ಎಬಿಡಿ ತ್ವರಿತ ಶತಕ ದಾಖಲೆ ಮುರಿಯುತ್ತೇನೆ: ಅಫ್ರಿದಿ

Posted By:

ಕರಾಚಿ, ಜ.21: ಏಕದಿನ ಕ್ರಿಕೆಟ್ ನಿಂದ ರಿಟೈರ್ ಆಗೋ ಹಂತದಲ್ಲಿರುವ ಒಂದು ಕಾಲದ ಸ್ಫೋಟಕ ಆಟಗಾರ ಪಾಕಿಸ್ತಾನದ ಶಹೀದ್ ಆಫ್ರಿದಿ ಅವರು ಎಬಿ ಡಿ ವಿಲೆಯರ್ಸ್ ದಾಖಲೆ ಮುರಿಯುತ್ತಾರಂತೆ. ನ್ಯೂಜಿಲೆಂಡ್ ಸರಣಿ ಹಾಗೂ ವಿಶ್ವಕಪ್ ಟೂರ್ನಿ ವೇಳೆಯಲ್ಲಿ ಈ ವಿಕ್ರಮ ಸಾಧಿಸುವ ಆಸೆ ಇಟ್ಟುಕೊಳ್ಳಿ ಎಂದು ತಮ್ಮ ಅಭಿಮಾನಿಗಳಿಗೆ ಹೇಳಿದ್ದಾರೆ.

ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಐಸಿಸಿ ವಿಶ್ವಕಪ್ 2015 ಟೂರ್ನಿ ನಂತರ ಅಫ್ರಿದಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳುತ್ತಿದ್ದಾರೆ. ಅದರೆ, ಟಿ20 ಪಂದ್ಯಗಳನ್ನಾಡುತ್ತಾರೆ.

Will try to break De Villiers' 31-ball 100 record at World Cup: Shahid Afridi

ನನಗೆ ದಾಖಲೆಗಳ ಬಗ್ಗೆ ಅಂಥ ಆಸಕ್ತಿ ಏನಿಲ್ಲ. ಅದು ಆಕಸ್ಮಿಕವಾಗಿ ಕಾಲ ಕೂಡಿ ಬಂದಾಗ ಆಗುತ್ತದೆ. ಆ ದಿನ ನಿಮ್ಮ ದಾಗಿರಬೇಕು ಅಷ್ಟೇ. ನಿಮ್ಮ ಮೇಲೆ ನಿಮಗೆ ನಂಬಿಕೆ, ಅದೃಷ್ಟದ ಸಾಥ್ ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಎಲ್ಲವೂ ಸರಿಯಾಗಿ ಸಿದ್ದಿಸಿದರೆ ನಾನು ನನ್ನ ಬ್ಯಾಟಿಂಗ್ ಇನ್ನಷ್ಟು ಅಭಿವೃದ್ಧಿಪಡಿಸಿಕೊಂಡು ಎಬಿ ಡಿ ವಿಲೆಯರ್ಸ್ ದಾಖಲೆಯನ್ನು ಮುರಿಯಬಲ್ಲೆ ಎಂದಿದ್ದಾರೆ.

ಅಫ್ರಿದಿ ಅವರು ಶ್ರೀಲಂಕಾ ವಿರುದ್ಧ ನೈರೋಬಿಯಲ್ಲಿ 37 ಎಸೆತಗಳಲ್ಲಿ 102 ರನ್ ಗಳಿಸಿ ಏಕದಿನ ಕ್ರಿಕೆಟ್ ನಲ್ಲಿ ತ್ವರಿತ ಗತಿಯಲ್ಲಿ ಶತಕ ದಾಖಲಿಸಿದ್ದರು. ಈ ದಾಖಲೆ 17 ವರ್ಷಗಳ ನಂತರ 2013ರಲ್ಲಿ ಮುರಿಯಲ್ಪಟ್ಟಿತು. ಕ್ವೀನ್ಸ್ ಟೌನ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನ್ಯೂಜಿಲೆಂಡ್ ಆಟಗಾರ ಕೋರೆ ಆಂಡರ್ಸನ್ 36 ಎಸೆತಗಳಲ್ಲೇ ನೂರರ ಗಡಿ ದಾಟಿದ್ದರು. ಈಗ ವೆಸ್ಟ್ ಇಂಡೀಸ್ ವಿರುದ್ಧವೇ ಕಳೆದ ವಾರ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲೆಯರ್ಸ್ 31 ಎಸೆತಗಳಲ್ಲಿ ಶತಕ ಗಳಿಸಿದರು.

2005ರಲ್ಲಿ ಕಾನ್ಪುರದಲ್ಲಿ ಭಾರತ ವಿರುದ್ಧ 45 ಎಸೆತಗಳಲ್ಲಿ ಶತಕ ಗಳಿಸಿದ್ದ ಅಫ್ರಿದಿ ಅವರ ಪ್ರಕಾರ ಇನ್ಮುಂದೆ ಏಕದಿನ ಕ್ರಿಕೆಟ್ ನಲ್ಲಿ 400 ಅಧಿಕ ರನ್ ಗಳಿಸುವುದು ಮಾಮೂಲಿ ಸಂಗತಿಯಾಗತ್ತಂತೆ. ಕಳೆದ ಕೆಲ ವರ್ಷಗಳಿಂದ ಏಕದಿನ ಕ್ರಿಕೆಟ್ ನಲ್ಲಿ ನಿಯಮಗಳನ್ನು ಬದಲಾಯಿಸಿರುವುದರಿಂದ 350 ಪ್ಲಸ್ ರನ್ ಗಳಿಕೆ ಸಾಧ್ಯವಾಗಿದೆ. ಟಿ 20 ಕ್ರಿಕೆಟ್ ಜನಪ್ರಿಯತೆಯೂ ಇದಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. (ಪಿಟಿಐ)

Story first published: Wednesday, January 21, 2015, 19:07 [IST]
Other articles published on Jan 21, 2015

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ