ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಸ್ನೈನ್‌ ನಿಯಮಬಾಹಿರ ಬೌಲಿಂಗ್ ಶೈಲಿ: ಸನ್ನೆ ಮಾಡಿ ಕೋಪ ವ್ಯಕ್ತಪಡಿಸಿದ ಮಾರ್ಕಸ್ ಸ್ಟೋಯ್ನಿಸ್

Mohammad Hasn

ಪಾಕಿಸ್ತಾನದ ವೇಗದ ಬೌಲರ್‌ ಮೊಹಮ್ಮದ್ ಹಸ್ನೈನ್‌ ಅನುಮಾನಸ್ಪದ ಬೌಲಿಂಗ್ ಶೈಲಿ ವಿರುದ್ಧ ಈಗಾಗಲೇ ಐಸಿಸಿ ಕಣ್ಣಿಟ್ಟಿದೆ. ಮೊಹಮ್ಮದ್ ಹಸ್ನೈನ್‌ ನಿಯಮಬಾಹಿರವಾಗಿ ಬೌಲಿಂಗ್ ಮಾಡುವುದನ್ನ ಉದ್ದೇಶಿಸಿ ಮಾರ್ಕಸ್ ಸ್ಟೋಯ್ನಿಸ್ ಸನ್ನೆ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ಆಗಸ್ಟ್ 14ರಂದು ನಡೆದ ಹಂಡ್ರೆಡ್‌ ಪಂದ್ಯದಲ್ಲಿ ಮೊಹಮ್ಮದ್ ಹಸ್ನೈನ್‌ ಬೌಲಿಂಗ್‌ನಲ್ಲಿ ಮಾರ್ಕಸ್ ಸ್ಟೋಯ್ನಿಸ್ ಔಟಾದ ಬಳಿಕ ಆತನ ಬೌಲಿಂಗ್ ಶೈಲಿಯನ್ನು ಬಿಂಬಿಸುವಂತೆ ಸನ್ನೆ ಮಾಡುವ ಮೂಲಕ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.

ಈಗಾಗಲೇ ಐಸಿಸಿಯ15c ಡಿಗ್ರಿ ನಿಯಮಬಾಹಿರ ಬೌಲಿಂಗ್‌ನಿಂದಾಗಿ ಬಿಗ್ ಬ್ಯಾಷ್‌ ಲೀಗ್‌ನಲ್ಲಿ ಟೀಕೆಗೆ ಒಳಗಾಗಿದ್ದ ಹಸ್ನೈನ್‌ ಬೌಲಿಂಗ್ ಕುರಿತಾಗಿ ಮತ್ತೆ ಚರ್ಚೆಗೆ ಕಾರಣವಾಗಿದೆ.

ಹಸ್ನೈನ್‌ ಬೌಲಿಂಗ್ ಶೈಲಿ ಕುರಿತು ಸ್ಟೋಯ್ನಿಸ್ ಆರೋಪ

ಬೌಲಿಂಗ್ ಆಕ್ಷನ್ ಕುರಿತಾದ ಆರೋಪ ಕೇಳಿ ಬಂದು ಕೆಲವು ತಿಂಗಳ ನಂತರ ಮೊಹಮ್ಮದ್ ಹಸ್ನೈನ್ ಹಿಂದಿರುಗಿದರು. ಪ್ರಸ್ತುತ ದಿ ಹಂಡ್ರೆಡ್ ಪಂದ್ಯಾವಳಿಯಲ್ಲಿ ಓವಲ್ ಇನ್ವಿಸಿಬಲ್ಸ್‌ಗಾಗಿ ಆಡುತ್ತಿದ್ದಾರೆ. ಸದರ್ನ್ ಬ್ರೇವ್ ವಿರುದ್ಧದ ಅವರ ಪಂದ್ಯದಲ್ಲಿ ಅವರು ಮಾರ್ಕಸ್ ಸ್ಟೊಯ್ನಿಸ್ ಅವರನ್ನು ಔಟ್‌ ಮಾಡಿದಾಗ , ಹಸ್ನೈನ್ ಬೌಲಿಂಗ್ ಕ್ರಿಯೆಯಲ್ಲಿ ಏನೋ ತಪ್ಪಿದೆ ಎಂಬಂತೆ ಸ್ಟೋಯ್ನಿಸ್ ಸನ್ನೆ ಮಾಡಿದ್ದಾರೆ.

ಪಾಕಿಸ್ತಾನದ ಯುವ ಬೌಲರ್ ಕುರಿತಾಗಿ ಸನ್ನೆ ಮಾಡಿದ ಮಾರ್ಕಸ್ ಸ್ಟೋಯ್ನಿಸ್ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ಹಾಗೂ ವಿರೋಧ ವ್ಯಕ್ತವಾಗಿದೆ.

ಪ್ರಪಂಚದಾದ್ಯಂತ ಕಾಡಿನಲ್ಲಿ 4,000 ಹುಲಿಗಳಿರಬಹುದು, ಆದ್ರೆ ಕೇವಲ ಒಬ್ಬ ರಾಹುಲ್ ದ್ರಾವಿಡ್: ರಾಸ್ ಟೇಲರ್

ಸ್ಟೋಯ್ನಿಸ್ ವಿರುದ್ಧ ಟೀಕಿಸಿದ ನೆಟ್ಟಿಗರು

ಮೊಹಮ್ಮದ್ ಹಸ್ನೇನ್ ಅವರಿಂದ ಔಟಾದ ನಂತರ ಮಾರ್ಕಸ್ ಸ್ಟೊಯ್ನಿಸ್ ಅವರಿಂದ ನಿರಾಶಾದಾಯಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೀನು ನಿನ್ನ ಆಟವಾಡು, ಕ್ರಿಕೆಟ್‌ಗೆ ಸಂಬಂಧಿಸಿದ ಅಧಿಕಾರಿಗಳು ತಮ್ಮ ಕೆಲಸ ಮಾಡಲು ಬಿಡು ಎಂದು ಅನೇಕ ನೆಟ್ಟಿಗರು ಕಿಡಿಕಾರಿದ್ದಾರೆ.

NZ vs WI: ನ್ಯೂಜಿಲೆಂಡ್ ವಿರುದ್ಧ ಅಂತಿಮ ಟಿ20 ಪಂದ್ಯ ಗೆದ್ದ ವೆಸ್ಟ್ ಇಂಡೀಸ್, ಕಿವೀಸ್‌ಗೆ ಸರಣಿ ಜಯ

ಹಸ್ನೈನ್ ಬೌಲಿಂಗ್ ಆಕ್ಷನ್ ಕುರಿತಾಗಿ ಮುಂದುವರಿದ ಅನುಮಾನ!

ಹಸ್ನೈನ್ ಬೌಲಿಂಗ್ ಆಕ್ಷನ್ ಕುರಿತಾಗಿ ಮುಂದುವರಿದ ಅನುಮಾನ!

ಇನ್ನು ಮೊಹಮ್ಮದ್ ಹಸ್ನೈನ್ ಬೌಲಿಂಗ್ ಆಕ್ಷನ್ ಕುರಿತಾಗಿಯೂ ಅನುಮಾನ ಮುಂದುವರಿದಿದ್ದು, ನೆಟ್ಟಿಗರು ಮಾರ್ಕಸ್ ಸ್ಟೋಯ್ನಿಸ್ ಸನ್ನೆ ಮಾಡಿದರಲ್ಲಿ ತಪ್ಪೇನಿಲ್ಲ ಎಂದು ಬೆಂಬಲಿಸಿದ್ದಾರೆ. ಐಸಿಸಿ ಈಗಾಗಲೇ ಆತನ ಬೌಲಿಂಗ್ ನಿಯಮಬಾಹಿರ ಎಂದು ಆಕ್ಷೇಪ ಮಾಡಿದೆ. ಹೀಗಿರುವಾಗ ಆತನ ಬೌಲಿಂಗ್‌ ಶೈಲಿಯಲ್ಲಿ ಹೆಚ್ಚು ಬದಲಾವಣೆ ಕಂಡುಬಂದಂತಿಲ್ಲ ಎಂದು ನೆಟ್ಟಿಗರು ಟೀಕಿಸಿದ್ದಾರೆ.

ಬೌಲಿಂಗ್ ಪರೀಕ್ಷೆಗೆ ಒಳಪಟ್ಟಿದ್ದ ಮೊಹಮ್ಮದ್ ಹಸ್ನೈನ್

ಬೌಲಿಂಗ್ ಪರೀಕ್ಷೆಗೆ ಒಳಪಟ್ಟಿದ್ದ ಮೊಹಮ್ಮದ್ ಹಸ್ನೈನ್

ಇದೇ ವರ್ಷ ಜನವರಿ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ದೇಶಿ ಕ್ರಿಕೆಟ್‌ ಟೂರ್ನಿಯಲ್ಲಿ ಮೊಹಮ್ಮದ್ ಹಸ್ನೈನ್‌ ಅನುಮಾನಾಸ್ಪದ ಬೌಲಿಂಗ್ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಲಾಹೋರ್‌ ಯೂನಿವರ್ಸಿಟಿ ಆಫ್‌ ಮ್ಯಾನೇಜ್‌ಮೆಂಟ್ ಸೈನ್ಸ್‌ನಲ್ಲಿ ಮೊಹಮ್ಮದ್ ಹಸ್ನೈನ್‌ ಅವರ ಬೌಲಿಂಗ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆ ವೇಳೆ ಮೊಹಮ್ಮದ್ ಹಸ್ನೈನ್‌ ಐಸಿಸಿಯ 15 ಡಿಗ್ರಿ ಮಿತಿಗಿಂತ ಜಾಸ್ತಿ ಮೊಣಕೈ ವಿಸ್ತರಣೆ ಮಾಡುತ್ತಿರುವುದು ಬೆಳಕಿಗೆ ಬಂದಿತು. ಐಸಿಸಿ ನಿಯಮ ಉಲ್ಲಂಘನೆ ಹಿನ್ನಲೆಯಲ್ಲಿ ಪಾಕ್ ವೇಗಿಗೆ ಬೌಲಿಂಗ್ ಮಾಡದಂತೆ ತಡೆ ಹೇರಲಾಗಿತ್ತು.

ಮೊಹಮ್ಮದ್ ಹಸ್ನೈನ್‌ ಅವರ ಗುಡ್‌ ಲೆಂಗ್ತ್‌, ಫುಲ್ ಲೆಂಗ್ತ್, ಸ್ಲೋ ಬೌನ್ಸರ್ ಹಾಗೂ ಬೌನ್ಸರ್ ಎಸೆತಗಳನ್ನು ಹಾಕುವಾಗ ಅವರು 15 ಡಿಗ್ರಿ ಮಿತಿಗಿಂತ ಜಾಸ್ತಿ ಮೊಣಕೈ ವಿಸ್ತರಣೆ ಮಾಡುತ್ತಿದ್ದರು. ಆದ್ರೆ ಇದ್ರಿಂದ ಸರಿಪಡಿಸಿಕೊಂಡು ಮತ್ತೆ ಕಣಕ್ಕಿಳಿದಿದ್ದ ಹಸ್ನೈನ್ ವಿರುದ್ಧ ಟೀಕೆ ಮುಂದುವರಿದಿದೆ. ಪಾಕ್‌ನ ವೇಗಿ ತನ್ನ ಬೌಲಿಂಗ್‌ ಶೈಲಿಯಲ್ಲಿ ಹೆಚ್ಚು ಬದಲಾವಣೆ ತಂದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

Story first published: Monday, August 15, 2022, 11:18 [IST]
Other articles published on Aug 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X