ಟೆನಿಸ್ ಆಡುವಾಗ 7.3 ಕೋಟಿ ರೂ. ವಾಚ್ ಕಟ್ಟಿದ್ದ ರಾಫೆಲ್ ನಡಾಲ್, ಇನ್ನೂ ಡಿನ್ನರ್‌ಗೆ ಹೋಗುವಾಗ ಎಷ್ಟು ರೂ. ವಾಚ್!

ಕ್ಲೇ ಕೋರ್ಟ್ ಕಿಂಗ್ ಖ್ಯಾತಿಯ ರಾಫೆಲ್ ನಡಾಲ್ ಆವೆ ಮಣ್ಣಿನಲ್ಲಿ ಯಾವತ್ತಿದ್ರೂ ಚಿನ್ನ ಎಂಬುದು ಟೆನಿಸ್ ಲೋಕಕ್ಕೆ ತಿಳಿದಿದೆ. ಆತ ಕಣಕ್ಕಿಳಿದ್ರೆ ಎದುರಾಳಿ ಒಮ್ಮೆ ಯೋಚಿಸಲೇಬೇಕು. ಇದೀಗ ರಾಫಾ ಆಟಕ್ಕಿಂತ ಹೆಚ್ಚಾಗಿ ತಾನು ಕಟ್ಟಿದ್ದ ವಾಚ್‌ನಿಂದ ಸಖತ್ ಸುದ್ದಿಯಾಗಿದ್ದಾರೆ.

ವಾಚ್‌ ಕಟ್ಟಿದ್ರೆ ಹೇಗಪ್ಪಾ ಸುದ್ದಿಯಾಗ್ತಾರೆ ಅಂತೀರಾ, ಹೌದು ನಡಾಲ್ ಕಟ್ಟಿದ ವಾಚ್ ಬೆಲೆ ಅಂತದ್ದು. ಈ ವಾಚ್‌ ಬೆಲೆ ಕೇಳಿದ್ರೆ ನೀವು ಒಮ್ಮೆ ಆಶ್ಚರ್ಯಗೊಳ್ಳುವುದರಲ್ಲಿ ಅನುಮಾನವಿಲ್ಲ.

ರೋಲ್ಯಾಂಡ್ ಗ್ಯಾರೋಸ್‌ನಲ್ಲಿ 70ನೇ ಜಯ ದಾಖಲಿಸಿದ ಜೊಕೋವಿಕ್

ಇಟಾಲಿಯನ್ ವಿಶ್ವದ 74 ನೇ ಕ್ರಮಾಂಕದ ಸ್ಟೆಫಾನೊ ಟ್ರಾವಗ್ಲಿಯಾ ವಿರುದ್ಧ ಮೂರನೇ ರೌಂಡ್‌ನಲ್ಲಿ 6-1, 6-4, 6-0 ನೇರ ಸೆಟ್‌ಗಳಿಂದ ಜಯ ಸಾಧಿಸಿದರು. ಈ ಪಂದ್ಯದಲ್ಲಿ ರಾಫಾ ರಿಚರ್ಡ್ ಮಿಲೆ ವಾಚ್ ಕಟ್ಟಿದ್ದರು.

ರಾಫೆಲ್ ನಡಾಲ್ ಕಟ್ಟಿದ್ದು 7.3 ಕೋಟಿ ರೂ. ವಾಚ್

ರಾಫೆಲ್ ನಡಾಲ್ ಕಟ್ಟಿದ್ದು 7.3 ಕೋಟಿ ರೂ. ವಾಚ್

ಹೌದು ರಾಫೆಲ್ ನಡಾಲ್ ಕಟ್ಟಿದ್ದು ಬರೋಬ್ಬರಿ 10,50,000 ಅಮೆರಿಕನ್ ಡಾಲರ್ ಬೆಲೆಯ ರಿಚರ್ಡ್ ಮಿಲೆ ವಾಚ್, ಅಂದರೆ ಭಾರತದ ರೂಪಾಯಿಗಳಲ್ಲಿ ಸುಮಾರು 7.3 ಕೋಟಿ ರೂಪಾಯಿಗಳು.

30 ಗ್ರಾಂ ತೂಕವಿರುವ ಈ ವಾಚ್‌ ಅನ್ನು ಬಳಕೆಯಾದ ಕಾರ್‌ನ ಮೆಟಲ್ ತಯಾರಿಸಿದ್ದಾರೆ.

50 ವಿಶೇಷ ವಾಚ್‌ಗಳನ್ನು ತಯಾರಿಸಿದ್ದ ಕಂಪನಿ

50 ವಿಶೇಷ ವಾಚ್‌ಗಳನ್ನು ತಯಾರಿಸಿದ್ದ ಕಂಪನಿ

ಸ್ವಿಸ್ ಬ್ರ್ಯಾಂಡ್ ರಿಚರ್ಡ್ ಮಿಲೆ ವಾಚ್ ಕಂಪೆನಿ ತಯಾಸಿರುವ ವಿಶೇ RM27-03s ವಾಚನ್ನು ನಡಾಲ್ ಕಟ್ಟಿದ್ದರು. ಇದು ಏಕೆ ವಿಶೇಷ ಅಂದರೆ ಕಂಪನಿ ಕೇವಲ 50 ವಾಚ್‌ಗಳನ್ನು ಮಾತ್ರ ತಯಾರಿಸಿದೆ. ಇದರಲ್ಲಿ ಒಂದು ವಾಚ್‌ ಟೆನಿಸ್ ಚಾಂಪಿಯನ್ ರಾಫೆಲ್ ನಡಾಲ್ ಕೈನಲ್ಲಿದೆ.

ಗಾಯದ ಸಮಸ್ಯೆಯಿಂದ ಫ್ರೆಂಚ್ ಓಪನ್‌ನಿಂದ ಹೊರ ನಡೆದ ಸೆರೆನಾ ವಿಲಿಯಮ್ಸ್‌

20ನೇ ಗ್ರ್ಯಾಂಡ್‌ಸ್ಲ್ಯಾಮ್‌ಗೆ ಗುರಿಯಿಟ್ಟಿರುವ ನಡಾಲ್

20ನೇ ಗ್ರ್ಯಾಂಡ್‌ಸ್ಲ್ಯಾಮ್‌ಗೆ ಗುರಿಯಿಟ್ಟಿರುವ ನಡಾಲ್

ಈಗಾಗಲೇ 19 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ರಾಫೆಲ್ ನಡಾಲ್ 20ನೇ ಪ್ರಶಸ್ತಿಗೆ ಗುರಿಯಿಟ್ಟಿದ್ದಾರೆ. ಈ ಮೂಲಕ ಟೆನಿಸ್ ಚಾಂಪಿಯನ್ ರೋಜರ್ ಫೆಡರರ್‌ಗೆ ಸಮನಾಗಲು ಯೋಜಿಸಿದ್ದಾರೆ.

12 ಬಾರಿ ಫ್ರೆಂಚ್ ಓಪನ್ ಕಿರೀಟ

12 ಬಾರಿ ಫ್ರೆಂಚ್ ಓಪನ್ ಕಿರೀಟ

ಟೆನಿಸ್ ಇತಿಹಾಸದಲ್ಲಿ ಯಾರೊಬ್ಬರೂ ಮಾಡದ ಸಾಧನೆ ರಾಫೆಲ್ ನಡಾಲ್ ಹೆಸರಲ್ಲಿದೆ. ಯಾವುದೇ ಒಂದು ಸಿಂಗಲ್ ಗ್ರ್ಯಾಂಡ್‌ಸ್ಲ್ಯಾಮ್‌ಗಳಲ್ಲಿ ಗೆಲ್ಲದಷ್ಟು ಪ್ರಶಸ್ತಿ ಈತನ ಹೆಸರಲ್ಲಿದೆ. ಅದರಲ್ಲೂ ಫ್ರೆಂಚ್ ಓಪನ್‌ನಲ್ಲಿ 12 ಬಾರಿ ಪ್ರಶಸ್ತಿ ಗೆದ್ದಿದ್ದು, ಕಳೆದ ಮೂರು ವರ್ಷ ಸೋಲದೆ ಕಪ್ ತಮ್ಮದಾಗಿಸಿಕೊಂಡಿದ್ದಾರೆ. ರಾಫೆಲ್ ನಡಾಲ್ ಯಾವೆಲ್ಲಾ ವರ್ಷ ಫ್ರೆಂಚ್ ಓಪನ್ ಗೆದ್ದಿದ್ದಾರೆ ಎಂಬ ಮಾಹಿತಿ ಕೆಳಗಿದೆ.

ವರ್ಷ: 2005, 2006, 2007, 2008, 2010, 2011, 2012, 2013, 2014, 2017, 2018, 2019

For Quick Alerts
ALLOW NOTIFICATIONS
For Daily Alerts
Story first published: Saturday, October 3, 2020, 15:21 [IST]
Other articles published on Oct 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X