ಟಿಮ್ ಡೇವಿಡ್‌ ಆಸ್ಟ್ರೇಲಿಯಾಗೆ ವಿಶ್ವಕಪ್ ಗೆದ್ದುಕೊಡಬಲ್ಲ ಫಿನಿಷರ್: ರಿಕಿ ಪಾಂಟಿಂಗ್‌ ಭವಿಷ್ಯ

ಹಾಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಗುರುವಾರ ಟಿ20 ವಿಶ್ವಕಪ್ ತಂಡವನ್ನು ಪ್ರಕಟಿಸಿದೆ. 2021 ರ ವಿಶ್ವಕಪ್ ಅನ್ನು ಆಸ್ಟ್ರೇಲಿಯಾ ಅದ್ಭುತ ರೀತಿಯಲ್ಲಿ ಗೆದ್ದುಕೊಂಡಿತು. ಆಶ್ಚರ್ಯ ಏನಂದ್ರೆ ಈ ವಿಶ್ವಕಪ್ ವಿಜೇತ ತಂಡದಲ್ಲಿ ಕೇವಲ ಒಂದು ಬದಲಾವಣೆಯನ್ನು ಮಾಡಿದ್ದಾರೆ. ಲೆಗ್ ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್ ಬದಲಿಗೆ ಐಪಿಎಲ್‌ನಲ್ಲಿ ಅಮೋಘವಾಗಿ ಆಟವಾಡಿದ ಸಿಂಗಾಪುರ ಮೂಲದ ಹಿಟ್ಟರ್ ಟಿಮ್ ಡೇವಿಡ್ ಅವರನ್ನು ಆಯ್ಕೆ ಮಾಡಿದ್ದಾರೆ.

ಸಿಂಗಾಪುರದಲ್ಲಿ ಜನಿಸಿದ ಡೇವಿಡ್ ಎರಡು ವರ್ಷಗಳಿಂದ ವಿಶ್ವದ ಅತ್ಯುತ್ತಮ ಫಿನಿಶರ್‌ಗಳಲ್ಲಿ ಒಬ್ಬರಾಗಿ ವಿಶ್ವ ಕ್ರಿಕೆಟ್ ಮನ್ನಣೆಯನ್ನು ಗಳಿಸುತ್ತಿದ್ದಾರೆ. ಪಾರ್ಕ್‌ನಿಂದ ಚೆಂಡನ್ನು ದೂರಕ್ಕೆ ಅಟ್ಟುವ , ಮೈದಾನದಾದ್ಯಂತ ಹೊಡೆಯುವ ಸಾಮರ್ಥ್ಯವುಳ್ಳ ಡೇವಿಡ್ ಅವರ ಅಪ್ರತಿಮ ಸಾಮರ್ಥ್ಯವು ಅವರನ್ನು ವಿಶ್ವ ಕ್ರಿಕೆಟ್‌ನಲ್ಲಿ ಹೆಚ್ಚು ಬೇಡಿಕೆಯಿರುವ ಆಟಗಾರರನ್ನಾಗಿ ಮಾಡಿದೆ.

ಟಿಮ್ ಡೇವಿಡ್‌ ಟಿ20 ವಿಶ್ವಕಪ್‌ನ ಪ್ರಮುಖ ಸ್ಟಾರ್ ಆಗಬಹುದು!

ಟಿಮ್ ಡೇವಿಡ್‌ ಟಿ20 ವಿಶ್ವಕಪ್‌ನ ಪ್ರಮುಖ ಸ್ಟಾರ್ ಆಗಬಹುದು!

ಟಿಮ್ ಡೇವಿಡ್ ಆಸ್ಟ್ರೇಲಿಯಾದ ತಂಡದಲ್ಲಿ ಪ್ರಮುಖ ಆಟಗಾರನಾಗಬಹುದು ಮತ್ತು ಈ ವರ್ಷದ ನಂತರ ಮುಂಬರುವ ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆಲ್ಲಲು ಅವರಿಗೆ ಸಹಾಯ ಮಾಡಬಹುದು ಎಂದು ಮಾಜಿ ಆಸ್ಟ್ರೇಲಿಯದ ಮಾಜಿ ನಾಯಕ ಭವಿಷ್ಯ ನುಡಿದಿದ್ದಾರೆ. 26 ವರ್ಷದ ಆಲ್‌ರೌಂಡರ್ ಸಿಂಗಾಪುರ್ ದೇಶೀಯ ಕ್ರಿಕೆಟ್‌ನಾದ್ಯಂತ ಹಲವಾರು ಪ್ರಮುಖ ವೈಯಕ್ತಿಕ ಪ್ರದರ್ಶನಗಳ ಹಿನ್ನಲೆಯಲ್ಲಿ ತಂಡಕ್ಕೆ ಫಿನಿಷರ್ ಆಗಿ ಹೊರಹೊಮ್ಮಿದ್ದಾರೆ.

"ನಾನು ಅವರನ್ನು (ಟಿಮ್ ಡೇವಿಡ್) ತಂಡದಲ್ಲಿ ಹೊಂದಲು ಬಯಸುತ್ತೇನೆ. ಕಳೆದೆರಡು ವರ್ಷಗಳಿಂದ ಅವರು ಸುಧಾರಿಸಿದ್ದಾರೆ, ಅವರು ಆಸ್ಟ್ರೇಲಿಯನ್ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿಕೊಡಬಲ್ಲ ಫಿನಿಶಿಂಗ್ ರೀತಿಯ ಪಾತ್ರದಲ್ಲಿ ಆಡಬಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಐಸಿಸಿ ರಿವ್ಯೂನ ಇತ್ತೀಚಿನ ಹೇಳಿಕೆಯಲ್ಲಿ ಪಾಂಟಿಂಗ್ ಹೇಳಿದ್ದಾರೆ.

''ಎರಡು ವರ್ಷಗಳ ಹಿಂದೆ ಬಿಬಿಎಲ್‌ನಲ್ಲಿ ಅವಕಾಶಕ್ಕಾಗಿ ಹೆಣಗಾಡುತ್ತಿದ್ದರು. ಅವರು ಪರ್ತ್‌ ಸ್ಕಾಚರ್ಸ್‌ನಲ್ಲಿ ಅವಕಾಶ ಸಿಗದೆ ಕಾದಿದ್ದರು. ನಂತರ ಹೊಬಾರ್ಟ್‌ ಹರಿಕೇನ್ಸ್‌ಗೆ ತೆರಳಿದರು. ಅವರು ಅಲ್ಲಿ ನಿಜವಾಗಿಯೂ ಉತ್ತಮವಾಗಿ ಆಟವಾಡಿದ್ದಾರೆ'' ಎಂದು ಪಾಂಟಿಂಗ್ ಅಭಿಪ್ರಾಯ ಪಟ್ಟಿದ್ದಾರೆ.

ಸೂರ್ಯಕುಮಾರ್ ಇನ್ನಿಂಗ್ಸ್ ನನ್ನನ್ನು ಬೆಚ್ಚಿಬೀಳಿಸಿದೆ ಎಂದ ವಿರಾಟ್ ಕೊಹ್ಲಿ: ವಿಶೇಷ ಸಂದರ್ಶನದ Video

160 ಸ್ಟ್ರೈಕ್‌ರೇಟ್ ಹೊಂದಿರುವ ಡೇವಿಡ್

160 ಸ್ಟ್ರೈಕ್‌ರೇಟ್ ಹೊಂದಿರುವ ಡೇವಿಡ್

ದೇಶೀಯ ಕ್ರಿಕೆಟ್‌ನಲ್ಲಿ 160 ಸ್ಟ್ರೈಕ್‌ರೇಟ್ ಹೊಂದಿರುವ ಟಿಮ್ ಡೇವಿಡ್‌, ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಹೊಸ ಆಯಾಮವನ್ನ ಸೃಷ್ಟಿಸಬಲ್ಲ ಆಟಗಾರನಾಗಿದ್ದಾನೆ. 6.2 ಅಡಿವುಳ್ಳ 100 ಕೆಜಿ ತೂಕದ ಟಿಮ್ ಡೇವಿಡ್ ವಿಶ್ವದ ಯಾವುದೇ ಕ್ರೀಡಾಂಗಣದಲ್ಲಿ ಬೃಹತ್ ಸಿಕ್ಸರ್ ಸಿಡಿಸಬಲ್ಲ ಸಾಮರ್ಥ್ಯ ಹೊಂದಿದ್ದಾನೆ. ಆತ ಉತ್ತಮ ಫೀಲ್ಡರ್ ಆಗಿದ್ದು, ಕೆಲವು ಓವರ್‌ಗಳನ್ನ ಬೌಲಿಂಗ್ ಮಾಡಬಲ್ಲ ಸಾಮರ್ಥ್ಯವನ್ನ ಸಹ ಹೊಂದಿದ್ದಾನೆ. ಹೀಗಾಗಿ ಆತ ಮೂರು ದಿಕ್ಕಿನಿಂದಲೂ ಉತ್ತಮ ಆಟಗಾರನಾಗಿದ್ದಾನೆ ಎಂದು ರಿಕಿ ಪಾಂಟಿಂಗ್ ಹೊಗಳಿದ್ದಾರೆ.

ಉಳಿದವರಿಗೆ ಹೆಚ್ಚು ಅವಕಾಶ ದೊರೆಯುವಾಗ ಕೆಎಲ್ ರಾಹುಲ್‌ಗೆ ಯಾಕೆ ಸಿಗಬಾರದು?: ಗವಾಸ್ಕರ್

ಮುಂಬೈ ಇಂಡಿಯನ್ಸ್‌ 8.5 ಕೋಟಿ ರೂಪಾಯಿಗೆ ಹರಾಜಾದ ಟಿಮ್ ಡೇವಿಡ್

ಮುಂಬೈ ಇಂಡಿಯನ್ಸ್‌ 8.5 ಕೋಟಿ ರೂಪಾಯಿಗೆ ಹರಾಜಾದ ಟಿಮ್ ಡೇವಿಡ್

ಇದೇ ವರ್ಷ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ 15ನೇ ಸೀಸನ್‌ನಲ್ಲಿ ಟಿಮ್ ಡೇವಿಡ್ ಅವರನ್ನು ಮುಂಬೈ ಇಂಡಿಯನ್ಸ್ 8.25 ಕೋಟಿ ರೂಪಾಯಿಗೆ ಖರೀದಿಸಿತು. ನಂತರ ಮುಂಬೈ ಡೇವಿಡ್‌ಗೆ ಅವಕಾಶ ನೀಡುವ ಹೊತ್ತಿಗೆ ಅದಾಗಲೇ ಅರ್ಧ ಅವದಿ ಮುಕ್ತಾಯಗೊಂಡಿತ್ತು. ಲೀಗ್‌ನ ಮೊದಲಾರ್ಧದಲ್ಲಿ ಅವರಿಗೆ ನ್ಯಾಯಯುತ ಅವಕಾಶವನ್ನು ನೀಡದಿರುವುದು ಮುಂಬೈ ಮ್ಯಾನೇಜ್‌ಮೆಂಟ್‌ನ ತಪ್ಪು ಎಂದು ಟಿಮ್ ಡೇವಿಡ್‌ ಸಾಬೀತುಪಡಿಸಿದ್ರು.

ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಸ್ಕ್ವಾಡ್

ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಸ್ಕ್ವಾಡ್

ಆ್ಯರೋನ್ ಫಿಂಚ್ (ನಾಯಕ), ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ಜೋಶ್ ಹೇಜಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯ್ನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆ್ಯಡಮ್ ಝಂಪಾ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 1, 2022, 19:43 [IST]
Other articles published on Sep 1, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X