ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ತನ್ನದೇ ದಾಖಲೆ ಮುರಿದ ಉಮ್ರಾನ್ ಮಲ್ಲಿಕ್, ಸೀಸನ್‌ನ ಅತಿ ವೇಗದ ಎಸೆತ!

Umran Malik

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ವೇಗದ ಬೌಲರ್‌ ಉಮ್ರಾನ್ ಮಲ್ಲಿಕ್‌ ಪ್ರಸಕ್ತ ಸೀಸನ್‌ನಲ್ಲಿ ಅತ್ಯಂತ ವೇಗದ ಬೌಲಿಂಗ್ ಮಾಡುವ ಮೂಲಕ ತನ್ನದೇ ದಾಖಲೆ ಮುರಿದು ಮತ್ತೊಂದು ಹೊಸ ದಾಖಲೆ ಬರೆದಿದ್ದಾರೆ.

ಭಾರತದ ಅತ್ಯಂತ ವೇಗದ ಬೌಲರ್ ಆಗಿರುವ ಉಮ್ರಾನ್ ಮಲ್ಲಿಕ್‌, ಗುಜರಾತ್ ಟೈಟನ್ಸ್ ವಿರುದ್ಧ ತಾನು ಎಸೆದಿದ್ದ ವೇಗದ ದಾಖಲೆಯನ್ನ ಮುರಿದು ಐಪಿಎಲ್ ಇತಿಹಾಸದ ವೇಗದ ಎಸೆತ ಹಾಕಿದ್ದಾರೆ. ಒಟ್ಟಾರೆ ಐಪಿಎಲ್ ಇತಿಹಾಸದಲ್ಲಿ ಇದು ಎರಡನೇ ಅತಿ ವೇಗದ ಎಸೆತವಾಗಿದೆ.

157kmph ವೇಗದಲ್ಲಿ ಬೌಲಿಂಗ್ ಮಾಡಿದ ಉಮ್ರಾನ್ ಮಲ್ಲಿಕ್

157kmph ವೇಗದಲ್ಲಿ ಬೌಲಿಂಗ್ ಮಾಡಿದ ಉಮ್ರಾನ್ ಮಲ್ಲಿಕ್

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ 20ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಉಮ್ರಾನ್ ಮಲ್ಲಿಕ್ ಎಸೆತವನ್ನ ರೊವ್ಮನ್ ಪೊವೆಲ್ ಬೌಂಡರಿಗಟ್ಟಿದರು. ಇದು ಅವರ ಅಂತಿಮ ಓವರ್‌ನ ನಾಲ್ಕನೇ ಎಸೆತವಗಿದ್ದು, 157kmph ಮೂಲಕ ಸೀಸನ್‌ನ ಅತಿ ವೇಗದ ಬೌಲ್ ಮಾಡಿದ್ರು.

4 ಓವರ್ ಬೌಲಿಂಗ್‌ ಮಾಡಿ ಯಾವುದೇ ವಿಕೆಟ್ ಪಡೆಯದ ಉಮ್ರಾನ್ ಮಲ್ಲಿಕ್ ದುಬಾರಿ ಬೌಲರ್ ಆಗಿದ್ದು, 52ರನ್‌ಗಳನ್ನ ನೀಡಿದ್ರು. ಅದ್ರಲ್ಲೂ ಕೊನೆಯ ಓವರ್‌ನಲ್ಲಿ 1 ಸಿಕ್ಸರ್‌, 3 ಬೌಂಡರಿ ಜೊತೆಗೆ 19 ರನ್‌ ಬಿಟ್ಟುಕೊಟ್ಟರು.

ನಮ್ಮೂರ ಪ್ರತಿಭೆ: ಕುಂದಾಪುರದ ಬಲಭೀಮ ವಿಶ್ವನಾಥ್‌ ಭಾಸ್ಕರ್ ಗಾಣಿಗ

ಐಪಿಎಲ್ 2022ರ ವೇಗದ ಎಸೆತಗಳು

ಐಪಿಎಲ್ 2022ರ ವೇಗದ ಎಸೆತಗಳು

ಪ್ರಸಕ್ತ ಐಪಿಎಲ್ ಸೀಸನ್‌ನಲ್ಲಿ ಅತ್ಯಂತ ವೇಗವಾದ ಎಸೆತಗಳನ್ನು ಮಾಡಿ ಬೌಲರ್‌ಗಳ ಪಟ್ಟಿಯಲ್ಲಿ ಟಾಪ್ 8ರಲ್ಲಿ ಉಮ್ರಾನ್‌ ಮಲ್ಲಿಕ್ ಅಗ್ರಸ್ಥಾನ ಅಷ್ಟೇ ಅಲ್ಲದೆ ಆರು ಸ್ಥಾನಗಳನ್ನ ಪಡೆದಿದ್ದಾರೆ. ಆ ಕುರಿತು ಮಾಹಿತಿಯನ್ನ ಈ ಕೆಳಗೆ ಕಾಣಬಹುದು.

157.00- ಉಮ್ರಾನ್ ಮಲಿಕ್
154.00 - ಉಮ್ರಾನ್ ಮಲಿಕ್
153.90 - ಲ್ಯುಕಿ ಫರ್ಗುಸನ್
153.30 - ಉಮ್ರಾನ್ ಮಲಿಕ್
153.10 - ಉಮ್ರಾನ್ ಮಲಿಕ್
152.8 - ಉಮ್ರಾನ್ ಮಲಿಕ್
152.60 - ಲ್ಯುಕಿ ಫರ್ಗುಸನ್
152.60 - ಉಮ್ರಾನ್ ಮಲಿಕ್

ಟಿ20 ವಿಶ್ವಕಪ್‌ನಿಂದ ಹಿಂದೆ ಸರಿಯಬೇಕಾ ಕೊಹ್ಲಿ, ರೋಹಿತ್?: ದೊಡ್ಡ ಗಣೇಶ್ ಹೇಳಿದ್ದಿಷ್ಟು!

ಐಪಿಎಲ್‌ನ ಅತ್ಯಂತ ವೇಗದ ಬೌಲಿಂಗ್ ಯಾರ ಹೆಸರಲ್ಲಿದೆ?

ಐಪಿಎಲ್‌ನ ಅತ್ಯಂತ ವೇಗದ ಬೌಲಿಂಗ್ ಯಾರ ಹೆಸರಲ್ಲಿದೆ?

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲಿಂಗ್ ಮಾಡಿದ ಸಾಧನೆ ಆಸ್ಟ್ರೇಲಿಯಾದ ಶಾನ್ ಟೈಟ್ ಹೆಸರಿನಲ್ಲಿದೆ. ರಾಜಸ್ತಾನ್ ರಾಯಲ್ಸ್ ಪರ ಆಡಿದ್ದ ಶಾನ್ ಟೈಟ್‌ 157.71kmph ವೇಗದಲ್ಲಿ ಬೌಲಿಂಗ್ ಮಾಡಿದ್ದು, ಇಲ್ಲಿಯವರೆಗಿನ ದಾಖಲೆಯಾಗಿದೆ. ಇವರ ನಂತರದ ಸ್ಥಾನವನ್ನ ಇದೀಗ ಭಾರತೀಯ ಉಮ್ರಾನ್ ಮಲ್ಲಿಕ್ ಪಡೆದಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ.

ಶಾನ್ ಟೈಟ್ : 157.71 kmph ರಾಜಸ್ಥಾನ್ ರಾಯಲ್ಸ್
ಉಮ್ರಾನ್ ಮಲಿಕ್: 157.00kmph ಸನ್‌ರೈಸರ್ಸ್ ಹೈದ್ರಾಬಾದ್
ಎನ್ರಿಕ್ ನಾರ್ಟ್ಜೆ: 156.22 kmph ಡೆಲ್ಲಿ ಕ್ಯಾಪಿಟಲ್ಸ್‌
ಡೇಲ್ ಸ್ಟೇಯ್ನ್‌: 154.40 kmph ಡೆಕ್ಕನ್ ಚಾರ್ಜರ್ಸ್
ಕಗಿಸೊ ರಬಾಡ: 154.23 kmph ಡೆಲ್ಲಿ ಕ್ಯಾಪಿಟಲ್ಸ್
ಉಮ್ರಾನ್ ಮಲಿಕ್: 154.00 kmph ಸನ್‌ರೈಸರ್ಸ್ ಹೈದ್ರಾಬಾದ್
ಲ್ಯುಕಿ ಫರ್ಗುಸನ್: 153.90 kmph ಗುಜರಾತ್ ಟೈಟಾನ್ಸ್

Story first published: Friday, May 6, 2022, 11:32 [IST]
Other articles published on May 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X