ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2021ರ IPLನಲ್ಲಿ ಒಂದೂ ಪಂದ್ಯವಾಡಿಲ್ಲ, ಆದ್ರೂ 2022ರ ಹರಾಜಿನಲ್ಲಿ ಈ ಆಟಗಾರರಿಗೆ ಸಖತ್ ಡಿಮ್ಯಾಂಡ್!

IPL 2022 Auction

ಇಂಡಿಯನ್ ಪ್ರೀಮಿಯರ್ ಲೀಗ್ (IPL) 15ನೇ ಸೀಸನ್ ಆರಂಭಕ್ಕೂ ಮೊದಲು ಬಹುದೊಡ್ಡ ಹರಾಜಿಗೆ ಬಿಸಿಸಿಐ ವೇದಿಕೆ ಸಿದ್ಧಗೊಳಿಸುತ್ತಿದೆ. ಈ ಬಾರಿ ಎಂಟು ತಂಡಗಳ ಬದಲಿಗೆ ಹತ್ತು ತಂಡಗಳು ಹರಾಜಿನಲ್ಲಿ ಭಾಗಿಯಾಗಲಿವೆ. ಹೀಗಾಗಿ ಸಾಮಾನ್ಯವಾಗಿ ಆಟಗಾರರ ಮೇಲಿನ ಬಿಡ್‌ ಬಹು ಜೋರಾಗಿಯೇ ಇರುತ್ತದೆ.

ಬಿಸಿಸಿಐ ಎರಡು ಹೊಸ ಫ್ರಾಂಚೈಸಿಗಳನ್ನ ಐಪಿಎಲ್ 15ನೇ ಸೀಸನ್‌ಗೆ ಸೇರಿಸುತ್ತಿದೆ. ಏಪ್ರಿಲ್‌ನಲ್ಲಿ ಪ್ರಾರಂಭಗೊಳ್ಳಲಿರುವ ಐಪಿಎಲ್ ಸೀಸನ್‌ಗೂ ಮುನ್ನ ದೊಡ್ಡ ಮಟ್ಟಿಗೆ ಆಟಗಾರರ ಹರಾಜು ನಡೆಯಲಿದೆ.

ಕಳೆದ ಐಪಿಎಲ್ ಸೀಸನ್‌ನಲ್ಲಿ ಅನೇಕ ಪ್ರತಿಭಾವಂತ ಆಟಗಾರರು ಐಪಿಎಲ್ ಸೀಸನ್‌ನಲ್ಲಿ ಭಾಗಿಯಾಗಿದ್ರು. ಆದ್ರೆ ಇಡೀ ಸೀಸನ್‌ನಲ್ಲಿ ಕೆಲವು ಆಟಗಾರರಿಗೆ ಒಂದು ಪಂದ್ಯದಲ್ಲೂ ಆಡಲು ಅವಕಾಶ ಸಿಗಲಿಲ್ಲ, ಬೆಂಚ್ ಕಾದಿದ್ದೇ ಹೆಚ್ಚು. ಅಂದ ಮಾತ್ರಕ್ಕೆ ಇವರೇನು ಫಾರ್ಮ್‌ನಲ್ಲಿ ಇಲ್ವಾ? ಅಥವಾ ಇಂಜ್ಯುರಿನ ಅಂದುಕೊಳ್ಳಬೇಡಿ , ಪ್ಲೇಯಿಂಗ್‌ 11ನಲ್ಲಿ ಆಡಲು ಅವಕಾಶ ಸಿಕ್ಕಿಲ್ಲ ಅಷ್ಟೆ.

ಹೀಗೆ 2021ರ ಐಪಿಎಲ್ ಸೀಸನ್‌ನಲ್ಲಿ ಒಂದೂ ಪಂದ್ಯವಾಡದೆ ಇರುವ ಆಟಗಾರರು ಐಪಿಎಲ್‌ 15ನೇ ಸೀಸನ್‌ನ ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಹರಾಜಾದ್ರು ಆಶ್ಚರ್ಯವಿಲ್ಲ. ಅಂತಹ ಆಟಗಾರರು ಯಾರು, ಯಾವ ತಂಡದಲ್ಲಿದ್ರೂ ಎಂಬ ಮಾಹಿತಿ ಈ ಕೆಳಗಿದೆ.

ಮಿಚೆಲ್ ಸ್ಯಾಂಟ್ನರ್

ಮಿಚೆಲ್ ಸ್ಯಾಂಟ್ನರ್

ಐಪಿಎಲ್ 2021 ರಲ್ಲಿ, ನ್ಯೂಜಿಲೆಂಡ್ ಮೂಲದ ಆಟಗಾರ ಚೆನ್ನೈ ಸೂಪರ್ ಕಿಂಗ್ಸ್‌ ಪರ ಬೆಂಚ್ ಕಾದಿದ್ದೇ ಆಗಿತ್ತು. ಸ್ಯಾಂಟ್ನರ್ ಕೆಳಕ್ರಮಾಂಕದ ಬ್ಯಾಟಿಂಗ್‌ ಜೊತೆಗೆ ಅತ್ಯುತ್ತಮ ಎಡಗೈ ಸ್ಪಿನ್ನರ್ ಆಗಿದ್ದಾರೆ. ಇವರು ಮೆಗಾ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಬಿಕರಿಯಾಗಬಹುದು.

ಸಿಎಸ್‌ಕೆ ತಂಡದಲ್ಲಿ ಮೋಯಿನ್ ಅಲಿ ಮತ್ತು ರವೀಂದ್ರ ಜಡೇಜಾ ಇರುವ ಕಾರಣ ಸ್ಯಾಂಟ್ನರ್ ಅವರನ್ನು ಇಡೀ ಸೀಸನ್‌ನಿಂದ ಹೊರಗಿಡಲಾಯ್ತು. ಕೇವಲ ಬ್ರೇಕ್ ವೇಳೆ ಪಾನೀಯಗಳನ್ನು ತಲುಪಿಸಲು ಸ್ಯಾಂಟ್ನರ್‌ನನ್ನ ಸಿಎಸ್‌ಕೆ ಬಳಸಿಕೊಂಡಿತು.

ಸ್ಯಾಂಟ್ನರ್ ಓರ್ವ ಎಕನಾಮಿಕ್ ಬೌಲರ್ ಆಗಿದ್ದು ಟಿ20 ಕ್ರಿಕೆಟ್‌ನಲ್ಲಿ ಕೇವಲ 7.11 ಎಕಾನಮಿ ಹೊಂದಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ಎದುರಾಳಿ ತಂಡದ ಮೇಲೆ ಅಟ್ಯಾಕ್ ಮಾಡುವ ಸಾಮರ್ಥ್ಯ ಇವರದ್ದು. ಉತ್ತಮ ಲೈನ್ ಅಂಡ್ ಲೆಂಥ್‌ನಲ್ಲಿ ಬೌಲಿಂಗ್ ಮಾಡುವ ಸ್ಪಿನ್ನರ್. ಇದರ ಜೊತೆಗೆ ಸ್ಟಂಪ್ ಟು ಸ್ಟಂಪ್ ಬೌಲ್ ಮಾಡುವ ಇವರು ನಿರಂತರವಾಗಿ ವೇಗವನ್ನ ಬದಾಯಿಸುತ್ತಾ ಬ್ಯಾಟ್ಸ್‌ಮನ್‌ಗಳನ್ನು ಕಾಡುತ್ತಾರೆ.

ಇದರ ಜೊತೆಗೆ ಡೆತ್ ಓವರ್‌ಗಳಲ್ಲಿ ಅಮೋಘ ಸಿಕ್ಸರ್‌ಗಳನ್ನು ಬಾರಿಸುವ ಶಕ್ತಿ ಅವರಿಗಿದೆ. ಒಟ್ಟಾರೆಯಾಗಿ, ಅವರು ಭವಿಷ್ಯದಲ್ಲಿ ತಂಡಗಳಿಗೆ ಆಲ್ ರೌಂಡರ್ ಆಗಿ ಹೊಂದಲು ಅತ್ಯುತ್ತಮ ಪ್ಯಾಕೇಜ್ ಆಗಿದೆ. ಇವರು ಹರಾಜಿಗೆ ಬಂದರೆ ಉತ್ತಮ ಮೊತ್ತಕ್ಕೆ ಬಿಡ್ ಆಗುವುದು ಖಂಡಿತ.

ಐಪಿಎಲ್ 2022 ರಿಟೆನ್ಷನ್: ಸಿಎಸ್‌ಕೆಯಿಂದ ರೈನಾ ಔಟ್; ಈ 4 ಆಟಗಾರರು ಮಾತ್ರ ಸೇಫ್

ಸ್ಯಾಮ್ ಬಿಲ್ಲಿಂಗ್ಸ್‌

ಸ್ಯಾಮ್ ಬಿಲ್ಲಿಂಗ್ಸ್‌

ಇಂಗ್ಲೆಂಡ್ ಮೂಲದ ಸ್ಯಾಮ್ ಬಿಲ್ಲಿಂಗ್ಸ್ ಕೂಡ 2021ರ ಐಪಿಎಲ್‌ ಸೀಸನ್‌ನಲ್ಲಿ ಒಂದು ಪಂದ್ಯದಲ್ಲಿ ಆಡುವ ಅವಕಾಶ ಪಡೆಯಲಿಲ್ಲ. ಬೌಲಿಂಗ್ ಆಲ್‌ರೌಂಡರ್ ಆದ ಈತನನ್ನ ಏಕೆ ಕಣಕ್ಕಿಳಿಸಲಿಲ್ಲ ಎನ್ನುವುದು ಸಾಕಷ್ಟು ಇನ್ನೂ ಕುತೂಹಲಕ್ಕೆ ಕಾರಣವಾಗಿದೆ. ಸಿಎಸ್‌ಕೆ ಪರ ಉತ್ತಮ ಪ್ರದರ್ಶನ ತೋರಿದ್ದ ಸ್ಯಾಮ್ ಬಿಲ್ಲಿಂಗ್ಸ್‌ ಐಪಿಎಲ್ 2021ರ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತು. ಆದರೆ ಆದರೆ ಒಂದೇ ಒಂದು ಆಟದಲ್ಲಿ ಕಾಣಿಸಿಕೊಂಡಿಲ್ಲ.

ಸ್ಯಾಮ್ ಬಿಲ್ಲಿಂಗ್ಸ್ ಸೀಮಿತ ಓವರ್ ಗಳ ಕ್ರಿಕೆಟ್ ಜಗತ್ತಿನಲ್ಲಿ ಚಿರಪರಿಚಿತ. ಅವರು ವಿಶ್ವದ ವಿವಿಧ ಲೀಗ್‌ಗಳಲ್ಲಿ ಆಡಿದ ಅನುಭವವನ್ನು ಹೊಂದಿದ್ದಾರೆ. ಅವರು ಅದ್ಭುತ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದು, ಅವರು 4 ರಿಂದ 5ನೇ ಕ್ರಮಾಂಕದಲ್ಲೂ ಬ್ಯಾಟ್ ಬೀಸಬಲ್ಲರು. ಜೊತೆಗೆ ಅವರು ಫಿನಿಶಿಂಗ್ ಸಾಮರ್ಥ್ಯಗಳನ್ನು ಹೊಂದಿದ್ದಾರೆ ಮತ್ತು ಐಪಿಎಲ್ ತಂಡಗಳಿಗೆ ಅತ್ಯುತ್ತಮ ಮಧ್ಯಮ ಕ್ರಮಾಂಕದ ಆಟಗಾರನಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರು ಟಿ20 ಕ್ರಿಕೆಟ್‌ನಲ್ಲಿ 130.10 ಸ್ಟ್ರೈಕ್ ರೇಟ್ ಅನ್ನು ಹೊಂದಿದ್ದಾರೆ.

ಈ ಆಟಗಾರನೂ ಸಹ ಐಪಿಎಲ್ 2022ರ ಹರಾಜಿನಲ್ಲಿ ಕಾಣಿಸಿಕೊಂಡ್ರೆ ಉತ್ತಮ ಮೊತ್ತಕ್ಕೆ ಬಿಕರಿಯಾಗುವುದರಲ್ಲಿ ಅನುಮಾನವಿಲ್ಲ.

ನನ್ನ ಫಾರ್ಮ್ ಬಗ್ಗೆ ಚಿಂತೆಯಿಲ್ಲ, ಸೆಂಚುರಿ ಹೊಡೆದ್ರಷ್ಟೇ ಕೊಡುಗೆಯಲ್ಲ: ಅಜಿಂಕ್ಯ ರಹಾನೆ

ಶೆರ್ಫೇನ್ ರಾದರ್‌ಫೋರ್ಡ್

ಶೆರ್ಫೇನ್ ರಾದರ್‌ಫೋರ್ಡ್

ವೆಸ್ಟ್‌ ಇಂಡೀಸ್‌ನ ಸ್ಫೋಟಕ ಆಲ್‌ರೌಂಡರ್ ಆಟಗಾರ ಶೆರ್ಫೇನ್ ರಾದರ್‌ಫೋರ್ಡ್ , ತನ್ನ ಟೀಮ್‌ಮೇಟ್‌ಗಳಾದ ಪೊಲಾರ್ಡ್, ರಸೆಲ್ ಹಾಗೂ ಬ್ರಾವೋ ರೀತಿಯಲ್ಲಿ ಬ್ಯಾಟ್ ಹಾಗೂ ಬೌಲ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು.

2020ರ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಸೇರಿಕೊಂಡ ಈತನಿಗೆ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಇನ್ನು 2021ರ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಪರ ಜಾನಿ ಬೈಸ್ಟ್ರೋವ್ ಬದಲಾಗಿ ತಂಡ ಸೇರಿಕೊಂಡ ಈತನಿಗೂ ಅಲ್ಲೂ ಆಡಲು ಅವಕಾಶ ಬರಲೇ ಇಲ್ಲ. ಸನ್‌ರೈಸರ್ಸ್ ಹೈದ್ರಾಬಾದ್ ಪರ ಜೇಸನ್ ಹೋಲ್ಡರ್, ಮೊಹಮ್ಮದ್ ನಬಿ, ರಶೀದ್ ಖಾನ್‌ರಂತಹ ಹಲವಾರು ಆಲ್‌ರೌಂಡರ್‌ ಹೊಂದಿದ್ದರಿಂದ ಆಡಲು ಸಾಧ್ಯವಾಗಿಲ್ಲ.

ಕೆಳ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಆಗಿರುವ ಅವರು 6 ರಿಂದ 7 ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ ಮತ್ತು ತಂಡದ ಫಿನಿಶರ್ ಆಗಿದ್ದಾರೆ. ಅವರು ಟಿ20 ಕ್ರಿಕೆಟ್‌ನಲ್ಲಿ 135.86ರ ಸ್ಟ್ರೈಕ್‌ರೇಟ್‌ನಲ್ಲಿ 1163 ರನ್ ಗಳಿಸಿದ್ದಾರೆ. ಸ್ಥಿರವಾದ ಆಧಾರದ ಮೇಲೆ ಬೃಹತ್ ಸಿಕ್ಸರ್‌ಗಳನ್ನು ಹೊಡೆಯುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ.

2021ರ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ 136.73 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 201 ರನ್‌ಗಳನ್ನು ಗಳಿಸಿದರು. ತಂಡಗಳಿಗೆ ಬಹು ಪ್ರಯೋಜನಗಳನ್ನು ಒದಗಿಸುವ ಉತ್ತಮ ಆಲ್‌ರೌಂಡರ್‌ಗಳನ್ನು ಹುಡುಕುವ ತಂಡಗಳಿಗೆ ಈತ ಹೇಳಿ ಮಾಡಿಸಿದ ಆಟಗಾರ. ಹೀಗಾಗಿ ಮೆಗಾ ಹರಾಜಿನಲ್ಲಿ ಉತ್ತಮ ಮೊತ್ತಕ್ಕೆ ಬಿಡ್ ಆಗಬಹುದು.

ಐಪಿಎಲ್ 2022: ಎಬಿ ಡಿವಿಲಿಯರ್ಸ್ ಸ್ಥಾನ ತುಂಬಬಲ್ಲ 5 ಆಟಗಾರರು

ಕೃಷ್ಣಪ್ಪ ಗೌತಮ್

ಕೃಷ್ಣಪ್ಪ ಗೌತಮ್

ಕರ್ನಾಟಕ ಮೂಲದ ಬೌಲಿಂಗ್ ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ಪ್ರತಿಭಾವಂತ ಆಟಗಾರ. ಆಫ್‌ ಸ್ಪಿನ್ ಜೊತೆಗೆ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ನೆರವಾಗಬಲ್ಲರು. 2020ರ ಐಪಿಎಲ್ ಸೀಸನ್‌ನಲ್ಲಿ ರಾಜಸ್ತಾನ್ ರಾಯಲ್ಸ್‌ ನಿಂದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಸೇರಿಕೊಂಡ್ರು. 2021ರ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ 9.25 ಕೋಟಿ ರೂಪಾಯಿ ಬಿಡ್‌ ಮಾಡಿ ತನ್ನದಾಗಿಸಿಕೊಂಡಿತು. ಈ ಮೊತ್ತವು ಅವರನ್ನು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ದೇಶೀಯ ಅನ್‌ಕ್ಯಾಪ್ಡ್ ಆಟಗಾರನನ್ನಾಗಿ ಮಾಡಿತು.

ಗೌತಮ್ ಡೆತ್ ಓವರ್‌ಗಳಲ್ಲಿ ಫಿನಿಶರ್ ಆಗಿದ್ದಾರೆ. ಅವರು ಹೆಚ್ಚಾಗಿ 7 ರಿಂದ 8 ರಲ್ಲಿ ಬ್ಯಾಟ್ ಮಾಡುತ್ತಾರೆ ಮತ್ತು ಡೆತ್ ಓವರ್‌ಗಳಲ್ಲಿ ಚೆಂಡನ್ನು ಬಲವಾಗಿ ಹೊಡೆಯುತ್ತಾರೆ. ಆದರೆ ಕಳೆದ ಸೀಸನ್‌ನಲ್ಲಿ ಒಂದೂ ಪಂದ್ಯವನ್ನಾಡದ ಇವರು ಹರಾಜಿಗೆ ಬಂದ್ರೆ, ಉತ್ತಮ ಮೊತ್ತಕ್ಕೆ ಬಿಕರಿಯಾಗೋದ್ರಲ್ಲಿ ಅನುಮಾನವಿಲ್ಲ.

ಮೊಹಮ್ಮದ್ ಅಜರುದ್ದೀನ್

ಮೊಹಮ್ಮದ್ ಅಜರುದ್ದೀನ್

ಕೇರಳ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ಅಜರುದ್ದೀನ್ ಇತ್ತೀಚೆಗೆ ಮುಗಿದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮಿಂಚಿದ್ರು. ಅವರು SMAT ಇತಿಹಾಸದಲ್ಲಿ ಎರಡನೇ ವೇಗದ ಶತಕದ ದಾಖಲೆಯನ್ನು ಹೊಂದಿದ್ದಾರೆ. ಅವರು 37 ಎಸೆತಗಳಲ್ಲಿ ಶತಕ ಬಾರಿಸಿದರು ಮತ್ತು 253.70 ರ ಸ್ಟ್ರೈಕ್ ರೇಟ್‌ನಲ್ಲಿ 54 ಎಸೆತಗಳಲ್ಲಿ 137 ರನ್ ಗಳಿಸಿದರು.

ಅಜರುದ್ದೀನ್ ಪ್ರಾಥಮಿಕವಾಗಿ ಅಗ್ರ ಕ್ರಮಾಂಕದ ಆರಂಭಿಕ ಆಟಗಾರ, ಆದರೆ ಅವರು ದೇಶೀಯ ಸ್ಪರ್ಧೆಗಳಲ್ಲಿ ಎಲ್ಲಾ ಸ್ಥಾನಗಳಲ್ಲಿ ಬ್ಯಾಟ್ ಮಾಡಿದ್ದಾರೆ. ಪರಿಣಾಮವಾಗಿ, ಅವನನ್ನು ಯಾವುದೇ ಸಂಖ್ಯೆಯಲ್ಲಿ ಬ್ಯಾಟರ್ ಆಗಿ ಬಳಸಬಹುದು ಮತ್ತು ಆಟದ ಸಮಯದಲ್ಲಿ ಯಾವುದೇ ಹಂತದಲ್ಲಿ ಚೆಂಡುಗಳನ್ನು ಹೊಡೆಯುವ ಮೂಲಕ ರನ್ ರೇಟ್ ಸುಧಾರಿಸಬಹುದು. ಇದಲ್ಲದೆ, ಅವರು ಸ್ಥಿರವಾದ ಬ್ಯಾಟರ್ ಆಗಿದ್ದು, ಅವರು ತಂಡಕ್ಕೆ ನಿರ್ಣಾಯಕ ರನ್‌ಗಳನ್ನು ನಿರಂತರವಾಗಿ ಕೊಡುಗೆ ನೀಡುತ್ತಾರೆ.

ಅಜರುದ್ದೀನ್ ಬ್ಯಾಟಿಂಗ್ ಅಷ್ಟೇ ಅಲ್ಲದೆ ಸಮರ್ಥ ವಿಕೆಟ್ ಕೀಪರ್ ಕೂಡ. ಅವರು ಅತ್ಯುತ್ತಮ ವಿಕೆಟ್ ಕೀಪರ್ ಆಗಿದ್ದು, ರಾಷ್ಟ್ರೀಯ ಕರ್ತವ್ಯದಿಂದ ದೂರವಿರುವಾಗ ಕೇರಳದ ನಾಯಕ ಸಂಜು ಸ್ಯಾಮ್ಸನ್ ಅವರ ಜಾಗವನ್ನು ತುಂಬಿದ್ದಾರೆ. ಈತ ಕೂಡ ಈ ಬಾರಿಯ ಮೆಗಾ ಹರಾಜಿನಲ್ಲಿ ಹಲವು ತಂಡಗಳ ಟಾರ್ಗೆಟ್ ಆಗಿದ್ದಾರೆ.

Story first published: Thursday, November 25, 2021, 10:10 [IST]
Other articles published on Nov 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X