ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಭಾರತ-ಪಾಕಿಸ್ತಾನ ಮ್ಯಾಚ್ ದೂರದರ್ಶನದಲ್ಲೇ ನೋಡಿ

By Mahesh

ನವದೆಹಲಿ, ಫೆ.10: ದೇಶದ ಅಸಂಖ್ಯಾತ ಕ್ರಿಕೆಟ್ ಅಭಿಮಾನಿಗಳಿಗೆ ಇದ್ದ ಸಣ್ಣ ಅನುಮಾನವನ್ನು ಸುಪ್ರೀಂಕೋರ್ಟ್ ಪರಿಹರಿಸಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯವನ್ನು ಕೇಬಲ್, ಡಿಶ್, ಲಾ ಕಾರ್ಟಾ ಮಣ್ಣು ಮಸಿ ತೊಂದರೆ ಇಲ್ಲದೆ ದೂರದರ್ಶನದಲ್ಲೇ ನೋಡಿ ಆನಂದಿಸಬಹುದಾಗಿದೆ.

ಫೆ.15 ರಂದು ನಡೆಯಲಿರುವ ಈ ಪಂದ್ಯವನ್ನು ದೂರದರ್ಶನ(ಡಿಡಿ ನ್ಯಾಷನಲ್)ಯಲ್ಲಿ ಪ್ರಸಾರ ಮಾಡುವಂತೆ ಪ್ರಸಾರ ಭಾರತಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಹೀಗಾಗಿ ಅಭಿಮಾನಿಗಳು ಮುಕ್ತವಾಗಿ ನೋಡಬಹುದು.[ಭಾರತ-ಪಾಕಿಸ್ತಾನ ಕದನ ಟಿಕೆಟ್ ದಾಖಲೆ ಮಾರಾಟ]

ಕೇಬಲ್ ಆಪರೇಟರ್ಸ್ ಹಾಗೂ ದೂರದರ್ಶನ ನಡುವಿನ ಜಟಾಪಟಿ ಇರುವುದು ಎಲ್ಲರಿಗೂ ಗೊತ್ತೇ ಇದೆ. ವಿಶ್ವಕಪ್ ಕ್ರಿಕೆಟ್ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ 1ರಲ್ಲಿ ಪ್ರಸಾರವಾಗುತ್ತಿದೆ. ಅದರೆ, ಇದು ಎಲ್ಲರಿಗೂ ಲಭ್ಯವಿಲ್ಲ.

ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ

ಸ್ಟಾರ್ ಸ್ಪೋರ್ಟ್ಸ್ ಬೇಕೆಂದರೆ 40 ರು ಅಧಿಕ ಕೊಟ್ಟು ಪಡೆದುಕೊಳ್ಳಬೇಕಾಗುತ್ತದೆ. ಉಳಿದಂತೆ ಕನ್ನಡದಲ್ಲಿ ವೀಕ್ಷಕ ವಿವರಣೆ ಕೇಳಿ ನೋಡಬಯಸುವವರು ಸುವರ್ಣ ಪ್ಲಸ್ ವಾಹಿನಿಯಲ್ಲಿ ಪಂದ್ಯಗಳನ್ನು ನೋಡಬಹುದು.

Supreme Court allows Doordarshan to telecast India-Pakistan WC match

ಡಿಡಿ ಹಾಗೂ ಕೇಬಲ್ ಆಪರೇಟರ್ಸ್ ನಡುವಿನ ಕಿತ್ತಾಟ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ದೂರದರ್ಶನದಲ್ಲಿ ಲೈವ್ ಫೀಡ್ ಕೊಡಲು ಸಾಧ್ಯವಿಲ್ಲ ಎಂದು ಕೇಬಲ್ ಆಪರೇಟರ್ಸ್ ವಾದಿಸಿದರು. ಇದಕ್ಕೆ ಕೋರ್ಟ್ ಸಮ್ಮತಿಸಿತು. [ವೀಕ್ಷಕ ವಿವರಣೆ ಕಸ್ತೂರಿ ಕನ್ನಡದಲ್ಲಿ!]

ಈ ಆದೇಶದ ವಿರುದ್ಧ ಪ್ರಸಾರ ಭಾರತಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು. ಈಗ ಡಿಡಿಯಲ್ಲಿ ಲೈವ್ ಕ್ರಿಕೆಟ್ ಪ್ರಸಾರ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. [ವೈರಿಗಳ ಕಾದಾಟ, ಎಲ್ಲಾ ದಾಖಲೆಗಳ ಧೂಳಿಪಟ]

ಜಸ್ಟೀಸ್ ರಂಜನ್ ಗೋಗಾಯಿ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದ್ದು, ದೆಹಲಿ ಹೈಕೋರ್ಟ್ ಆದೇಶಕ್ಕೆ ಫೆ.17ರ ತನಕ ತಡೆಯಾಜ್ಞೆ ನೀಡಲಾಗಿದೆ. 2000ರಲ್ಲೇ ಪ್ರಸಾರ ಭಾರತಿ ಆದೇಶ ಹೊರಡಿಸಿದ್ದು, ಕೇಬಲ್ ಮೂಲಕ ಡಿಡಿ ನ್ಯಾಷನಲ್ ಹಾಗೂ ಡಿಡಿ ನ್ಯೂಸ್ ವಾಹಿನಿಗಳನ್ನು ತಪ್ಪದೇ ಪ್ರಸಾರ ಮಾಡಬೇಕಾಗುತ್ತದೆ. (ಐಎಎನ್ ಎಸ್)

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X