ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಜರ್ನಿ: ಅಡಿಲೇಡ್ ನ ಅಬ್ಬರದಿಂದ ಸಿಡ್ನಿ ಸೋಲಿನ ತನಕ

By Mahesh

ಸುಮಾರು ನಾಲ್ಕು ತಿಂಗಳ ಸುದೀರ್ಘ ಪ್ರವಾಸದ ನಂತರ ಟೀಂ ಇಂಡಿಯಾ ಸ್ವದೇಶಕ್ಕೆ ಮರಳಲು ಸಿದ್ಧವಾಗಿದೆ. ವಿಶ್ವಕಪ್ 2015 ಟೂರ್ನಿಯಲ್ಲಿ ಭಾರತದ ಅಭಿಯಾನ ಬುಧವಾರಕ್ಕೆ ಮುಕ್ತಾಯಗೊಂಡಿದೆ. ಅಡಿಲೇಡ್ ನಿಂದ ಅರಂಭವಾದ ಟೀಂ ಇಂಡಿಯಾದ ಗೆಲುವಿನ ಓಟ ಸಿಡ್ನಿಯ ಸೋಲಿನೊಂದಿಗೆ ಕೊನೆಗೊಂಡಿದೆ. ನಾಯಕ ಧೋನಿ ತಮ್ಮ ಸುದ್ದಿಗೋಷ್ಠಿಯಲ್ಲಿ ತಂಡದ ವೈಫಲ್ಯದ ವಿವರ ಬಿಚ್ಚಿಟ್ಟರು.

ಸತತ ಏಳು ಗೆಲುವುಗಳನ್ನು ಕಂಡ ಭಾರತವನ್ನು ಹೊಗಳುತ್ತಿದ್ದ ಮಂದಿ, ಆಸ್ಟ್ರೇಲಿಯಾ ವಿರುದ್ಧ 95 ರನ್ ಗಳಿಂದ ಟೀಂ ಇಂಡಿಯಾ ಸೋತು ಮಂಡಿಯೂರಿದಾಗ ತೆಗಳುವುದಕ್ಕೆ ಶುರು ಮಾಡಿದರು. [ನಿವೃತ್ತಿ ಬಗ್ಗೆ ಗುಟ್ಟು ರಟ್ಟು ಮಾಡಿದ ಧೋನಿ]

ಕೊನೆ ಓವರ್ ಮಾಡಿದ ಮೋಹಿತ್ ಶರ್ಮ, 1 ರನ್ ಹೊಡೆದು ಔಟಾದ ವಿರಾಟ್ ಕೊಹ್ಲಿ, ಸೂಪರ್ ಚೇಸರ್ ಧೋನಿ ಮೇಲೆ ಹೆಚ್ಚಿನ ಕೋಪ ತಾಪಗಳು ಕಂಡು ಬಂದಿತ್ತು. [ಸ್ಪೆಷಲ್ ಸೆಂಚುರಿ ಬಾರಿಸಿದ ಧೋನಿ]

ಅದರೆ, ಧೋನಿ ತಂಡದ ಸಾಧನೆಯನ್ನು ಕಡೆಗಣಿಸುವಂತಿಲ್ಲ. ಪಾಕಿಸ್ತಾನ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾದಂಥ ಉತ್ತಮ ತಂಡಗಳ ಮೇಲೆ ಗೆಲುವು ಸಾಧಿಸಿದ್ದು ಧೋನಿ ನೇತೃತ್ವದ ಯುವ ತಂಡ ಎಂಬುದನ್ನು ಮರೆಯಬಾರದು. [ಧೋನಿ ಮುರಿದಿರುವ ದಾಖಲೆಗಳ ಸಮಗ್ರ ಪಟ್ಟಿ]

ಅಡಿಲೇಡ್ ನಲ್ಲಿ ಬದ್ಧವೈರಿಗಳ ವಿರುದ್ಧ ಅದ್ಭುತ ಜಯದ ಮೂಲಕ ಶುರುವಾದ ವಿಶ್ವಕಪ್ ಜರ್ನಿ ಸೆಮಿಫೈನಲ್ ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೂಲಕ ಮುಗಿದಿದೆ. ಟೀಂ ಇಂಡಿಯಾದ ವಿಶ್ವಕಪ್ ಜರ್ನಿ ಚಿತ್ರ ಸಂಪುಟ ಇಲ್ಲಿದೆ...

ಪಂದ್ಯ-1 ಪಾಕಿಸ್ತಾನ ವಿರುದ್ಧ, ಅಡಿಲೇಡ್

ಪಂದ್ಯ-1 ಪಾಕಿಸ್ತಾನ ವಿರುದ್ಧ, ಅಡಿಲೇಡ್

ವಿರಾಟ್ ಕೊಹ್ಲಿ ಅಬ್ಬರದ ಶತಕ, ಭಾರತಕ್ಕೆ ಅದ್ಭುತ ಜಯ.

ವಿರಾಟ್ ಕೊಹ್ಲಿ ಧವನ್ ಜೋಡಿ

ವಿರಾಟ್ ಕೊಹ್ಲಿ ಧವನ್ ಜೋಡಿ

ವಿರಾಟ್ ಕೊಹ್ಲಿ ಧವನ್ ಜೋಡಿ ಮಾಡಿದ ಮೋಡಿಗೆ ಶರಣಾದ ಪಾಕಿಸ್ತಾನ. ಕೊಹ್ಲಿ ಶತಕ, ಧವನ್ ಗೆ ಅರ್ಧಶತಕ.

ಮೊದಲ ಪಂದ್ಯದಲ್ಲೇ ವಿಜೃಂಭಿಸಿದ ಕೊಹ್ಲಿ

ಮೊದಲ ಪಂದ್ಯದಲ್ಲೇ ವಿಜೃಂಭಿಸಿದ ಕೊಹ್ಲಿ

ಮೊದಲ ಪಂದ್ಯದಲ್ಲೇ ವಿಜೃಂಭಿಸಿದ ಕೊಹ್ಲಿ ಶತಕ ಬಾರಿಸಿದ ಸಂಭ್ರಮದ ಕ್ಷಣ.. ಇನ್ನೊಂದು ತುದಿಯಲ್ಲಿ ಸುರೇಶ್ ರೈನಾರನ್ನು ಕಾಣಬಹುದು.

ಫೀಲ್ಡಿಂಗ್ ನಲ್ಲೂ ಕೊಹ್ಲಿ ಕಮಾಲ್

ಫೀಲ್ಡಿಂಗ್ ನಲ್ಲೂ ಕೊಹ್ಲಿ ಕಮಾಲ್

ಪಾಕಿಸ್ತಾನಿ ಬ್ಯಾಟ್ಸ್ ಮನ್ ನೀಡಿದ ಕ್ಯಾಚ್ ಹಿಡಿದ ವಿರಾಟ್ ಕೊಹ್ಲಿ ಸಂಭ್ರಮಿಸಿದ್ದು ಹೀಗೆ

ರೋಹಿತ್ ಶರ್ಮ ಸಂಭ್ರಮಾಚರಣೆ

ರೋಹಿತ್ ಶರ್ಮ ಸಂಭ್ರಮಾಚರಣೆ

ಒಂದೊಂದು ಪಾಕಿಸ್ತಾನಿ ಆಟಗಾರ ಔಟ್ ಆಗುತ್ತಿದ್ದಂತೆ ಸಂಭ್ರಮ ಹೆಚ್ಚಾಯಿತು. ರೋಹಿತ್ ಶರ್ಮ ಸಂಭ್ರಮಾಚರಣೆ ಹೀಗಿತ್ತು...

ಗೆಲುವಿನ ಓಟ ಆರಂಭ, ಸಂಭ್ರಮದಿಂದ ಪೆವಲಿಯನ್ ಗೆ

ಗೆಲುವಿನ ಓಟ ಆರಂಭ, ಸಂಭ್ರಮದಿಂದ ಪೆವಲಿಯನ್ ಗೆ

ಪಾಕಿಸ್ತಾನ ವಿರುದ್ಧ 76ರನ್ ಗಳ ಜಯ ಸಾಧಿಸಿ ಗೆಲುವಿನ ಓಟ ಆರಂಭಿಸಿದ ಟೀಂ ಇಂಡಿಯಾ ಆಟಗಾರರು ಸಂಭ್ರಮದಿಂದ ಪೆವಲಿಯನ್ ಗೆ ತೆರಳುತ್ತಿರುವ ಚಿತ್ರ.

ಪಂದ್ಯ 2 : ದಕ್ಷಿಣ ಆಫ್ರಿಕಾ, ಮೆಲ್ಬೋರ್ನ್

ಪಂದ್ಯ 2 : ದಕ್ಷಿಣ ಆಫ್ರಿಕಾ, ಮೆಲ್ಬೋರ್ನ್

ಶಿಖರ್ ಧವನ್ ಪರಾಕ್ರಮ, ಎಂಸಿಜಿಯಲ್ಲಿ ಶತಕ ದಾಖಲು.

ದಕ್ಷಿಣ ಆಫ್ರಿಕಾ ವಿಕೆಟ್ ಪತನದ ಖುಷಿ

ದಕ್ಷಿಣ ಆಫ್ರಿಕಾ ವಿಕೆಟ್ ಪತನದ ಖುಷಿ

ದಕ್ಷಿಣ ಆಫ್ರಿಕಾ ವಿಕೆಟ್ ಪತನದ ಖುಷಿಯಲ್ಲಿ ಟೀಂ ಇಂಡಿಯಾ

ದಕ್ಷಿಣ ಆಫ್ರಿಕಾ ವಿರುದ್ಧ ಸುಲಭ ಜಯ

ದಕ್ಷಿಣ ಆಫ್ರಿಕಾ ವಿರುದ್ಧ ಸುಲಭ ಜಯ

ದಕ್ಷಿಣ ಆಫ್ರಿಕಾ ವಿರುದ್ಧ 130 ರನ್ ಗಳ ಸುಲಭ ಜಯ ದಾಖಲಿಸಿದ ಟೀಂ ಇಂಡಿಯಾ.

ಪಂದ್ಯ 3 ಯುಎಇ, ಪರ್ತ್

ಪಂದ್ಯ 3 ಯುಎಇ, ಪರ್ತ್

ರೋಹಿತ್ ಶರ್ಮ ವಾಕಾ ಮೈದಾನದಲ್ಲಿ ಅರ್ಧಶತಕ ಸಿಡಿಸಿದ ಸಂಭ್ರಮ.

ಕೊಹ್ಲಿ ಹಾಗೂ ರೋಹಿತ್ ಉತ್ತಮ ಜೊತೆಯಾಟ

ಕೊಹ್ಲಿ ಹಾಗೂ ರೋಹಿತ್ ಉತ್ತಮ ಜೊತೆಯಾಟ

ಕೊಹ್ಲಿ ಹಾಗೂ ರೋಹಿತ್ ಉತ್ತಮ ಜೊತೆಯಾಟ ಭಾರತಕ್ಕೆ ಆಸರೆಯಾಯಿತು.

ಶಿಖರ್ ಧವನ್ ಕಳಪೆ ಆಟ ಪ್ರದರ್ಶನ

ಶಿಖರ್ ಧವನ್ ಕಳಪೆ ಆಟ ಪ್ರದರ್ಶನ

ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಶಿಖರ್ ಧವನ್ ಕಳಪೆ ಆಟ ಪ್ರದರ್ಶಿಸಿ 14 ರನ್ ಗಳಿಸಿ ಔಟ್.

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಉತ್ತಮ ಜೊತೆಯಾಟ

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಉತ್ತಮ ಜೊತೆಯಾಟ

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಉತ್ತಮ ಜೊತೆಯಾಟ ಪ್ರದರ್ಶಿಸಿ ಎರಡನೇ ವಿಕೆಟ್ ಗೆ 71 ರನ್ ಕಲೆ ಹಾಕಿದರು.

ಆರ್ ಅಶ್ವಿನ್ ಪಂದ್ಯಶ್ರೇಷ್ಠ ಪ್ರದರ್ಶನ

ಆರ್ ಅಶ್ವಿನ್ ಪಂದ್ಯಶ್ರೇಷ್ಠ ಪ್ರದರ್ಶನ

ಆರ್ ಅಶ್ವಿನ್ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿ ನಾಲ್ಕು ವಿಕೆಟ್ ಪಡೆದರು.

ನಾಲ್ಕನೇ ಪಂದ್ಯ-ವೆಸ್ಟ್ ಇಂಡೀಸ್ , ಪರ್ತ್

ನಾಲ್ಕನೇ ಪಂದ್ಯ-ವೆಸ್ಟ್ ಇಂಡೀಸ್ , ಪರ್ತ್

ಮಹಮ್ಮದ್ ಶಮಿ ವಿಕೆಟ್ ಕಿತ್ತ ಸಂಭ್ರಮ. ಈ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿದ ಶಮಿ.

ವಾಕಾ ಮೈದಾನದಲ್ಲಿ ತ್ರಿವರ್ಣ ಧ್ವಜದ ರಂಗು

ವಾಕಾ ಮೈದಾನದಲ್ಲಿ ತ್ರಿವರ್ಣ ಧ್ವಜದ ರಂಗು

ವಾಕಾ ಮೈದಾನದಲ್ಲಿ ತ್ರಿವರ್ಣ ಧ್ವಜದ ರಂಗು ಎದ್ದು ಕಾಣುತ್ತಿತ್ತು. ಟೀಂ ಇಂಡಿಯಾ ಬೆಂಬಲರಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಅಶ್ವಿನ್ ಹಾಗೂ ನಾಯಕ ಧೋನಿ ಜೊತೆಯಾಟ

ಅಶ್ವಿನ್ ಹಾಗೂ ನಾಯಕ ಧೋನಿ ಜೊತೆಯಾಟ

ಅಶ್ವಿನ್ ಹಾಗೂ ನಾಯಕ ಧೋನಿ ಜೊತೆಯಾಟದ ಚಿತ್ರ

ಧೋನಿ ಬಿರುಸಿನ ಬ್ಯಾಟಿಂಗ್

ಧೋನಿ ಬಿರುಸಿನ ಬ್ಯಾಟಿಂಗ್

ಧೋನಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ 45 ರನ್ ಗಳಿಸಿ ಅಜೇಯರಾಗಿ ಉಳಿದರು.

ಭಾರತಕ್ಕೆ ಸತತ ನಾಲ್ಕು ಜಯ ತಂದಿತ್ತ ಧೋನಿ

ಭಾರತಕ್ಕೆ ಸತತ ನಾಲ್ಕು ಜಯ ತಂದಿತ್ತ ಧೋನಿ

ಭಾರತಕ್ಕೆ ಸತತ ನಾಲ್ಕು ಜಯ ತಂದಿತ್ತ ನಾಯಕ ಧೋನಿ

ಪಂದ್ಯ ಐದು: ಐರ್ಲೆಂಡ್, ಹ್ಯಾಮಿಲ್ಟನ್

ಪಂದ್ಯ ಐದು: ಐರ್ಲೆಂಡ್, ಹ್ಯಾಮಿಲ್ಟನ್

ಐರ್ಲೆಂಡ್ ಬ್ಯಾಟ್ಸ್ ಮನ್ ಔಟಾದ ಮೇಲೆ ಸಂಭ್ರಮದಲ್ಲಿ ಟೀಂ ಇಂಡಿಯಾ ಅಟಗಾರರು.

ಶಿಖರ್ ಧವನ್ ಮತ್ತೊಂದು ಶತಕ

ಶಿಖರ್ ಧವನ್ ಮತ್ತೊಂದು ಶತಕ

ಶಿಖರ್ ಧವನ್ ಮತ್ತೊಂದು ಶತಕ ಸಿಡಿಸಿದರು. ವಿಶ್ವಕಪ್ ನಲ್ಲಿ ಎರಡನೇ ಶತಕ ಇದಾಗಿದೆ.

ಐರ್ಲೆಂಡ್ ವಿರುದ್ಧ ಭಾರತಕ್ಕೆ ಸುಲಭ ಜಯ

ಐರ್ಲೆಂಡ್ ವಿರುದ್ಧ ಭಾರತಕ್ಕೆ ಸುಲಭ ಜಯ

ವಿರಾಟ್ ಕೊಹ್ಲಿ ಅಜೇಯ 44 ರನ್ ಅಜಿಂಕ್ಯ ರಹಾನೆ 33 ರನ್ ಗಳಿಸಿ ಭಾರತಕ್ಕೆ 8 ವಿಕೆಟ್ ಜಯ ತಂದು ಕೊಟ್ಟರು.

ಆರನೇ ಪಂದ್ಯ, ಜಿಂಬಾಬ್ವೆ, ಆಕ್ಲೆಂಡ್

ಆರನೇ ಪಂದ್ಯ, ಜಿಂಬಾಬ್ವೆ, ಆಕ್ಲೆಂಡ್

ಜಿಂಬಾಬ್ವೆ ಬ್ಯಾಟ್ಸ್ ಮನ್ ಔಟ್ ಮಾಡಿದ ಖುಷಿಯಲ್ಲಿ ಟೀಂ ಇಂಡಿಯಾ.

ಶತಕ ಸಿಡಿಸಿದ ಸುರೇಶ್ ರೈನಾ

ಶತಕ ಸಿಡಿಸಿದ ಸುರೇಶ್ ರೈನಾ

ಶತಕ ಸಿಡಿಸಿದ ಸುರೇಶ್ ರೈನಾ ಸಂಭ್ರಮಿಸಿದ್ದು ಹೀಗೆ...

ಧೋನಿ ಮತ್ತೆ ಗೆಲುವಿನ ರನ್ ಹೊಡೆದ್ರು

ಧೋನಿ ಮತ್ತೆ ಗೆಲುವಿನ ರನ್ ಹೊಡೆದ್ರು

85 ರನ್ ಗಳಿಸಿ ಅಜೇಯವಾಗಿ ಉಳಿದ ನಾಯಕ ಧೋನಿ ಸಿಕ್ಸ್ ಎತ್ತಿ ಜಯ ತಂದು ಕೊಟ್ಟರು.

7ನೇ ಪಂದ್ಯ ಕ್ವಾರ್ಟರ್ ಫೈನಲ್ ಬಾಂಗ್ಲಾ ವಿರುದ್ಧ

7ನೇ ಪಂದ್ಯ ಕ್ವಾರ್ಟರ್ ಫೈನಲ್ ಬಾಂಗ್ಲಾ ವಿರುದ್ಧ

7ನೇ ಪಂದ್ಯ ಕ್ವಾರ್ಟರ್ ಫೈನಲ್ ಬಾಂಗ್ಲಾದೇಶದ ವಿರುದ್ಧ ಶತಕ ಸಿಡಿಸಿದ ಸಂಭ್ರಮದಲ್ಲಿ ಗಗನಕ್ಕೆ ಹಾರಿದ ರೋಹಿತ್ ಶರ್ಮ.

ವಿಕೆಟ್ ಬಿದ್ದ ಕ್ಷಣ ಧೋನಿ ಸಂಭ್ರಮಿಸಿದ್ದು ಹೀಗೆ

ವಿಕೆಟ್ ಬಿದ್ದ ಕ್ಷಣ ಧೋನಿ ಸಂಭ್ರಮಿಸಿದ್ದು ಹೀಗೆ

ಬಾಂಗ್ಲಾದೇಶ ಬ್ಯಾಟ್ಸ್ ಮನ್ ವಿಕೆಟ್ ಬಿದ್ದ ಕ್ಷಣ ಧೋನಿ ಸಂಭ್ರಮಿಸಿದ್ದು ಹೀಗೆ

ಹೊಸ ದಾಖಲೆ ಬರೆದ ಟೀಂ ಇಂಡಿಯಾ

ಹೊಸ ದಾಖಲೆ ಬರೆದ ಟೀಂ ಇಂಡಿಯಾ

ಏಳಕ್ಕೆ ಏಳು ಪಂದ್ಯಗಳನ್ನು ಗೆದ್ದ ಟೀಂ ಇಂಡಿಯಾ. ಬಾಂಗ್ಲಾ ವಿರುದ್ಧ 109 ರನ್ ಗಳ ಅಂತರದ ಜಯ ದಾಖಲಿಸಿದ ಭಾರತ.

ಸೆಮಿಫೈನಲ್-ಆಸ್ಟ್ರೇಲಿಯಾ, ಸಿಡ್ನಿ

ಸೆಮಿಫೈನಲ್-ಆಸ್ಟ್ರೇಲಿಯಾ, ಸಿಡ್ನಿ

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ ಫಿಂಚ್ ಹಾಗೂ ಸ್ಮಿತ್ ಜೊತೆಯಾಟದ ಲಾಭ ಪಡೆದುಕೊಂಡಿತು.

ಸಿಡ್ನಿಯಲ್ಲಿ ಸ್ಟೀವನ್ ಸ್ಮಿತ್ ಶತಕ ಸಂಭ್ರಮ

ಸಿಡ್ನಿಯಲ್ಲಿ ಸ್ಟೀವನ್ ಸ್ಮಿತ್ ಶತಕ ಸಂಭ್ರಮ

ಸಿಡ್ನಿಯಲ್ಲಿ ಸ್ಟೀವನ್ ಸ್ಮಿತ್ ಶತಕ ಸಂಭ್ರಮ..ಗೆಲುವಿಗೆ ಆಧಾರವಾದ ಸ್ಮಿತ್ ಶತಕ.

ಧೋನಿ ಅತ್ಯಧಿಕ ರನ್ ಹೊಡೆದ್ರು ಪ್ರಯೋಜನವಿಲ್ಲ

ಧೋನಿ ಅತ್ಯಧಿಕ ರನ್ ಹೊಡೆದ್ರು ಪ್ರಯೋಜನವಿಲ್ಲ

ನಾಯಕ ಧೋನಿ 65 ರನ್ ಗಳಿಸಿದರೂ 329 ರನ್ ಚೇಸ್ ಮಾಡಲು ಟೀಂ ಇಂಡಿಯಾಕ್ಕೆ ಆಗಲಿಲ್ಲ.

ಪಂದ್ಯ ನಂತರದ ಸುದ್ದಿಗೋಷ್ಠಿಯಲ್ಲಿ ಧೋನಿ

ಪಂದ್ಯ ನಂತರದ ಸುದ್ದಿಗೋಷ್ಠಿಯಲ್ಲಿ ಧೋನಿ

ಪಂದ್ಯ ನಂತರದ ಸುದ್ದಿಗೋಷ್ಠಿಯಲ್ಲಿ ಧೋನಿ ಟೂರ್ನಿಯ ಸಾಧನೆ ಬಗ್ಗೆ ವಿವರಣೆ ನೀಡಿದರು.

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X