ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲೈಂಗಿಕ ದೌರ್ಜನ್ಯ: 11 ದಿನ ಪೊಲೀಸ್‌ ಕಸ್ಟಡಿಯಲ್ಲಿ ಕಳೆದ ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕಗೆ, ಜಾಮೀನು ಮಂಜೂರು

Danushka Gunathilaka

ಲೈಂಗಿಕ ದೌರ್ಜನ್ಯ ಕೇಸ್‌ನಿಂದಾಗಿ ಆಸ್ಟ್ರೇಲಿಯಾದಲ್ಲಿ ಸೆರೆಯಾಗಿದ್ದ ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕಗೆ ಆಸ್ಟ್ರೇಲಿಯಾದ ಸುಪ್ರೀ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 29 ವರ್ಷದ ಆಸ್ಟ್ರೇಲಿಯಾದ ಯುವತಿ ಮೇಲೆ ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ ಗುಣತಿಲಕೆಗೆ ಸದ್ಯಕ್ಕೆ ರಿಲೀಫ್ ಸಿಕ್ಕಿದೆ.

11 ರಾತ್ರಿಗಳನ್ನ ಪೊಲೀಸ್‌ ಕಸ್ಟಡಿಯಲ್ಲಿ ಕಳೆದ ದನುಷ್ಕ ಗುಣತಿಲಕಗೆ ಜಾಮೀನು ನೀಡಲು ಸೆಂಟ್ರಲ್ ಕೋರ್ಟ್ ನಿರಾಕರಿಸಿತ್ತು. ಪರಿಣಾಮ ಗುಣತಿಲಕ ಪರ ವಕೀಲರು ನ್ಯೂ ಸೌತ್‌ ವೇಲ್ಸ್‌ನ ಸುಪ್ರೀಂ ಕೋರ್ಟ್‌ಗೆ ಜಾಮೀನಿಗಾಗಿ ಅರ್ಜಿ ಹಾಕಿದ್ದರು. ಇದೀಗ ಗುಣತಿಲಕಗೆ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

1 ಕೋಟಿ ರೂಪಾಯಿ ಶ್ಯೂರಿಟಿ ಪಡೆದು ಜಾಮೀನು ಮಂಜೂರು

1 ಕೋಟಿ ರೂಪಾಯಿ ಶ್ಯೂರಿಟಿ ಪಡೆದು ಜಾಮೀನು ಮಂಜೂರು

ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕಗೆ ಜಾಮೀನು ನೀಡಲು ನಿರಾಕರಣೆಗೆ ಪ್ರಮುಖ ಕಾರಣ ಆತನ ಮೇಲೆ ಅತ್ಯಾಚಾರ ಆರೋಪವಾಗಿತ್ತು. ಆದ್ರೆ ಗುಣತಿಲಕಗೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್‌ ಮತ್ತು ಶ್ರೀಲಂಕಾ ಸರ್ಕಾರ ಬೆಂಬಲಿಸಿದ ಕಾರಣ ಕೋರ್ಟ್‌ ಶ್ಯೂರಿಟಿಯಾಗಿ 1,50,000 ಡಾಲರ್‌ನಷ್ಟು ಹಣವನ್ನು ನೀಡುವುದಾಗಿ ತಿಳಿಸಿದ ಬಳಿಕ ಸುಪ್ರೀಂ ಕೋರ್ಟ್ ಜಾಮೀನು ನೀಡಲು ಗ್ರೀನ್ ಸಿಗ್ನಲ್‌ ನೀಡಿತು. ಇದಕ್ಕೂ ಮುನ್ನ ಡಿಸೆಂಬರ್ 8ರಂದು ಜಾಮೀನು ವಿಚಾರಣೆಗೆ ದಿನಾಂಕ ನಿಗದಿಯಾಗಿತ್ತು.

ಗುಣತಿಲಕ ಪರ ಶ್ಯೂರಿಟಿಗಾಗಿ 1,50,000 ಡಾಲರ್‌ನಷ್ಟು ಹಣದ ಜೊತೆಗೆ ಪ್ರತಿದಿನ ಪೊಲೀಸ್ ಸ್ಟೇಷನ್‌ಗೆ ತೆರಳಿ ಸಹಿ ಹಾಕಬೇಕು, ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಹೊರಗೆ ಓಡಾಡಬಾರದು. ಅಲ್ಲದೆ ದೂರು ನೀಡಿರುವ ಯುವತಿಯನ್ನು ಸಂಪರ್ಕ ಮಾಡಲು ಪ್ರಯತ್ನಿಸಬಾರದು ಮತ್ತು ಟಿಂಡರ್ ಹಾಗೂ ಇತರೆ ಡೇಟಿಂಗ್ ಅಪ್ಲಿಕೇಶನ್ ಬಳಸಲು ನಿಷಿದ್ಧ ಎಂದು ಕೋರ್ಟ್‌ ಆತನ ಮೇಲೆ ಕಠಿಣ ನಿಯಮಗಳನ್ನ ಹೇರಿದೆ.

ಯುವತಿಯ ಒಪ್ಪಿಗೆಯಿಲ್ಲದೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ

ಯುವತಿಯ ಒಪ್ಪಿಗೆಯಿಲ್ಲದೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ

ನವೆಂಬರ್ ತಿಂಗಳ ಆರಂಭದಲ್ಲಿ 29 ವರ್ಷದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪವನ್ನು ಧನುಷ್ಕ ಗುಣತಿಲಕ ಎದುರಿಸುತ್ತಿದ್ದಾರೆ. ಯುವತಿಯ ಒಪ್ಪಿಗೆ ಇಲ್ಲದೆ ನಾಲ್ಕು ಬಾರಿ ಲೈಂಗಿಕ ಸಂಭೋಗದ ಆರೋಪವನ್ನ ಹೊತ್ತಿರುವ ಗುಣತಿಲಕನನ್ನು ಸಿಡ್ನಿಯಲ್ಲಿರುವ ಹೋಟೆಲ್‌ನಲ್ಲಿಯೇ ಬಂಧಿಸಲಾಯಿತು. ಟಿ20 ವಿಶ್ವಕಪ್ ಸಮಯದಲ್ಲಿ ಈ ಘಟನೆ ನಡೆದಿದ್ದು, ಗುಣತಿಲಕ ಬಂಧನದ ಬಳಿಕ ಶ್ರೀಲಂಕಾದ ತಂಡದ ಇತರೆ ಆಟಗಾರರು ತವರಿಗೆ ವಾಪಸ್ಸಾದರು.

'ಕುಲ್‌-ಚಾ'... ಮತ್ತೆ ಒಂದಾದ ಟೀಂ ಇಂಡಿಯಾ ಸ್ಪಿನ್ ಜೋಡಿ: ನ್ಯೂಜಿಲೆಂಡ್ ವಿರುದ್ಧ ದಾಳಿಗೆ ಸಜ್ಜು

ವಿಶ್ವಕಪ್‌ಗೂ ಮುನ್ನವೇ ಡೇಟಿಂಗ್ ಆ್ಯಪ್‌ನಲ್ಲಿ ಯುವತಿಯ ಪರಿಚಯ

ವಿಶ್ವಕಪ್‌ಗೂ ಮುನ್ನವೇ ಡೇಟಿಂಗ್ ಆ್ಯಪ್‌ನಲ್ಲಿ ಯುವತಿಯ ಪರಿಚಯ

ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾಗೆ ಬರುವ ಮುನ್ನವೇ ಡೇಟಿಂಗ್ ಆ್ಯಪ್ ಮೂಲಕ ಆಸ್ಟ್ರೇಲಿಯಾ ಮೂಲದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ ಶ್ರೀಲಂಕಾ ಕ್ರಿಕೆಟಿಗ, ಆಕೆಯ ಒಪ್ಪಿಗೆ ಇಲ್ಲದೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸಿದರು. ನವೆಂಬರ್ 2ರಂದು ನಡೆದಿದೆ ಎನ್ನಲಾದ ಘಟನೆ ಕುರಿತಾಗಿ ನೊಂದ ಯುವತಿಯ ದೂರಿನ ಆಧಾರದ ಮೇಲೆ ಧನುಷ್ಕ ಗುಣತಿಲಕನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಆದ್ರೆ ಈ ವೇಳೆಯಲ್ಲಿ ಗುಣತಿಲಕಗೆ ಜಾಮೀನು ನೀಡಲು ಸಿಡ್ನಿಯ ಸೆಂಟ್ರಲ್ ಕೋರ್ಟ್ ನಿರಾಕರಿಸಿತು.

ಡೌನಿಂಗ್ ಸೆಂಟರ್ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರಾದ ರಾಬರ್ಟ್ ವಿಲಿಯಮ್ಸ್‌ ಗುಣತಿಲಕ ಯಾವುದೇ ಅಪರಾಧ ಹಿನ್ನಲೆಯನ್ನು ಹೊಂದಿಲ್ಲದಿದ್ದರೂ, ಬಿಡುಗಡೆ ಮಾಡಲು ನಿರಾಕರಿಸಿದರು. ಜಾಮೀನಿಗಾಗಿ ಗುಣತಿಲಕ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ ಪರಿಣಾಮ 10ಕ್ಕೂ ಹೆಚ್ಚು ದಿನಗಳ ಕಾಲ ದನುಷ್ಕ ಗುಣತಿಲಕ ಪೋಲಿಸ್ ಕಸ್ಟಡಿಯಲ್ಲಿ ಕಳೆಯುವಂತಾಯಿತು.

IND vs NZ: ಐರ್ಲೆಂಡ್ ಬೌಲರ್ ವಿಶ್ವದಾಖಲೆ ಮುರಿಯುವ ಸನಿಹದಲ್ಲಿ ಭುವನೇಶ್ವರ್ ಕುಮಾರ್

ಎಲ್ಲಾ ಮಾದರಿಯ ಕ್ರಿಕೆಟ್ ಫಾರ್ಮೆಟ್‌ನಿಂದ ವಜಾಗೊಂಡಿರುವ ಗುಣತಿಲಕ

ಎಲ್ಲಾ ಮಾದರಿಯ ಕ್ರಿಕೆಟ್ ಫಾರ್ಮೆಟ್‌ನಿಂದ ವಜಾಗೊಂಡಿರುವ ಗುಣತಿಲಕ

ದನುಷ್ಕ ಗುಣತಿಲಕ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದ ನಂತರ, ಆತನ ಜಾಮೀನು ಅರ್ಜಿ ತಿರಸ್ಕಾರಗೊಳ್ಳುತ್ತಿದ್ದಂತೆ, ತಕ್ಷಣವೇ ಜಾರಿಗೆ ಬರುವಂತೆ ಗುಣತಿಲಕನನ್ನು ಶ್ರೀಲಂಕಾ ಕ್ರಿಕೆಟ್ ಬೋರ್ಡ್‌ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ವಜಾಗೊಳಿಸಿತು.

ಈತ ಇದುವರೆಗೆ 46 ಟಿ20, 47 ಏಕದಿನ ಪಂದ್ಯಗಳು ಮತ್ತು 8 ಟೆಸ್ಟ್‌ ಪಂದ್ಯಗಳಲ್ಲಿ ಶ್ರೀಲಂಕಾ ಪರ ಆಡಿದ್ದಾರೆ. ವಿಶ್ವಕಪ್‌ನ 15 ಜನರ ಸ್ಕ್ವಾಡ್‌ನಲ್ಲಿ ಅವಕಾಶ ಪಡೆದಿದ್ದ ಈ ಪ್ಲೇಯರ್ ರೌಂಡ್ 1 ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಆಡಿದ ಬಳಿಕ ಇಂಜ್ಯುರಿಯಿಂದಾಗಿ ಸಂಪೂರ್ಣ ಟೂರ್ನಮೆಂಟ್‌ಗೆ ಅಲಭ್ಯರಾಗಿದ್ದರು.

Story first published: Thursday, November 17, 2022, 11:37 [IST]
Other articles published on Nov 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X