ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ T20 ರೆಕಾರ್ಡ್‌ನಲ್ಲಿ ನಂ.1 ಆಗಲು ಕೊಹ್ಲಿಗೆ ಇನ್ನೊಂದೇ ಹೆಜ್ಜೆ: ಪಾಕ್‌ ಆಟಗಾರನನ್ನ ಹಿಂದಿಕ್ಕಲು ವಿರಾಟ್‌ ಮುನ್ನುಡಿ

Virat Kohli

ಟೀಂ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ ಮುಟ್ಟಿದ್ದೆಲ್ಲಾ ಚಿನ್ನ ಎಂಬ ಕಾಲವಿತ್ತು. ಆದ್ರೆ ಕಳೆದ ಮೂರು ವರ್ಷಗಳಲ್ಲಿ ಕೊಹ್ಲಿ ಅನುಭವಿಸಿದ ಕಷ್ಟ ಹೇಳತೀರದು. 70 ಅಂತರಾಷ್ಟ್ರೀಯ ಶತಕ ದಾಖಲಿಸಿದ್ದ ಕೊಹ್ಲಿ ಮತ್ತೊಂದು ಶತಕ ದಾಖಲಿಸಲು ಬರೋಬ್ಬರಿ 83 ಇನ್ನಿಂಗ್ಸ್‌ ತೆಗೆದುಕೊಂಡರು.

ಏಷ್ಯಾಕಪ್ ಸೂಪರ್ 4ನ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಬ್ಯಾಟ್ ಜಳಪಿಸಿತು. 61 ಎಸೆತಗಳಲ್ಲಿ ಅಜೇಯ 122 ರನ್ ಕಲೆಹಾಕಿದ ಕೊಹ್ಲಿ, 200 ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದರು. ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 6 ಸಿಕ್ಸರ್‌ಗಳಿದ್ದವು.

ಕೊಹ್ಲಿ ಕಳೆದ ಸೆಂಚುರಿ ಸಿಡಿಸಿದ ಬಳಿಕ ಅವರ ಬ್ಯಾಟಿಂಗ್ ಸರಾರಿಯ ಗ್ರಾಫ್ ದಿನೇ ದಿನೇ ಕುಸಿಯತೊಡಗಿದ್ದು, 72 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 36.10ರ ಬ್ಯಾಟಿಂಗ್ ಸರಾಸರಿಯಲ್ಲಿ 2,708 ರನ್ ಕಲೆಹಾಕಿದ್ದಾರೆ. ಈ ವೇಳೆ 26 ಅರ್ಧಶತಕ ದಾಖಲಾಗಿದ್ದು, 94 ಗರಿಷ್ಠ ಸ್ಕೋರ್ ಆಗಿದೆ. ಹೀಗಿದ್ದಾಗ ವಿರಾಟ್ ಮತ್ತೆ ಫಾರ್ಮ್‌ಗೆ ಮರಳಿದ್ದು ಮೂರಂಕಿ ಗಡಿದಾಟಿದ್ದಾರೆ. ಈ ಮೂಲಕ ಕಿಂಗ್ ಕೊಹ್ಲಿ ಮತ್ತೆ ಪಟ್ಟಕ್ಕೇರಲು ಸಿದ್ಧಗೊಂಡಿದ್ದಾರೆ.

ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2ನೇ ಅತಿ ಹೆಚ್ಚು ಬ್ಯಾಟಿಂಗ್ ಸರಾಸರಿ

ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2ನೇ ಅತಿ ಹೆಚ್ಚು ಬ್ಯಾಟಿಂಗ್ ಸರಾಸರಿ

ಪ್ರಸ್ತುತ ಟಿ20 ಫಾರ್ಮೆಟ್‌ನಲ್ಲಿ ಅತಿ ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದಿರುವ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮೂರಂಕಿ ಮುಟ್ಟುವ ಮೂಲಕ ಕೊಹ್ಲಿ ಬ್ಯಾಟಿಂಗ್ ಸರಾಸರಿ ಮತ್ತೆ ಏರತೊಡಗಿದೆ. ಅದ್ರಲ್ಲೂ ಅಜೇಯ 122 ರನ್ ಕಲೆಹಾಕಿದ ಕೊಹ್ಲಿ ಬ್ಯಾಟಿಂಗ್ ಗ್ರಾಫ್ ಮತ್ತೆ ಜಿಗಿತ ಸಾಧಿಸಿದೆ.

104 ಟಿ20 ಪಂದ್ಯಗಳಲ್ಲಿ ವಿರಾಟ್ 96 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದು, 51.94ರ ಬ್ಯಾಟಿಂಗ್ ಸರಾಸರಿಯಲ್ಲಿ 3,584 ರನ್ ಕಲೆಹಾಕಿದ್ದಾರೆ. ಇವರ ಕೆರಿಯರ್‌ನಲ್ಲಿ 1 ಶತಕ ಮತ್ತು 32 ಅರ್ಧಶತಕ ದಾಖಲಿಸಿದ್ದಾರೆ. ಅತಿ ಹೆಚ್ಚು ಅರ್ಧಶತಕ ದಾಖಲಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಜೊತೆಗೆ ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ 71ನೇ ಅಂತರಾಷ್ಟ್ರೀಯ ಶತಕ: 6 ವಿಶೇಷ ದಾಖಲೆಗಳು

ಅತಿ ಹೆಚ್ಚು ಟಿ20 ಬ್ಯಾಟಿಂಗ್ ಸರಾಸರಿ ಹೊಂದಿದ್ದಾನೆ ಪಾಕಿಸ್ತಾನದ ಪ್ಲೇಯರ್

ಅತಿ ಹೆಚ್ಚು ಟಿ20 ಬ್ಯಾಟಿಂಗ್ ಸರಾಸರಿ ಹೊಂದಿದ್ದಾನೆ ಪಾಕಿಸ್ತಾನದ ಪ್ಲೇಯರ್

ಹೌದು ಕಿಂಗ್ ಕೊಹ್ಲಿಗಿಂತ ಕೇವಲ ಒಂದು ಹೆಜ್ಜೆ ಮುಂದಿರುವುದು ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್. ಟಿ20 ಫಾರ್ಮೆಟ್‌ನಲ್ಲಿ ಅತ್ಯದ್ಭುತ ಫಾರ್ಮ್‌ನಲ್ಲಿರುವ ರಿಜ್ವಾನ್‌ ಪಾಕ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ.

ಇದುವರೆಗೆ ಆಡಿರುವ 60 ಟಿ20 ಪಂದ್ಯಗಳು ಮತ್ತು 49 ಇನ್ನಿಂಗ್ಸ್‌ಗಳಲ್ಲಿ ರಿಜ್ವಾನ್ 52.05ರ ಬ್ಯಾಟಿಂಗ್ ಸರಾಸರಿಯಲ್ಲಿ 1,874 ರನ್ ಕಲೆಹಾಕಿದ್ದಾರೆ. ಜೊತೆಗೆ 1 ಶತಕ ಮತ್ತು 15 ಅರ್ಧಶತಕಗಳು ದಾಖಲಾಗಿವೆ. ಈತ ವೈಯಕ್ತಿಕ ಗರಿಷ್ಠ ಸ್ಕೋರ್ ಅಜೇಯ 104 ರನ್‌ಗಳಾಗಿವೆ.

ಬಹುತೇಕ 52ರ ಬ್ಯಾಟಿಂಗ್ ಸರಾಸರಿಯನ್ನ ಸಮೀಪಿಸಿರುವ ವಿರಾಟ್ ಕೊಹ್ಲಿ ಮುಂದಿನ ಟಿ20 ಸರಣಿಯಲ್ಲಿ, ಏಷ್ಯಾಕಪ್‌ ರೀತಿಯಲ್ಲಿ ಅಮೋಘ ಮುಂದುವರಿಸಿದ್ರೆ, ರಿಜ್ವಾನ್‌ರನ್ನ ಹಿಂದಿಕ್ಕಿ ನಂಬರ್ ಒನ್ ಬ್ಯಾಟಿಂಗ್ ಸರಾಸರಿ ಹೊಂದುವುದರಲ್ಲಿ ಅನುಮಾನವಿಲ್ಲ.

ಕೊಹ್ಲಿ ಜಾಗದಲ್ಲಿ ಬೇರೆ ಯಾರೇ ಇದ್ರೂ, ಶತಕ ಸಿಡಿಸದೇ 3 ವರ್ಷ ತಂಡದಲ್ಲಿ ಉಳಿಯುತ್ತಿರಲಿಲ್ಲ: ಗೌತಮ್‌ ಗಂಭೀರ್

Pakistanaದ ಬೌಲರ್ Naseem Shah ಜೊತೆ ರೋಮ್ಯಾಂಟಿಕ್ ವಿಡಿಯೋ ಶೇರ್ ಮಾಡಿದ Urvashi Rautela | *Cricket |OneIndia
T20Iನಲ್ಲಿ ಅತಿ ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದಿರುವ ಟಾಪ್ 10 ಪ್ಲೇಯರ್ಸ್

T20Iನಲ್ಲಿ ಅತಿ ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದಿರುವ ಟಾಪ್ 10 ಪ್ಲೇಯರ್ಸ್

ಚುಟುಕು ಕ್ರಿಕೆಟ್ ಫಾರ್ಮೆಟ್‌ನಲ್ಲಿ ಅತಿ ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದಿರುವ ಟಾಪ್ 10 ಪ್ಲೇಯರ್ಸ್‌ ಪಟ್ಟಿ ಈ ಕೆಳಗಿದೆ.
1. ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ): 52.05
2. ವಿರಾಟ್ ಕೊಹ್ಲಿ (ಭಾರತ): 51.94
3. ಡಿವೊನ್ ಕಾನ್ವೆ (ನ್ಯೂಜಿಲೆಂಡ್): 47.20
4. ಮನೀಶ್ ಪಾಂಡೆ (ಭಾರತ): 44.31
5. ನವನೀತ್ ಧಲಿವಾಲ್ (ಕೆನಡಾ): 44.00
6. ಸಬಾವೂನ್ ಡೇವಿಜಿ (ಜೆಕ್ ರಿಪಬ್ಲಿಕ್): 43.72
7. ಬಾಬರ್ ಅಜಮ್ (ಪಾಕಿಸ್ತಾನ): 43.15
8. ಏಡನ್ ಮಕ್ರಾಮ್ (ದಕ್ಷಿಣ ಆಫ್ರಿಕಾ): 42.47
9. ರ್ಯಾನ್ ಟೆನ್ ಡಸೆಚ್ (ನೆದರ್ಲೆಂಡ್ಸ್‌): 41.00
10. ಕೆ.ಎಲ್ ರಾಹುಲ್ (ಭಾರತ): 39.26

Story first published: Friday, September 9, 2022, 18:17 [IST]
Other articles published on Sep 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X