ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿಂಡೀಸ್‌ನ ಡ್ವೇಯ್ನ್ ಬ್ರಾವೋ ಗುಡ್‌ಬೈ

ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡ್ವೇಯ್ನ್ ಬ್ರಾವೋ | Oneindia Kannada

ಟ್ರನಿಡಾಡ್, ಅಕ್ಟೋಬರ್ 25: ವೆಸ್ಟ್ ಇಂಡೀಸ್ ತಂಡದ ಆಲ್‌ರೌಂಡರ್ ಡ್ವೇಯ್ನ್ ಬ್ರಾವೋ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ.

ಎರಡು ವರ್ಷದಿಂದ ಅಂತಾರಾಷ್ಟ್ರೀಯ ಪಂದ್ಯವನ್ನೇ ಆಡದ ಬ್ರಾವೋ, ಪ್ರಥಮದರ್ಜೆ ಟಿ20 ಟೂರ್ನಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು.

ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯೊಂದಿಗೆ ವೇತನ ಮತ್ತು ಆಡಳಿತಾತ್ಮಕ ಸಮಸ್ಯೆಗಳ ಕಾರಣದ ತಿಕ್ಕಾಟದಿಂದ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದರು. ಈಗ ಅಧಿಕೃತವಾಗಿ ಕ್ರಿಕೆಟ್‌ಗೆ ವಿದಾಯ ಹೇಳಿದಂತಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಶ್ರೀಲಂಕಾದ ರಂಗನಾ ಹೆರಾತ್ ವಿದಾಯ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಶ್ರೀಲಂಕಾದ ರಂಗನಾ ಹೆರಾತ್ ವಿದಾಯ

ತಮ್ಮ ಆಕ್ರಮಣಕಾರಿ ಬ್ಯಾಟಿಂಗ್, ಬ್ಯಾಟ್ಸ್‌ಮನ್‌ಗಳ ದಿಕ್ಕುತಪ್ಪಿಸುವ ನಿಧಾನಗತಿಯ ಯಾರ್ಕರ್ ಬೌಲಿಂಗ್, ಜಿಂಕೆಯಂತೆ ಜಿಗಿದು ಚೆಂಡು ಹಿಡಿಯುವ ಅಮೋಘ ಫೀಲ್ಡಿಂಗ್ ಸಾಮರ್ಥ್ಯದ ಕಾರಣ ಅವರು ಪರಿಪೂರ್ಣ ಆಲ್‌ರೌಂಡರ್ ಎನಿಸಿದ್ದಾರೆ.

35 ವರ್ಷ ವಯಸ್ಸಿನ ಬ್ರಾವೋ, 2016ರ ಸೆಪ್ಟೆಂಬರ್‌ನಿಂದ ಅಂತಾರಾಷ್ಟ್ರೀಯ ಪಂದ್ಯವನ್ನೇ ಆಡಿರಲಿಲ್ಲ. ಸುಮಾರು 12 ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ಬ್ರಾವೋ, ವಿಂಡೀಸ್ ತಂಡದ ಅನೇಕ ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕೊನೆವರೆಗೂ ಹೋರಾಟ ನಡೆಸುವ ದಿಟ್ಟತನದಿಂದ ಕ್ರಿಕೆಟ್ ಜಗತ್ತು ಅವರನ್ನು 'ಚಾಂಪಿಯನ್ ಬ್ರಾವೋ' ಎಂದೇ ಕರೆಯುತ್ತದೆ.

ಎರಡು ವಿಶ್ವಕಪ್

ಎರಡು ವಿಶ್ವಕಪ್

ಡ್ವೇಯ್ನ್ ಬ್ರಾವೋ ಮೂರೂ ಮಾದರಿಗಳಲ್ಲಿ 2004-2016ರ ಅವಧಿಯಲ್ಲಿ ಒಟ್ಟು 270 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ (40 ಟೆಸ್ಟ್, 164 ಏಕದಿನ ಮತ್ತು 66 ಟಿ20). ಇದರಲ್ಲಿ 2012 ಮತ್ತು 2016ರ ವಿಶ್ವಕಪ್ ಟಿ20ಯ ಎರಡು ಗೆಲುವುಗಳೂ ಸೇರಿವೆ.

ವಿಕೆಟ್ ಪಡೆದಾಗ ಬ್ರಾವೋ ನರ್ತಿಸುತ್ತಾ ಸಂಭ್ರಮಿಸುವ ಪರಿ ಸಾಕಷ್ಟು ಪ್ರಸಿದ್ಧವಾಗಿದೆ. ಬ್ರಾವೋ ಒಬ್ಬ ಒಳ್ಳೆಯ ನೃತ್ಯಪಟುವೂ ಹೌದು.

ಈ 'ಟೈ' ಎನ್ನುವುದು ಎಷ್ಟು ಕ್ರೂರ: ಭಾರತ Vs ವಿಂಡೀಸ್ ಟ್ವಿಟ್ಟರ್ ಪ್ರತಿಕ್ರಿಯೆ

ಮರೂನ್ ಕ್ಯಾಪ್ ಧರಿಸಿದ್ದು ನೆನಪಿದೆ

ಮರೂನ್ ಕ್ಯಾಪ್ ಧರಿಸಿದ್ದು ನೆನಪಿದೆ

ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲ ಮಾದರಿಗಳಿಂದ ನಿವೃತ್ತನಾಗುತ್ತಿದ್ದೇನೆ ಎಂದು ಇಂದು ಅಧಿಕೃತವಾಗಿ ಖಚಿತಪಡಿಸುತ್ತಿದ್ದೇನೆ. 2004ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಕ್ರಿಕೆಟ್ ಮೈದಾನದ ಒಳಗೆ ನಡೆಯುವ ಮುನ್ನ ಮರೂನ್ ಕ್ಯಾಪ್ ಪಡೆದುಕೊಂಡ ಪದಾರ್ಪಣೆಯ ಗಳಿಗೆಯನ್ನು 14 ವರ್ಷದ ಬಳಿಕವೂ ನಾನು ನೆನಪಿಸಿಕೊಳ್ಳುತ್ತೇನೆ. ಅಲ್ಲಿಂದ ಪಡೆದ ಉತ್ಸಾಹ ಮತ್ತು ಪ್ಯಾಷನ್‌ಅನ್ನು ನನ್ನು ವೃತ್ತಿ ಬದುಕಿನ ಉದ್ದಕ್ಕೂ ಉಳಿಸಿಕೊಂಡಿದ್ದೇನೆ ಎಂದು ಬ್ರಾವೋ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

10 ಸಾವಿರ ರನ್ ಕ್ಲಬ್ ನಲ್ಲಿ ಕೊಹ್ಲಿ ಜತೆಗಿರುವ 5 ದಿಗ್ಗಜರು

ಮುಂದಿನ ಪೀಳಿಗೆಗೆ ದಾರಿ

ವೃತ್ತಿಪರ ಕ್ರಿಕೆಟಿಗನಾಗಿ ನನ್ನ ದೀರ್ಘ ಬದುಕನ್ನು ಉಳಿಸಿಕೊಳ್ಳಲು ಬೇರೆಯವರು ಈ ಹಿಂದೆ ಮಾಡಿದಂತೆ ನಾನೂ ಮಾಡಬೇಕು ಎಂಬುದನ್ನು ಒಪ್ಪಿಕೊಳ್ಳಬೇಕಾಗಿದೆ. ಮುಂದಿನ ಪೀಳಿಗೆಯ ಆಟಗಾರರಿಗಾಗಿ ಅಂತಾರಾಷ್ಟ್ರೀಯ ಸ್ಥಾನವನ್ನು ತೆರವು ಮಾಡಬೇಕಾಗಿದೆ ಎಂದಿದ್ದಾರೆ.

ವಿಂಡೀಸ್ ವಿರುದ್ಧ ಅತ್ಯಧಿಕ ರನ್: ಸಚಿನ್ ದಾಖಲೆ ಮುರಿದ ಕೊಹ್ಲಿ

ಟೆಸ್ಟ್ ಸಾಧನೆ

ಟೆಸ್ಟ್ ಸಾಧನೆ

40 ಟೆಸ್ಟ್ ಪಂದ್ಯಗಳನ್ನು ಆಡಿರುವ ಬ್ರಾವೋ 71 ಇನ್ನಿಂಗ್ಸ್‌ಗಳಿಂದ 31.43ರ ಸರಾಸರಿಯಲ್ಲಿ 2,200 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಮತ್ತು 13 ಅರ್ಧ ಶತಕಗಳಿವೆ.

39.84ರ ಸರಾಸರಿಯಲ್ಲಿ 86 ವಿಕೆಟ್‌ಗಳನ್ನು ಪಡೆದಿದ್ದಾರೆ. ಎರಡು ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ. 2004ರಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪದಾರ್ಪಣೆ ಮಾಡಿದ್ದ ಬ್ರಾವೋ, 2010ರಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದರು.

ಏಕದಿನ ಕ್ರಿಕೆಟ್ ನ ಅಚ್ಚರಿ: ಕಿಂಗ್ ಕೊಹ್ಲಿ ಈಗ 10,000ರನ್ ಗಳ ಸರದಾರ

ಏಕದಿನದಲ್ಲಿ ಬ್ರಾವೋ

ಏಕದಿನದಲ್ಲಿ ಬ್ರಾವೋ

164 ಏಕದಿನ ಪಂದ್ಯಗಳಲ್ಲಿ 25.37ರ ಸರಾಸರಿಯಲ್ಲಿ 2968 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು 10 ಅರ್ಧಶತಕಗಳಿವೆ.

ಬೌಲಿಂಗ್‌ ವಿಭಾಗದಲ್ಲಿ 29.52ರ ಸರಾಸರಿಯಲ್ಲಿ 199 ವಿಕೆಟ್‌ಗಳನ್ನು ಅವರು ತಮ್ಮ ಖಾತೆಗೆ ಜಮಾಯಿಸಿದ್ದರು.

ಟಿ20 ಸಾಧನೆ

66 ಟಿ20 ಪಂದ್ಯಗಳಲ್ಲಿ 59 ಇನ್ನಿಂಗ್ಸ್‌ಗಳಿಂದ 116.53 ಸ್ಟ್ರೈಕ್ ರೇಟ್‌ನಲ್ಲಿ 1,142 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧಶತಕಗಳಿವೆ. 8.46ರ ಎಕಾನಮಿಯಲ್ಲಿ 1470 ರನ್ ನೀಡಿ 52 ವಿಕೆಟ್ ಪಡೆದುಕೊಂಡಿದ್ದಾರೆ. 2016ರಲ್ಲಿ ಪಾಕಿಸ್ತಾನದ ವಿರುದ್ಧ ಕೊನೆಯ ಟಿ20 ಪಂದ್ಯ ಆಡಿದ್ದರು.

2013ರಲ್ಲಿ ಡರೆನ್ ಸಮಿ ಅವರಿಂದ ವಿಂಡೀಸ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು. 2014ರಲ್ಲಿ ಭಾರತ ಪ್ರವಾಸದಲ್ಲಿದ್ದ ವೇಳೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯೊಂದಿಗೆ ವೇತನ ಪಾವತಿ ಸಂಬಂಧ ಉಂಟಾದ ವಿವಾದದ ಕಾರಣ ಟೂರ್ನಿಯನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ತವರಿಗೆ ಮರಳುವ ನಿರ್ಧಾರದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆ ಸಂದರ್ಭದಲ್ಲಿ ಧರ್ಮಸ್ಥಳದಲ್ಲಿ ಆಡಿದ ಏಕದಿನ ಪಂದ್ಯವೇ ಕೊನೆಯ ಬಾರಿಗೆ ಅವರು ವಿಂಡೀಸ್ ತಂಡವನ್ನು ಪ್ರತಿನಿಧಿಸಿದ್ದು.

ಆಟ ಮುಂದುವರಿಸುವೆ

ಆಟ ಮುಂದುವರಿಸುವೆ

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರೂ, ವೃತ್ತಿಪರ ಕ್ರಿಕೆಟ್‌ನಿಂದ ಅವರು ಸಂಪೂರ್ಣ ದೂರವಾಗಿಲ್ಲ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸುವುದನ್ನು ಅವರು ಮುಂದುವರಿಸಲಿದ್ದಾರೆ. ಬಿಗ್ ಬ್ಯಾಷ್, ಕೆರಿಬಿಯನ್ ಲೀಗ್ ಸೇರಿದಂತೆ ಟಿ20 ಪ್ರಥಮದರ್ಜೆ ಕ್ರಿಕೆಟ್‌ಗಳಲ್ಲಿ ಆಡಲಿದ್ದಾರೆ. 'ನನ್ನ ವೃತ್ತಿಪರ ಕ್ರಿಕೆಟ್‌ಅನ್ನು ಮುಂದುವರಿಸಲಿದ್ದೇನೆ ಮತ್ತು ನೈಜ ಚಾಂಪಿಯನ್‌ಆಗಿ ಮನರಂಜನೆ ನೀಡಲಿದ್ದೇನೆ' ಎಂದು ಬ್ರಾವೋ ಹೇಳಿದ್ದಾರೆ.

Story first published: Thursday, October 25, 2018, 16:56 [IST]
Other articles published on Oct 25, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X