ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ನಜಮ್ ಸೇಥಿ ಅವರು ಯುಎಇಯಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧಿಕಾರಿಗಳನ್ನು ಭೇಟಿ ಮಾಡಿದರು ಮತ್ತು ಏಷ್ಯಾ ಕಪ್ 2023ರ ಕುರಿತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿಯೂ ಆಗಿರುವ ಎಸಿಸಿ ಅಧ್ಯಕ್ಷ ಜಯ್ ಶಾ ಅವರನ್ನು ಭೇಟಿ ಮಾಡಲು ಬಯಸಿದ್ದಾರೆ ಎಂದು ಮೂಲಗಳ ತಿಳಿಸಿವೆ.
ಪಾಕಿಸ್ತಾನ ಆತಿಥ್ಯ ವಹಿಸಲಿರುವ 2023ರ ಆವೃತ್ತಿಯ ಏಷ್ಯಾ ಕಪ್ ಪಂದ್ಯಾವಳಿಯನ್ನು ದೇಶದಿಂದ ಹೊರಗೆ ಹೋಗದಂತೆ ನೋಡಿಕೊಳ್ಳುವಲ್ಲಿ ನಜಮ್ ಸೇಥಿ ಎಲ್ಲಾ ರೀತಿಯಿಂದ ಪ್ರಯತ್ನಿಸುತ್ತಿದ್ದಾರೆ. ಆದರೆ, ಈ ಮೊದಲು ಏಷ್ಯಾ ಕಪ್ ಪಂದ್ಯಾವಳಿಯನ್ನು ತಟಸ್ಥ ಸ್ಥಳದಲ್ಲಿ ನಡೆಸಲಾಗುವುದು ಎಂದು ಕಳೆದ ವರ್ಷ ಜಯ್ ಶಾ ಹೇಳಿದ್ದರು.
ನಜಮ್ ಸೇಥಿ ಅವರು ಇಂಟರ್ನ್ಯಾಷನಲ್ ಲೀಗ್ ಟಿ20 ಉದ್ಘಾಟನಾ ಸಮಾರಂಭಕ್ಕಾಗಿ ದುಬೈಗೆ ಬಂದಿದ್ದರು. ಇದೇ ವೇಳೆ ಎಸಿಸಿ ಅಧಿಕಾರಿಗಳನ್ನು ಭೇಟಿ ಮಾಡಿದ ಸೇಥಿ, ಏಷ್ಯಾ ಕಪ್ 2023ರ ಚರ್ಚೆಗಾಗಿ ಫೆಬ್ರವರಿಯಲ್ಲಿ ಅಧ್ಯಕ್ಷ ಜಯ್ ಶಾ ಅವರನ್ನು ಭೇಟಿ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.
U-19 Women's World Cup 2023: ಶಫಾಲಿ, ಶ್ವೇತಾ ಭರ್ಜರಿ ಬ್ಯಾಟಿಂಗ್; ಯುಎಇ ಮಣಿಸಿದ ಭಾರತ
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪಿಸಿಬಿ ಮಾಜಿ ಮುಖ್ಯಸ್ಥ ರಮೀಜ್ ರಾಜಾ ಅವರು, ಭಾರತ ತಂಡವು ಏಷ್ಯಾಕಪ್‌ಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸದಿದ್ದರೆ ಅಥವಾ ಆತಿಥ್ಯದ ಹಕ್ಕನ್ನು ಹಿಂತೆಗೆದುಕೊಂಡರೆ ಪಾಕಿಸ್ತಾನ ತಂಡವು ವಿಶ್ವಕಪ್ 2023ರಿಂದ ಹಿಂದೆ ಸರಿಯುವುದನ್ನು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ನಂತರ ರಾವಲ್ಪಿಂಡಿಯಲ್ಲಿ ನಡೆದ ಪಾಕಿಸ್ತಾನ ಮತ್ತು ಇಂಗ್ಲೆಂಡ್ ಟೆಸ್ಟ್‌ನ ಸಮಯದಲ್ಲಿ ಇಎಸ್‌ಪಿಎನ್ ಕ್ರಿಕ್‌ಇನ್‌ಫೋನೊಂದಿಗೆ ರಮಿಜ್ ರಾಜಾ ಅವರು "ನಾವು ಆತಿಥ್ಯದ ಹಕ್ಕುಗಳನ್ನು ಹೊಂದಿಲ್ಲ ಮತ್ತು ಏಷ್ಯಾ ಕಪ್ ಆತಿಥ್ಯ ವಹಿಸಲು ನಾವು ಮನವಿ ಮಾಡುತ್ತಿದ್ದೇವೆ' ಎಂದು ರಮಿಜ್ ರಾಜಾ ತಿಳಿಸಿದ್ದರು.
ಭಾರತ ತಂಡಕ್ಕೆ ಹಿಂದಿರುಗಿದ ನಂತರ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ರವೀಂದ್ರ ಜಡೇಜಾ
ಅನಂತರ ಭಾರತವು ಎಲ್ಲಾ ತಂಡಗಳೊಂದಿಗೆ 2023ರ ವಿಶ್ವಕಪ್‌ಗೆ ಆತಿಥ್ಯ ವಹಿಸಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದನ್ನು ಸ್ಮರಿಸಬಹುದು.