲೆಸಿಸ್ ಸೂಪರ್ ಕಿಂಗ್ಸ್ ಪರ ಆಡುವುದು ಮಾತ್ರವಲ್ಲದೆ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ವರದಿಗಳಿವೆ. ಕಳೆದ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದರು. ಡುಪ್ಲೆಸಿಸ್ 2011 ರಿಂದ 2021 ರವರೆಗೆ ಸಿಎಸ್‌ಕೆ ಫ್ರಾಂಚೈಸಿಯನ್ನು ಅಮಾನತುಗೊಳಿಸಿದಾಗ ಎರಡು ಋತುಗಳನ್ನು ಹೊರತುಪಡಿಸಿ ಚೆನ್ನೈ ತಂಡದ ಪರ ಆಡಿದ್ದಾರೆ.

Story first published: Saturday, August 13, 2022, 17:26 [IST]
Other articles published on Aug 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X