PBKS VS CSK: ಐಪಿಎಲ್‌ನಲ್ಲಿ ಅಮೋಘ ಸಾಧನೆ ಮಾಡಿದ ಗಬ್ಬರ್, ಕೊಹ್ಲಿ ಬಿಟ್ರೆ ಈತನೇ ಟಾಪರ್!

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗಬ್ಬರ್ ಖ್ಯಾತಿಯ ಶಿಖರ್ ಧವನ್ ಅಬ್ಬರದ ಬ್ಯಾಟಿಂಗ್ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಜೊತೆಗೆ ಐಪಿಎಲ್‌ ಇತಿಹಾಸದಲ್ಲಿ ಅಮೋಘ ಸಾಧನೆಯ ಮೆಟ್ಟಿಲನ್ನೇರಿದ್ದಾರೆ.

ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ ಕಿಂಗ್ಸ್ ಸವಾಲಿನ ಮೊತ್ತ ಪೇರಿಸಲು ಶಿಖರ್ ಧವನ್ ಬೊಂಬಾಟ್ ಆಟವು ನೆರವಾಗಿದೆ. ಶಿಖರ್ ಧವನ್‌ಗೆ ಭಾನುಕಾ ರಾಜಪಕ್ಷೆ ಉತ್ತಮ ಸಾಥ್ ನೀಡಿದ್ದಾರೆ.

59 ಎಸೆತಗಳಲ್ಲಿ ಅಜೇಯ 88 ರನ್ ಕಲೆಹಾಕಿದ ಶಿಖರ್ ಧವನ್ ಇನ್ನಿಂಗ್ಸ್‌ನಲ್ಲಿ 9 ಅಮೋಘ ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್‌ಗಳಿದ್ದವು. ಇನ್ನು ಧವನ್‌ಗೆ ಉತ್ತಮ ಸಾಥ್ ನೀಡಿದ ರಾಜಪಕ್ಷ 32 ಎಸೆತಗಳಲ್ಲಿ 42 ರನ್ ಕಲೆಹಾಕಿ ಉತ್ತಮ ಸಾಥ್ ನೀಡಿದ್ರು. ಈ ಶತಕದ ಜೊತೆಯಾಟದಿಂದಾಗಿ ಪಂಜಾಬ್ 187 ರನ್ ಕಲೆಹಾಕಲು ಸಾಧ್ಯವಾಯಿತು. ಅಲ್ಲದೆ ಚೆನ್ನೈ ಅನ್ನು ಡಿಫೆಂಡ್ ಮಾಡಿ 11 ರನ್‌ಗಳಿಂದ ಗೆದ್ದು ಬೀಗಿದೆ.

200ನೇ ಐಪಿಎಲ್ ಪಂದ್ಯವನ್ನಾಡಿದ ಶಿಖರ್ ಧವನ್ ತಮ್ಮ ಮೈಲಿಗಲ್ಲನ್ನು ಸ್ಮರಣೀಯವಾಗಿಸಿದ್ರು. ತಂಡದ ಪರ ಗರಿಷ್ಠ ರನ್ ಸ್ಕೋರ್ ಆಗಿರುವ ಶಿಖರ್ ಐಪಿಎಲ್‌ನಲ್ಲಿ ದಾಖಲೆಗಳನ್ನ ಬರೆದ್ರು.

ಐಪಿಎಲ್‌ನಲ್ಲಿ 6,000 ರನ್‌ಗಳ 'ಶಿಖರ'ವೇರಿದ ಧವನ್

ಐಪಿಎಲ್‌ನಲ್ಲಿ 6,000 ರನ್‌ಗಳ 'ಶಿಖರ'ವೇರಿದ ಧವನ್

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಶಿಖರ್ ಧವನ್ ತನ್ನ ಸ್ಥಿರ ಪ್ರದರ್ಶನ ಮೂಲಕ ಗಮನಸೆಳೆದಿದ್ದು, ತನ್ನ 200ನೇ ಐಪಿಎಲ್‌ ಪಂದ್ಯದಲ್ಲಿ 6000 ಗಡಿ ಮುಟ್ಟಿದ ಸಾಧನೆ ಮಾಡಿದ್ದಾರೆ. ಅಜೇಯರಾಗಿ ಉಳಿದ ಪಂದ್ಯದಲ್ಲಿ ಶಿಖರ್ ಧವನ್ ಈ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.

ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 6 ಸಾವಿರ ರನ್ ಗಡಿ ಮುಟ್ಟಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ. ಕೊಹ್ಲಿ ನಂತರದಲ್ಲಿ ಭಾರತದ ಬ್ಯಾಟ್ಸ್‌ಮನ್ ಶಿಖರ್ ಧವನ್ ಈ ಸಾಧನೆ ಮಾಡಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿರುವ ಟಾಪ್ 5 ಬ್ಯಾಟ್ಸ್‌ಮನ್‌ಗಳ ಬಗ್ಗೆ ಈ ಕೆಳಗೆ ಕಾಣಬಹುದು.

IPL 2022: ಅಂಕಪಟ್ಟಿಯಲ್ಲಿ ಜಿಗಿದ ಪಂಜಾಬ್, 9ನೇ ಸ್ಥಾನದಲ್ಲೇ ಉಳಿದ CSK, ಆರೆಂಜ್ ಮತ್ತು ಪರ್ಪಲ್ ಕ್ಯಾಪ್‌

200ನೇ ಐಪಿಎಲ್ ಪಂದ್ಯದಲ್ಲಿ ದಾಖಲೆಯ ರನ್

200ನೇ ಐಪಿಎಲ್ ಪಂದ್ಯದಲ್ಲಿ ದಾಖಲೆಯ ರನ್

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ಗಳಿಸಿರುವ ಎರಡನೇ ಬ್ಯಾಟ್ಸ್‌ಮನ್ ಆಗಿರುವ ಶಿಖರ್ ಧವನ್ ತನ್ನ 200ನೇ ಪಂದ್ಯದಲ್ಲಿ ಯಾರೂ ಮಾಡದ ಸಾಧನೆ ಮಾಡಿದ್ದಾರೆ. ಐಪಿಎಲ್‌ನ 200ನೇ ಪಂದ್ಯದಲ್ಲಿ ಶಿಖರ್ ಧವನ್ ಎಲ್ಲರಿಗಿಂತ ಹೆಚ್ಚಿನ ರನ್ ಗಳಿಸಿದ್ದು, ಅಜೇಯರಾಗಿ ಉಳಿದಿದ್ದಾರೆ.

200ನೇ ಐಪಿಎಲ್ ಪಂದ್ಯದಲ್ಲಿ ಯಾರು ಹೆಚ್ಚು ರನ್‌ಗಳಿಸಿದ್ದಾರೆ ಎಂಬುದನ್ನ ಈ ಕೆಳಗೆ ಕಾಣಬಹುದು

ಶಿಖರ್ ಧವನ್ 88*

ರೋಹಿತ್ ಶರ್ಮಾ 68

ದಿನೇಶ್ ಕಾರ್ತಿಕ್ 40

ರಾಬಿನ್ ಉತ್ತಪ್ಪ 30

ಎಂಎಸ್ ಧೋನಿ 28

ವಿರಾಟ್‌ ಕೊಹ್ಲಿ 5

ಸುರೇಶ್‌ ರೈನಾ 2

ರವೀಂದ್ರ ಜಡೇಜಾ DNB

ಪೊಲ್ಲಾರ್ಡ್ ಗೆ ಕೃನಾಲ್ ಪಾಂಡ್ಯ ಕಿಸ್ ಮಾಡಿದ್ದೇ ಈಗ ದೊಡ್ಡ ಅಪರಾಧ;ಯಾಕೆ ಗೊತ್ತಾ? | Oneindia Kannada
ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಧವನ್ ದಾಖಲೆ

ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಧವನ್ ದಾಖಲೆ

ಟಿ20 ಕ್ರಿಕೆಟ್ ಲೋಕದಲ್ಲಿ (ಅಂತರಾಷ್ಟ್ರೀಯ, ಐಪಿಎಲ್, ದೇಶೀಯ) ಅತಿ ಹೆಚ್ಚು ರನ್ ಕಲೆಹಾಕಿರುವ ಮೂರನೇ ಭಾರತೀಯ ಬ್ಯಾಟರ್ ಆಗಿ ಶಿಖರ್ ಧವನ್ ಹೊರಹೊಮ್ಮಿದ್ದಾರೆ. ಚುಟುಕು ಫಾರ್ಮೆಟ್‌ನಲ್ಲಿ ಶಿಖರ್ ಧವನ್ 9000ಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ.

ವಿರಾಟ್ ಕೊಹ್ಲಿ 10,392 ರನ್

ರೋಹಿತ್ ಶರ್ಮಾ 10,048 ರನ್

ಶಿಖರ್ ಧವನ್ 9000+

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, April 26, 2022, 7:00 [IST]
Other articles published on Apr 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X